Kannada News: ಶ್ರೀ ಲೀಲಾ, ರಶ್ಮಿಕಾ ನಂತರ ತೆಲುಗಿಗೆ ಎಂಟ್ರಿ ಕೊಟ್ಟ ಕನ್ನಡದ ಮತ್ತೊಬ್ಬರು ಅಪ್ಸರೆ: ಈಕೆಯು ಹೋದರೆ ಕನ್ನಡದಲ್ಲಿ ಯಾರು ಉಳಿಯುತ್ತಾರೆ?? ಯಾರು ಗೊತ್ತೇ?

Kannada News: ಈಗ ತೆಲುಗು ಚಿತ್ರರಂಗದಲ್ಲಿ ಕನ್ನಡತಿಯರದ್ದೇ ಹವಾ ಎಂದು ಹೇಳಬಹುದು. ಈಗ ಪ್ಯಾನ್ ಇಂಡಿಯಾ ಟ್ರೆಂಡ್ ಕೂಡ ಶುರು ಆಗಿರುವುದರಿಂದ ಎಲ್ಲರೂ ಎಲ್ಲಾ ಭಾಷೆಯಲ್ಲು ನಟಿಸುತ್ತಿದ್ದಾರೆ. ಈಗ ಕನ್ನಡದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಇವರೆಲ್ಲರೂ ಕೂಡ ತೆಲುಗು ಚಿತ್ರರಂಗದಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಅದೇ ಸಾಲಿಗೆ ಕನ್ನಡದ ಮತ್ತೊಬ್ಬ ನಟಿ ಸೇರ್ಪಡೆಯಾಗಲಿದ್ದಾರೆ, ಆ ನಟಿ ಮತ್ಯಾರು ಅಲ್ಲ, ಕೆಜಿಎಫ್ ಕೋಟೆಯ ರಾಣಿ ಶ್ರೀನಿಧಿ ಶೆಟ್ಟಿ ಅವರು.

ಕೆಜಿಎಫ್ 1 ಮತ್ತು ಕೆಜಿಎಫ್2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀನಿಧಿ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಇಂದು ಬಹಳ ಫೇಮಸ್ ಆಗಿದ್ದಾರೆ. ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ. ಇವರು ನಟಿಸಿದ ಮೂರನೇ ಸಿನಿಮಾ ತಮಿಳಿನ ಸ್ಟಾರ್ ನಟ ವಿಕ್ರಂ ಅವರ ಜೊತೆಗೆ ಕೋಬ್ರಾ ಸಿನಿಮಾ ಆ ಸಿನಿಮಾ ಅಷ್ಟೇನು ಯಶಸ್ಸು ಕಾಣದ ಕಾರಣದಿಂದ ಶ್ರೀನಿಧಿ ಅವರಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಇದೀಗ ಶ್ರೀನಿಧಿ ಶೆಟ್ಟಿ ಅವರು ಮೂರನೇ ಸಿನಿಮಾ ಸೈನ್ ಮಾಡಿದ್ದಾರೆ. ಇದನ್ನು ಓದಿ..Kannada News: ಚಿಕ್ಕ ಹುಡುಗಿ ಚಿಕ್ಕ ಹುಡುಗಿಯ ರೀತಿ ಇರು, ನೀನು ಆ ರೇಂಜ್ ನಲ್ಲಿ ರೊಚ್ಚಿಗೆದ್ದರೆ, ಹುಡುಗರಿಗೆ ಕಂಟ್ರೋಲ್ ಮಾಡಿಕೊಳ್ಳಲು ಕಷ್ಟ. ನಟಿಗೆ ಮನಸೋತ ನೆಟ್ಟಿಗರು.

kannada news srinidhi shetty telugu movie Kannada News:

ಅದು ತೆಲುಗಿನಲ್ಲಿ, ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ. ವಿಕ್ಟರಿ ವೆಂಕಟೇಶ್ ಅವರು ಬಹಳ ದಿನಗಳ ನಂತರ ಒಂದು ಮಾಸ್ ಸಿನಿಮಾ ಒಪ್ಪಿಕೊಂಡಿದ್ದಾರೆ ಆ ಸಿನಿಮಾ ಹೆಸರು ಸೈಂಧವ, ಈ ಸಿನಿಮಾವನ್ನು ಶೈಲೇಶ್ ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಶ್ರೀನಿಧಿ ಅವರು ಓಕೆ ಹೇಳಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಕನ್ನಡದ ನಟಿಯರೆಲ್ಲಾ ತೆಲುಗಿಗೆ ಹೊರಟು ಹೋದರೆ, ಕನ್ನಡದಲ್ಲಿ ಉಳಿಯುವವರು ಯಾರು ಎನ್ನುವ ಪ್ರಶ್ನೆ ಶುರುವಾಗಿದೆ. ಇದನ್ನು ಓದಿ..Kannada News: ಲೈವ್ ಗೆ ಬಂದು ಕಣ್ಣೀರು ಹಾಕಿದ ತೆಲುಗು ನಿರೂಪಕಿ: ಅಲ್ಲಿ ಆಕೆಗೆ ಎಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ ಗೊತ್ತೇ? ತೆಲುಗಿನ ಕರಾಳ ಲೋಕದಲ್ಲಿ ಏನಾಗಿದೆ ಗೊತ್ತೇ??

Comments are closed.