Kannada News: ವಿಷ್ಣು ಸ್ಮಾರಕ ನಿರ್ಮಾಣವಾದ ಬೆನ್ನಲ್ಲೇ, ಇಂದು ಮತ್ತೊಮ್ಮೆ ವಿವಾದ ಸೃಷ್ಟಿ ಮಾಡಿದ ಅಹಿಂಸಾ ಚೇತನ್; ಕೆಲವರು ಸರಿ ಎಂದರೆ, ವಿಷ್ಣು ಅಭಿಮಾನಿಗಳು ಗರಂ ಆಗಿದ್ದು ಯಾಕೆ ಗೊತ್ತೇ?

Kannada News: ಚಂದನವನದ ನಟ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ನಟ ಚೇತನ್ ಕುಮಾರ್ ಅವರು ಹಲವು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಇದೀಗ ಚೇತನ್ ಅವರು ಸಿನಿಮಾ ನಟರ ಸ್ಮಾರಕಕ್ಕೆ ಸರ್ಕಾರದ ಜಾಗ ಹಾಗೂ ಸಾರ್ವಜನಿಕರ ಹಣವನ್ನು ಸರ್ಕಾರ ನೀಡಬಾರದು ಎನ್ನುವ ಹೇಳಿಕೆ ನೀಡಿ ಸುದ್ದಿಯಾಗಿದ್ದು, ಈ ಮಾತಿನ ಬಗ್ಗೆ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿದೆ. ಅಷ್ಟೇ ಅಲ್ಲದೆ, ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ಚೇತನ್ ಅವರ ಈ ಹೇಳಿಕೆಯಿಂದ ಗರಂ ಆಗಿದ್ದಾರೆ..

ಮೊನ್ನೆಯಷ್ಟೇ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆಯಾಗಿದೆ, 13 ವರ್ಷ ಕಷ್ಟಪಟ್ಟ ನಂತರ ಈ ಕಾರ್ಯ ನಡೆದಿದೆ. 2013ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ವಿಷ್ಣುವರ್ಧನ್ ಅವರ ಸ್ಮಾರಕದ ಶಂಕುಸ್ಥಾಪನೆ ನಡೆದಿತ್ತು, ಈಗ 10 ವರ್ಷಗಳ ನಂತರ ಉದ್ಘಾಟನೆಯಾಗಿದೆ. ಎರಡೂವರೆ ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದ್ದು, ಒಳಗೆ ಒಂದ್ ಮ್ಯೂಸಿಯಂ ಮಾಡಲಾಗಿದೆ, ಅದರಲ್ಲಿ ವಿಷ್ಣುವರ್ಧನ್ ಅವರ 600ಕ್ಕಿಂತ ಹೆಚ್ಚು ಫೋಟೋಗಳು, ಅವರು ಬಳಸುತ್ತಿದ್ದ ವಸ್ತುಗಳು, ಬಟ್ಟೆಗಳು ಎಲ್ಲವನ್ನು ಇಡಲಾಗಿದೆ. ಇದು ವಿಷ್ಣು ಅವರ ಅಭಿಮಾನಿಗಳ ಮತ್ತು ಕುಟುಂಬದ ಕನಸಾಗಿತ್ತು. ಇದನ್ನು ಓದಿ..Kannada News: ಲೈವ್ ಗೆ ಬಂದು ಕಣ್ಣೀರು ಹಾಕಿದ ತೆಲುಗು ನಿರೂಪಕಿ: ಅಲ್ಲಿ ಆಕೆಗೆ ಎಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ ಗೊತ್ತೇ? ತೆಲುಗಿನ ಕರಾಳ ಲೋಕದಲ್ಲಿ ಏನಾಗಿದೆ ಗೊತ್ತೇ??

kannada news chetan about vishnuvardhan smaraka Kannada News:

ಸ್ಮಾರಕದ ಉದ್ಘಾಟನೆ ನಡೆದ ಬಳಿಕ ಚೇತನ್ ಅವರು ನೀಡಿರುವ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. “ಚಲನಚಿತ್ರ ಸ್ಟಾರ್ಗಳು ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ, ಮತ್ತು ಸಂಪನ್ಮೂಲಗಳನ್ನು ಬಳಸಬಾರದು. ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ಸ್ಟಾರ್ಗಳು, ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಪಡೆಯುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ..” ಎಂದು ಟ್ವೀಟ್ ಮಾಡಿದ್ದಾರೆ ನಟ ಚೇತನ್ ಅಹಿಂಸಾ. ಇದನ್ನು ಓದಿ..Kannada News: ಶ್ರೀ ಲೀಲಾ, ರಶ್ಮಿಕಾ ನಂತರ ತೆಲುಗಿಗೆ ಎಂಟ್ರಿ ಕೊಟ್ಟ ಕನ್ನಡದ ಮತ್ತೊಬ್ಬರು ಅಪ್ಸರೆ: ಈಕೆಯು ಹೋದರೆ ಕನ್ನಡದಲ್ಲಿ ಯಾರು ಉಳಿಯುತ್ತಾರೆ?? ಯಾರು ಗೊತ್ತೇ?

Comments are closed.