Relationship: ಇದೆಂತಹ ಲವ್ ಸ್ಟೋರಿ ಯಪ್ಪಾ: ಮದುವೆಯಾಗಿ ಮೂರು ತಿಂಗಳು ಆದಮೇಲೆ ಹೆಂಡತಿ ಹೇಳಿದ್ದೇನು ಗೊತ್ತೆ? ಶಾಕ್ ಆದ ನೆಟ್ಟಿಗರು

Relationship: ನಾನು ದುಬೈನಲ್ಲಿ ಇದ್ದಾಗ ಲೈಫ್ ನಲ್ಲಿ ಎಂಜಾಯ್ ಮಾಡಬೇಕು ಎಂದು ಆಸೆಪಟ್ಟಿದ್ದೆ. ಕಳೆದ ವರ್ಷ ಅಜ್ಜಿ ಮನೆಗೆ ಹೋಗುವ ಸಲುವಾಗಿ ಭೋಪಾಲ್ ಗೆ ಹೋದೆ. ಆಗ ನಾನು OkCupid ಗೆ ಸೇರಿಕೊಂಡೆ. ನನಗೆ ಅದರ ಬಗ್ಗೆ ಹೆಚ್ಚು ಗೊತ್ತಿಲ್ಲದ ಕಾರಣ ಯಾರ ಜೊತೆಗೆ ಮಾತನಾಡುವುದು ಒಳ್ಳೆಯದು ಎಂದು ಯೋಚಿಸುತ್ತಿದ್ದೆ. ಆಗ ಶೆಹಬಾಜ್ ಎನ್ನುವ ವ್ಯಕ್ತಿಯ ಪ್ರೊಫೈಲ್ ನೋಡಿ ನನಗೆ ಕುತೂಹಲ ಹೆಚ್ಚಾಯಿತು. ಅವರಿ ಮದುವೆಯ ಸಂಬಂಧಕ್ಕಾಗಿ ಹುಡುಕುತ್ತಿದ್ದಾರೆ ಎಂದು ನೋಡಿದರೆ ಗೊತ್ತಾಯಿತು. ಅವರು ಕೂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಪರಿಚಯ ಆಗಿದ್ದು ಈ ರೀತಿಯಾಗಿ. ನಾವಿಬ್ಬರು ಚಾಟ್ ಮಾಡುವುದಕ್ಕೆ ಶುರು ಮಾಡಿದ್ವಿ, ಅವರಿಗೆ ಊಟ ಅಂದ್ರೆ ತುಂಬಾ ಇಷ್ಟ ಎಂದು ನನಗೆ ಗೊತ್ತಾಯ್ತು.

ಇದರಿಂದ ನಾನು, ನನ್ನ ಕೈಯಾರೆ ತಯಾರಿಸಿದ ಊಟ ತಿಂಡಿಗಳ ಫೋಟೋ ತೆಗೆದು ಕಳಿಸುತ್ತಿದ್ದೆ, ಆಗ ಅವರು ಭಾರತದ ಊಟವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಈ ಥರ ನಾವು ಚೆನ್ನಾಗಿಯೇ ಇದ್ದೆವು. ಲಾಕ್ ಡೌನ್ ಶುರು ಆಗುವುದಕ್ಕಿಂತ ಮೊದಲು ನಾನು ದುಬೈ ಗೆ ಹೋದೆ, ಆಗ ನಾನು ದುಬೈಗೆ ವಾಪಸ್ ಬಂದಿರುವ ವಿಷಯವನ್ನು ಅವರಿಗೆ ಹೇಳಿದೆ. ಆ ದಿನ ಸಂಜೆ ವಿಡಿಯೋ ಕಾಲ್ ನಲ್ಲಿ ಇಬ್ಬರು ಮಾತನಾಡಿದೆವು, ಮರುದಿನ ನಾನು ಕೆಲಸ ಮಾಡುತ್ತಿದ್ದ ಜಾಗದಿಂದ ನನ್ನನ್ನು ಹೊರಗಡೆ ಕರೆದುಕೊಂಡು ಹೋಗಬೇಕು ಎಂದು ಒತ್ತಾಯ ಮಾಡಿದರು. ಅವರ ಆಫೀಸ್ ಇಂದ ನನ್ನ ಆಫೀಸ್ ಗೆ 2.5 ಗಂಟೆಗಳ ಡ್ರೈವ್ ಆಗಿತ್ತು. ನನಗೆ ಸ್ವಲ್ಪ ಭಯ ಆಗಿತ್ತು, ಅವರು ಕೂಲ್ ಆಗಿದ್ದರು. ಹೇಳಿದ ಹಾಗೆ ನನ್ನನ್ನು ಬಂದು ಪಿಕ್ ಮಾಡಿದರು, ಎಲ್ಲಾ ಥರದಲ್ಲಿ ಚೆನ್ನಾಗಿ ನೋಡಿಕೊಂಡರು. ಅವರ ಜೊತೆಗೆ ನಾನು ತುಂಬಾ ಸಂತೋಷವಾಗಿದ್ದೆ, ಬೇರೆ ಹುಡುಗರ ಥರ ಇರದೇ ಇವರು ತುಂಬಾ ನೇರವಾಗಿ ಮಾತನಾಡುವ ಸ್ವಭಾವದವರಾಗಿದ್ದರು. ಇದನ್ನು ಓದಿ..Relationship: ಯಾವುದೇ ಪುರುಷ ಹಾಗೂ ಮಹಿಳೆ ಕೇವಲ ಸ್ನೇಹಿತರಾಗಲು ಸಾಧ್ಯವಿಲ್ಲ ಯಾಕೆ ಗೊತ್ತೇ? ಅದೆಂತಹ ಸ್ನೇಹವೇ ಇರಲಿ ಕೊನೆಗೆ ಏನಾಗಲಿದೆ ಗೊತ್ತೇ??

relationship coup wom 31 Relationship:

ಆ ದಿನದ ನಂತರ ಪ್ರತಿದಿನ ನನ್ನನ್ನು ನೋಡಲು ಬರುತ್ತಿದ್ದೇ, ಆಗ ನಾನು ಕೆಲಸದಲ್ಲಿ ಇರುತ್ತಿದ್ದೆ, ಆದರೆ ಅವನ ಮಾತುಗಳನ್ನು ಕೇಳಿ ಶಾಂತವಾಗುತ್ತಿದ್ದೆ.. ಒಂದು ಸಾರಿ ನಾನು ಇಂಟರ್ವ್ಯೂಗೆ ಹೋಗಬೇಕಿದ್ದಾಗ, ಅವರೇ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ, ಇಂಟರ್ವ್ಯೂ ಮುಗಿಯುವವರೆಗೂ ಅಲ್ಲೇ ಇದ್ದರು, ಬಳಿಕ ನನ್ನನ್ನು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋದರು. ನನಗೆ ನಿನ್ನನ್ನು ಕಂಡ್ರೆ ತುಂಬಾ ಇಷ್ಟ, ನಿನ್ನನ್ನು ಮದುವೆ ಆಗಲು ಇಷ್ಟಪಡುತ್ತೇನೆ ಎಂದರು. ಆಗ ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ನನಗೂ ಅವರ ಮೇಲೆ ಪ್ರೀತಿ ಇದೆ ಎಂದು ಹೇಳಿದೆ. ನಮ್ಮಿಬ್ಬರ ಪರಿಚಯವಾಗಿ ಕೇವಲ 1 ತಿಂಗಳು ಆಗಿತ್ತು ಅಷ್ಟೇ.

ನಾನು ಈ ವಿಚಾರದ ಬಗ್ಗೆ ನನ್ನ ತಾಯಿ ಜೊತೆಗೆ ಮಾತನಾಡಿ ಅಂತ ಹೇಳಿದೆ. ಮರುದಿನವೇ ಅವರು ನನ್ನ ಮನೆಯವರನ್ನು ಭೇಟಿ ಮಾಡಿದರು, ಆ ವಿಚಾರ ನನಗೆ ಗೊತ್ತಾಗುವ ಮೊದಲೇ ಮದುವೆ ಆಗುವುದು ಯಾವ ದಿನ ಎಂದು ಚರ್ಚೆ ಮಾಡುತ್ತಿದ್ದರು. ಎರಡು ತಿಂಗಳ ನಂತರ ನಮಗೆ ಸಿಂಪಲ್ ಆಗಿ ರಿಜಿಸ್ಟರ್ಡ್ ಮ್ಯಾರೇಜ್ ಆಯಿತು. ಪ್ರೀತಿಯಲ್ಲಿ ಯಾವುದೇ ಮಾತುಗಳನ್ನು ಹೇಳಬೇಕಾಗಿ ಇರಲಿಲ್ಲ, ನಾನು ಅವರನ್ನು ಪ್ರೀತಿಸುತ್ತಿದ್ದೆ. ನಮ್ಮ ಮದುವೆಯಾಗಿ ಮೂರು ತಿಂಗಳು ಕಳೆಯಿತು. ನಾವು ಪ್ರತಿದಿನ ಹೊರಗೆ ಹೋಗುತ್ತೇವೆ, ಈಗ ಹೋಗೋದು ಗಂಡ ಮತ್ತು ಹೆಂಡತಿಯಾಗಿ. ನಾನು ಅವರಿಗೆ ಇಂದಿಗೂ ಐ ಲವ್ ಯೂ ಎಂದು ಹೇಳಿಲ್ಲ. ಹೇಳುವ ಅಗತ್ಯ ಕೂಡ ಇಲ್ಲ. ಏಕೆಂದರೆ ಈಗ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಗಂಡ ಹೆಂಡತಿ ಆಗಿದ್ದೇವೆ. ಈ ಸ್ಟೋರಿ ಕೇಳಿದ ನೆಟ್ಟಿಗರು ಐ ಲವ್ ಯೂ ಎಂದು ಹೇಳದೆ ಇರೋದಕ್ಕೆ ಹೇಗೆ ಸಾಧ್ಯ ಎಂದು ಶಾಕ್ ಆಗುತ್ತಿದ್ದಾರೆ. ಇದನ್ನು ಓದಿ..Relationship: ನಿಜವಾದ ಪ್ರೀತಿಯು ಎಂದಿಗೂ ಸಾಯುವುದಿಲ್ಲ ಎಂದು ಹೇಳುವುದು ಯಾಕೆ ಗೊತ್ತೇ? ನಿಜಕ್ಕೂ ಜೀವನ ಪೂರ್ತಿ ಇರುತ್ತದೆಯೇ??

Comments are closed.