Cricket News: ಕಿಂಗ್ ಕೊಹ್ಲಿ ರವರ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಶುಭಮ್ ಗಿಲ್; ಕಿಂಗ್ ಕೂಡ ಲೆಕ್ಕಕ್ಕೆ ಇಲ್ಲವೇ? ಭಾರತ ತಂಡಕ್ಕೆ ಹೊಸ ಆಧಾರ?

Cricket News: ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಟಿ20 ಮೂರನೇ ಪಂದ್ಯ ನಿನ್ನೆಯಷ್ಟೇ ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ, ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ ಯುವ ಆಟಗಾರ ಶುಬ್ಮನ್ ಗಿಲ್ (Shubhman Gill). ಗಿಲ್ ಅವರು ಈಗ ಕಿಂಗ್ ಕೊಹ್ಲಿ ಅವರ ದಾಖಲೆಯನ್ನು ಸಹ ಮುರಿದು ಹಾಕಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಓಪನರ್ ಆಗಿ ಟೀಮ್ ಇಂಡಿಯಾ (Team India) ಪರವಾಗಿ ಆಡಲು ಬಂದ ಶುಬ್ಮನ್ ಗಿಲ್ ಶುರುವಿನಿಂದ ಕೂಡ ಭರದಿಂದ ರನ್ಸ್ ಗಳಿಸುತ್ತಲೇ ಇದ್ದರು.

ಶುಬ್ಮನ್ ಗಿಲ್ ಅವರು ಕೇವಲ 54 ಎಸೆತಗಳಲ್ಲಿ ಶತಕ ಸಿಡಿಸಿದರು, ಅಷ್ಟೇ ಅಲ್ಲದೆ 63 ಎಸೆತಗಳಲ್ಲಿ ಬರೋಬ್ಬರಿ 126 ರನ್ಸ್ ಗಳಿಸಿದರು. ಇದರಲ್ಲಿ 7 ಸಿಕ್ಸರ್ ಮತ್ತು 12 ಬೌಂಡರಿ ಇತ್ತು. ಗಿಲ್ ಅವರು ಈ ಮೂಲಕ ವಿರಾಟ್ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಟಿ20 ಪಂದ್ಯದಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನ್ನುವ ದಾಖಲೆ ವಿರಾಟ್ (Virat Kohli) ಅವರ ಮೇಲಿತ್ತು, ಕಳೆದ ವರ್ಷ ಏಷ್ಯಾಕಪ್ ನಲ್ಲಿ ಆಫ್ಘಾನಿಸ್ತಾನ್ ತಂಡದ ವಿರುದ್ಧ ಕೊಹ್ಲಿ ಅವರು 122 ರನ್ಸ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರು. ಆದರೆ ಶುಬ್ಮನ್ ಗಿಲ್ ಅವರು 126 ರನ್ಸ್ ಸ್ಕೋರ್ ಮಾಡಿ ವಿರಾಟ್ ಅವರನ್ನು ಹಿಂದಿಕ್ಕಿದ್ದಾರೆ. ಇದನ್ನು ಓದಿ..Cricket News: ಯಾರು ಕಾಣದಂತಹ ದುಬಾರಿ ಉಡುಗೊರೆಯನ್ನು ಪಡೆದ ರಾಹುಲ್: ಕೊಹ್ಲಿ, ಧೋನಿ, ಸಲ್ಮಾನ್ ಕೋಟಿ ಕೋಟಿ ಖರ್ಚು ಮಾಡಿ ಕೊಟ್ಟ ಉಡುಗೊರೆ ಏನು ಗೊತ್ತೇ??

cricket news shubman gill breaks kohli record kannada news Cricket News:

ಅಷ್ಟೇ ಅಲ್ಲದೆ, ಏಕದಿನ ಪಂದ್ಯದಲ್ಲಿ ಸಹ ಶುಬ್ಮನ್ ಗಿಲ್ ಅವರು ವಿರಾಟ್ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. ಓಡಿಐ ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ ನಲ್ಲಿ 1000 ದಾಖಲಿಸಿದ ದಾಖಲೆ ವಿರಾಟ್ ಕೋಹ್ಲಿ ಅವರ ಹೆಸರಲ್ಲಿದ್ದು, ವಿರಾಟ್ ಅವರು 24 ಇನ್ನಿಂಗ್ಸ್ ಗಳಲ್ಲಿ 1000 ರನ್ಸ್ ಪೂರ್ತಿ ಮಾಡಿದ್ದರು. ಆದರೆ ಶುಬ್ಮನ್ ಗಿಲ್ ಅವರು 19 ಓಡಿಐ ಇನ್ನಿಂಗ್ಸ್ ಗಳಲ್ಲಿ 1000 ರನ್ಸ್ ಪೂರ್ತಿ ಮಾಡಿ ಹೊಸ ದಾಖಲೆ ಬರೆದರು. ಈ ಮೂಲಕ ವಿರಾಟ್ ಅವರ ಹೆಸರಲ್ಲಿದ್ದ ಎರಡು ದಾಖಲೆಗಳನ್ನು ಶುಬ್ಮನ್ ಗಿಲ್ ಅಳಿಸಿ ಹಾಕಿದ್ದಾರೆ. ಇವರು ಟೀಮ್ ಇಂಡಿಯಾದ ಮುಂದಿನ ಭರವಸೆಯ ಆಟಗಾರ ಎನ್ನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದನ್ನು ಓದಿ..Cricket News: ಪದೇ ಪದೇ ವಿರಾಟ್ ಕೊಹ್ಲಿ ಯನ್ನು ಟಿ 20 ತಂಡದಿಂದ ತೆಗೆಯುತ್ತಿರುವುದಕ್ಕೆ ಕಾರಣ ನೀಡಿದ ದ್ರಾವಿಡ್. ಕಾರಣ ಕೇಳಿ ಅಭಿಮಾನಿಗಳು ಫುಲ್ ಗರಂ ಯಾಕೆ ಗೊತ್ತೆ??

Comments are closed.