Kannada News: ಕಾಂತಾರ ಸಿನಿಮಾ ನೋಡಿ ಬೆಚ್ಚಿ ಬಿದ್ದ ಸೋನು ಗೌಡ: ಎರಡು ವಾರ ಆಸ್ಪತ್ರೆಯಲ್ಲಿ ಇದ್ದದ್ದು ಯಾಕೆ ಗೊತ್ತೇ?? ಏನಾಗಿತ್ತು ಅಂತೇ ಗೊತ್ತೇ??
Kannada News: ಕಾಂತಾರ ಸಿನಿಮಾ ನಮ್ಮ ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ರಿಷಬ್ ಶೆಟ್ಟಿ ಅವರು ಕಥೆ ಬರೆದು, ನಿರ್ದೇಶನ ಮಾಡಿ, ನಟನೆ ಕೂಡ ಮಾಡಿರುವ ಕಾಂತಾರ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದೆ. 16 ಕೋಟಿ ಬಜೆಟ್ ನಲ್ಲಿ ತಯಾರಾದ ಕಾಂತಾರ ಸಿನಿಮಾ ಇಂದು 500 ಕೋಟಿ ಭರ್ಜರಿ ಕಲೆಕ್ಷನ್ ಮಾಡಿದೆ. ಹಾಗೆಯೇ ಓಟಿಟಿ ಮತ್ತು ಟಿವಿಯ ಟೆಲಿಕಾಸ್ಟ್ ನಲ್ಲಿ ಸಹ ದಾಖಲೆ ಬರೆದಿದೆ. ಕಾಂತಾರ ಸಿನಿಮಾ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ತೆರೆಕಂಡು, ಎಲ್ಲಾ ಭಾಷೆಯಲ್ಲೂ ಸಕ್ಸಸ್ ಆಗಿದೆ.
ಈ ಸಿನಿಮಾ ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ..ಆದರೆ ಬಿಗ್ ಬಾಸ್ ಓಟಿಟಿ ಖ್ಯಾತಿಯ ಸೋನು ಗೌಡ ಅವರಿಗೆ ಕಾಂತಾರ ಸಿನಿಮಾ ನೋಡಿ ಬೇರೆಯದೇ ಅನುಭವ ಆಗಿದೆ. ಈ ಬಗ್ಗೆ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ ಸೋನು ಗೌಡ. ಬಿಗ್ ಬಾಸ್ ಶೋ ಇಂದ ಹೊರಬಂದು ಮನೆಗೆ ಹೋದಮೇಲೆ ಸೋನು ಗೌಡ ರೆಸ್ಟ್ ಬೇಕು ಎಂದುಕೊಂಡಿದ್ದರಂತೆ, ಎಲ್ಲಿಗೂ ಹೋಗುವುದಕ್ಕೆ ಇಷ್ಟ ಆಗುತ್ತಿರಲಿಲ್ಲವಂತೆ. ಆದರೆ ಫ್ರೆಂಡ್ಸ್ ಎಲ್ಲರೂ ಕಾಂತಾರ ಸಿನಿಮಾ ಬಗ್ಗೆ ಹೇಳಿ, ಖಂಡಿತವಾಗಿ ಸಿನಿಮಾ ನೋಡಬೇಕು ಎಂದು ಹೇಳಿದ ಕಾರಣ ಅಕ್ಕನ ಜೊತೆಗೆ ಸಿನಿಮಾಗೆ ನೈಟ್ ಶೋಗೆ ಹೋದರಂತೆ ಸೋನು. ಮಂಗಳೂರು ಶೈಲಿಯ ಕನ್ನಡ ಆಗಿದ್ದ ಕಾರಣ ಶುರುವಿನಲ್ಲಿ ಏನು ಅರ್ಥ ಆಗಲಿಲ್ಲವಂತೆ. ಇದನ್ನು ಓದಿ..Kannada News: ದೇವಲೋಕದ ಅಪ್ಸರೆ ಕತ್ರಿನಾ ರವರನ್ನು ಮದುವೆಯಾದ ಒಂದೇ ವರ್ಷಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಗಂಡ ವಿಕ್ಕಿ. ಏನು ಹೇಳಿದ್ದಾರೆ ಗೊತ್ತೇ??

ಆದರೆ ಹೋಗ್ತಾ ಹೋಗ್ತಾ, ಅರ್ಥವಾಗಿ ಹಾಡನ್ನು ಎಂಜಾಯ್ ಮಾಡುತ್ತಿದ್ದ ಸೋನು ಕೊನೆಯ 20 ನಿಮಿಷ ನೋಡಿ, ವಾವ್ ಎಂದುಕೊಂಡಿದ್ದಾರೆ. ಸಿನಿಮಾ ನೋಡಿ ಮನೆಗೆ ಬಂದು ಮಲಗಿಕೊಂಡ ಸೋನುಗೆ ರಾತ್ರಿ ಎಲ್ಲ ಚಳಿ ಜ್ವರ ಶುರುವಾಗಿ, ಒಂದು ವಾರ ಮಂಡ್ಯದಲ್ಲಿ ಒಂದು ವಾರ ಬೆಂಗಳೂರಿನಲ್ಲಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರಂತೆ ಸೋನು. ಕಾಂತಾರ ಸಿನಿಮಾ ಅಷ್ಟರ ಮಟ್ಟಿಗೆ ಎಫೆಕ್ಟ್ ಮಾಡಿತ್ತು ಎಂದು ಹೇಳಿದ್ದಾರೆ. ಹಾಗೆಯೇ ಈಗ ಕಾಂತಾರ ಸಿನಿಮಾ ಓಟಿಟಿಗೆ ಬಂದಿದ್ದು, ಸೋನು ಅವರ ಅಕ್ಕ ಸಿನಿಮಾ ನೋಡುವಾಗ ಹುಷಾರು ಎಂದು ತಮಾಷೆ ಮಾಡಿದ್ದಾರಂತೆ. ಸಿನಿಮಾ ಬಗ್ಗೆ ಮಾತನಾಡಿದ ಸಿನಿಮಾಗಳಲ್ಲಿ ಗ್ರಾಫಿಕ್ಸ್ ಇರುತ್ತದೆ, ಈ ಸಿನಿಮಾ ಬಹಳ ಸಿಂಪಲ್ ಆಗಿ ಅದ್ಭುತವಾಗಿ ತೆಗೆದಿದ್ದಾರೆ ಎಂದಿದ್ದಾರೆ ಸೋನು. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿ ನಯನಾತಾರಾರವನ್ನು ಬಿಟ್ಟಿಲ್ಲವೇ??? ಆ ನಿರ್ದೇಶಕ ಅಂದು ಏನು ಮಾಡಿದ್ದಾನೆ ಗೊತ್ತೇ? ನಯನತಾರ ಸುಮ್ಮನೆ ಇದ್ದದ್ದು ಯಾಕೆ?
Comments are closed.