Kannada News: ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದರೆ ಆಗುವ ಲಾಭವೇನು ಗೊತ್ತೇ?? ಗಟ್ಟಿ ಸಂಸಾರದ ಗುಟ್ಟೇನೆ ಗೊತ್ತೇ??

Kannada News: ಮದುವೆ ಎನ್ನುವುದು ಎಲ್ಲರ ಜೀವನದಲ್ಲೂ ಬಹಳ ಸ್ಪೆಷಲ್. ತಮ್ಮ ಮದುವೆಯ ಬಗ್ಗೆ ಎಲ್ಲರೂ ಬಹಳ ಆಸೆ ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಈಗಿನ ಕಾಲದಲ್ಲಿ ಎಲ್ಲರೂ ಬಹಳ ತಡವಾಗಿ ಮದುವೆಯಾಗುತ್ತಾರೆ. ಜೀವನದಲ್ಲಿ ಸೆಟ್ಲ್ ಆಗಬೇಕು ಎನ್ನುವ ಕಾರಣಕ್ಕೆ ಲೇಟ್ ಆಗಿ ಮದುವೆಯಾಗುತ್ತಾರೆ. ಆದರೆ ಈ ರೀತಿ ಮಾಡುವುದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಆಗುವುದು ಒಳ್ಳೆಯದು, ಅದರಲ್ಲೂ 21 ರಿಂದ 25 ವಯಸ್ಸಿನ ಒಳಗೆ ಮದುವೆ ಆಗುವುದು ಒಳ್ಳೆಯದು. ಬೇಗ ಮದುವೆ ಆಗುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

*ಮೊದಲಿಗೆ ಈಗಾಗಲೇ ನಿಮಗೆ ನಿಮ್ಮ ಪಾರ್ಟ್ನರ್ ಸಿಕ್ಕಿದ್ದರೆ, ಹೆಚ್ಚು ತಡ ಮಾಡಬೇಡಿ, ಮುಂದಿನ ದಿನಗಳು ಹೇಗಿರುತ್ತದೆ ಎಂದು ಹೇಳಲು ಆಗುವುದಿಲ್ಲ. ಹಾಗಾಗಿ ಮದುವೆ ಮಾಡಿಕೊಂಡು ಅವರ ಜೊತೆಗೆ ಹೆಚ್ಚಿನ ಸಮಯ ಕಳೆಯಿರಿ. ಅವರ ಜೊತೆಗೆ ಲೈಫ್ ನಲ್ಲಿ ಸೆಟ್ಲ್ ಆದರೆ, ನಿಮ್ಮ ಜೀವನ ಇನ್ನಷ್ಟು ಚೆನ್ನಾಗಿರುತ್ತದೆ.
*ಲವರ್ಸ್ ಆಗಿ ಇರುವುದರಲ್ಲಿ ಮತ್ತು ದಂಪತಿಗಳಾಗಿ ಜೀವನ ನಡೆಸುವುದಕ್ಕೆ ಬಹಳ ವ್ಯತ್ಯಾಸ ಇದೆ. ಹಾಗಾಗಿ ನೀವು ಇಷ್ಟಪಟ್ಟವರನ್ನು ಮದುವೆಯಾದರೆ ಅವರೊಡನೆ ಬಹಳ ಆತ್ಮೀಯವಾದ ಮತ್ತು ಸಂತೋಷವಾದ ಜೀವನ ನಡೆಸಬಹುದು. ನಿಮ್ಮ ಸಂಗಾತಿಯ ಜೊತೆಗೆ ಎಲ್ಲಿಗೆ ಬೇಕಾದರು ಹೋಗಿಬರಬಹುದು. ಇದನ್ನು ಓದಿ..Relationship: ಇದೆಂತಹ ಲವ್ ಸ್ಟೋರಿ ಯಪ್ಪಾ: ಮದುವೆಯಾಗಿ ಮೂರು ತಿಂಗಳು ಆದಮೇಲೆ ಹೆಂಡತಿ ಹೇಳಿದ್ದೇನು ಗೊತ್ತೆ? ಶಾಕ್ ಆದ ನೆಟ್ಟಿಗರು

kannada news chikka maduve Kannada News:
Kannada News: ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದರೆ ಆಗುವ ಲಾಭವೇನು ಗೊತ್ತೇ?? ಗಟ್ಟಿ ಸಂಸಾರದ ಗುಟ್ಟೇನೆ ಗೊತ್ತೇ?? 2

*21 ರಿಂದ 25ರ ವಯಸ್ಸು ಹೊಂದಾಣಿಕೆ ಮಾಡಿಕೊಳ್ಳಲು ತಯಾರಿರುವ ವಯಸ್ಸು, 25 ದಾಟಿದರೆ ಅವರಲ್ಲಿ ಹೊಂದಿಕೊಳ್ಳುವ ಕಾಂಪ್ರೋಮೈಸ್ ಆಗುವ ಮನಸ್ಥಿತಿ ಕಡಿಮೆ, ಹಾಗಾಗಿ ಈ ವಯಸ್ಸಿನಲ್ಲಿ ಮದುವೆಯಾದರೆ, ಗಂಡನ ಮನೆಯವರ ಜೊತೆಗೆ ಬೇಗ ಅಡ್ಜಸ್ಟ್ ಆಗುವುದಕ್ಕೆ ಸುಲಭವಾಗುತ್ತದೆ. ಆಗ ಜಗಳ ಗೊಂದಲ ಉಂಟಾಗುವುದಿಲ್ಲ.
*ಗಂಡ ಹೆಂಡತಿ ಇಬ್ಬರಿಗೂ ಸಂತೋಷವಾಗಿ ಇರುವುದಕ್ಕೆ ಬಹಳ ಒಳ್ಳೆಯ ವಯಸ್ಸು ಇದು. ಶೃಂಗಾರದ ಸಂತೋಷವನ್ನು ಸಹ ಈ ಸಮಯದಲ್ಲಿ ನೀವು ಚೆನ್ನಾಗಿ ಅನುಭವಿಸಬಹುದು. ಹಾಗಾಗಿ ಈ ವಯಸ್ಸಿನಲ್ಲಿ ಮದುವೆಯಾದರೆ, ನೀವು ದಂಪತಿಗಳಾಗಿ ದೀರ್ಘಕಾಲದವರೆಗು ಸಂತೋಷವಾಗಿರಬಹುದು.

*ಬೇಗ ಮದುವೆ ಆಗುವುದರಿಂದ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಹೆಚ್ಚು ಸಮಯ ಸಿಗುತ್ತದೆ. ಸಮೀಕ್ಷೆಯ ಪ್ರಕಾರ ಕೂಡ ಇದು ತಿಳಿದುಬಂದಿದೆ. ಹಾಗಾಗಿ ಭವಿಷ್ಯದ ದೃಷ್ಟಿ ಇಂದಲೂ ಬೇಗ ಮದುವೆ ಆಗುವುದು ಒಳ್ಳೆಯದು.
*ಬೇಗ ಮದುವೆಯಾದರೆ ಮಕ್ಕಳು ಕೂಡ ಬೇಗ ಹುಟ್ಟುತ್ತಾರೆ, ಆಗ ನಿಮ್ಮ ಮಕ್ಕಳು ಬೇಗ ಬೆಳೆದು ದೊಡ್ಡವರಾಗುತ್ತಾರೆ. ಮೊಮ್ಮಕ್ಕಳ ಮದುವೆ ನೋಡುವ ಭಾಗ್ಯ ನಿಮಗೆ ಸಿಗುತ್ತದೆ. ಹಾಗೆಯೇ ನಿಮ್ಮ ಮಕ್ಕಳು ಬೇಗ ದುಡಿಯಲು ಶುರು ಮಾಡುವುದರಿಂದ ಆರ್ಥಿಕವಾಗಿ ಇನ್ನಷ್ಟು ಸದೃಢರಾಗುತ್ತೀರಿ..
*ಒಂದು ವೇಳೆ ನಿಮ್ಮ ಸಂಗಾತಿಯಿಂದ ನೀವು ದೂರ ಆಗುವ ಹಾಗೆ ಆದರೆ, ನಿಮ್ಮ ಸಂಗಾತಿ ಇಹಲೋಕ ತ್ಯಜಿಸಿದರೆ ಈ ರೀತಿ ಏನಾದರೂ ಸಂಭವಿಸದರೆ ಕೂಡ ಮತ್ತೊಂದು ಮದುವೆ ಆಗುವುದಕ್ಕೆ ನಿಮಗೆ ಸಮಯ ಸಿಗುತ್ತದೆ. ಹಾಗಾಗಿ ಈ ಎಲ್ಲಾ ಕಾರಣಗಳಿಂದಲೂ ಬೇಗ ಮದುವೆ ಆಗುವುದು ಒಳ್ಳೆಯದು. ಇದನ್ನು ಓದಿ..Relationship: ನಿಮ್ಮ ಸಂಗಾತಿಗೆ ಈ ನಾಲ್ಕು ಸುಳ್ಳುಗಳು ಹೇಳಿ ಸಾಕು, ಸುಖವಾಗಿ ಇಬ್ಬರು ಸಂಸಾರ ಮಾಡಿಕೊಂಡು ಇರ್ತೀರ. ಸುಳ್ಳಿನಲ್ಲಿಯೇ ಇದೆ, ಗುಟ್ಟು. ಏನು ಗೊತ್ತೇ??

Comments are closed.