Kannada News: ಇಹಲೋಕ ತ್ಯಜಿಸಿರುವ ವಿಶ್ವನಾಥ್, ಶೂಟಿಂಗ್ ಸಮಯದಲ್ಲಿ ಖಾಕಿ ಬಟ್ಟೆ ಧರಿಸುತ್ತಿದದ್ದು ಯಾಕೆ ಗೊತ್ತೇ? ಹಿಂದಿರುವ ಕಾರಣವೇನು ಗೊತ್ತೇ?

Kannada News: ಕೆ.ಹೆಚ್.ವಿಶ್ವನಾಥ್ ಇವರು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಬ್ರ್ಯಾಂಡ್ ಸೃಷ್ಟಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇವರು ಅದೆಷ್ಟೋ ಕಲಾವಿದರಿಗೆ ಗುರು ಇದ್ದ ಹಾಗೆ. ಇವರ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಎನ್ನಿಸಿಕೊಂಡಿವೆ. ಇವರು ತಯಾರಿಸುವ ಒಂದೊಂದು ಸಿನಿಮಾ ಒಂದೊಂದು ಮುತ್ತಿನ ಹಾಗೆ ಎಂದು ಹೇಳಬಹುದು. ಇವರು ತಮ್ಮ ಸಿನಿಮಾವನ್ನು ಅದ್ಭುತ ರೀತಿಯಲ್ಲಿ ಪ್ರಸ್ತುತ ಪಡಿಸುತ್ತಾರೆ. ಇದೇ ಕಾರಣಕ್ಕೆ ಇವರನ್ನು ಕಲಾತಪಸ್ವಿ ಎಂದು ಕರೆಯುತ್ತಾರೆ. ಕೆ.ಹೆಚ್. ವಿಶ್ವನಾಥ್ ಅವರು ತಮ್ಮ ವೃತ್ತಿ ಜೀವನದಲ್ಲಿ 50ಕ್ಕಿಂತ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.

ಚಿತ್ರರಂಗಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿರುವ ಕೆ.ಹೆಚ್.ವಿಶ್ವನಾಥ್ ಅವರು ಕಳೆದ ಗುರುವಾರ ಇಹಲೋಕ ತ್ಯಜಿಸಿದರು. ಅವರದ್ದೇ ಆದ ಶಂಕರಾಭರಣಂ ಸಿನಿಮಾ ಬಿಡುಗಡೆ ಆದ ದಿನವೇ ವಿಶ್ವನಾಥ್ ಅವರು ಇಹಲೋಕ ತ್ಯಜಿಸಿದರು. ತಮ್ಮ ಕೊನೆಯ ದಿನಗಳವರೆಗೂ ವಿಶ್ವನಾಥ್ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ವಿಶ್ವನಾಥ್ ಅವರ ಬಗ್ಗೆ ಒಂದು ವಿಚಾರ ಹೇಳುವುದಾದರೆ, ಅವರು ಪ್ರತಿ ಸಿನಿಮಾ ಚಿತ್ರೀಕರಣಕ್ಕೂ ಖಾಕಿ ಬಟ್ಟೆ ಧರಿಸಿಯೇ ಬರುತ್ತಿದ್ದರು. ಯಾವ ನಟರೇ ಸೆಟ್ ನಲ್ಲಿದ್ದರು, ಖಾಕಿ ಡ್ರೆಸ್ ಧರಿಸಿಯೇ ಸಿನಿಮಾ ಮಾಡುತ್ತಿದ್ದರು. ಅವರು ಯಾಕೆ ಖಾಕಿ ಡ್ರೆಸ್ ಅನ್ನೇ ಧರಿಸುತ್ತಾರೆ ಎಂದು ಹಲವರಿಗೆ ಕುತೂಹಲ ಇತ್ತು, ಅದನ್ನೇ ಸಂದರ್ಶನ ಒಂದರಲ್ಲಿ ಕೇಳಿದಾಗ, ವಿಶ್ವನಾಥ್ ಅವರು ಉತ್ತರ ಕೊಟ್ಟಿದ್ದು ಹೀಗೆ.. ಇದನ್ನು ಓದಿ..Kannada News: ಪುನೀತ್ ಮಾಡಬೇಕಾಗಿದ್ದ ಸಿನೆಮಾಗೆ ಬೇರೆ ನಟ: ಈತ ಬೇಡವೇ ಬೇಡ ಎಂದ ಫ್ಯಾನ್ಸ್. ಕಾರಣವೇನು ಗೊತ್ತೇ?? ಅಪ್ಪು ಸಿನಿಮಾ ಪಡೆದ ಅದೃಷ್ಟವಂತ ಯಾರು ಗೊತ್ತೇ??

kannada news vishvanath kannada news interesting facts Kannada News:

ಅವರು ಮಾಡುವ ಪ್ರತಿ ಸಿನಿಮಾದ ಶೂಟಿಂಗ್ ಸಮಯದಲ್ಲಿ ಖಾಕಿ ಬಟ್ಟೆ ಧರಿಸುತ್ತಾರೆ. ಯಾರೇ ಆಗಲಿ ಆ ಡ್ರೆಸ್ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದರು. ಆದರೆ ಈ ರೀತಿ ಖಾಕಿ ಬಟ್ಟೆಯನ್ನು ಏಕೆ ಧರಿಸುತ್ತೀರಿ ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ ಅವರು ಉತ್ತರಿಸಿದರು. “ಸಿನಿಮಾ ತಯಾರಿಕೆ ಒಂದು ಕೆಲಸ, ಆ ಕೆಲಸವನ್ನ ಬಹಳ ಜವಾಬ್ದಾರಿಯಿಂದ ನಿಭಾಯಿಸಬೇಕು, ಕೆಲಸವನ್ನು ನಿರ್ಲಕ್ಷ್ಯ ಮಾಡಬಾರದು. ಅದರ ಮೇಲೆ ಹೆಚ್ಚು ಜವಾಬ್ದಾರಿ ಇದ್ದರೆ, ಸಿನಿಮಾ ಅಷ್ಟೇ ಚೆನ್ನಾಗಿ ಬರುತ್ತದೆ ಎನ್ನುವುದು ನನ್ನ ನಂಬಿಕೆ. ಇದೇ ಕಾರಣಕ್ಕೆ ಖಾಕಿ ಬಟ್ಟೆಯನ್ನು ಯೂನಿಫಾರ್ಮ್ ಹಾಗೆ ಧರಿಸಿ, ಜವಾಬ್ದಾರಿಯಿಂದ ವರ್ತಿಸುತ್ತೇನೆ..” ಎಂದು ಹೇಳಿದ್ದರು. ಇದನ್ನು ಓದಿ..Kannada News: ನಾಗ ಚೈತನ್ಯ ಮನೆಯಲ್ಲಿ ಶುರುವಾಯ್ತು ಆಸ್ತಿ ಗಲಾಟೆ: ಮಲತಾಯಿ ಮಗನ ಅಖಿಲ್ ಕೊಡ್ತಾರಾ ಶಾಕ್?? ಏನಾಗುತ್ತಿದೆ ಗೊತ್ತೇ??

Comments are closed.