Kannada News: ಅಷ್ಟು ಇಷ್ಟು ಅನ್ನುವ ಬಿಲ್ಡ್ ಅಪ್ ನಡುವೆ, ಪಠಾಣ್ ಸಿನಿಮಾ ನಿಜಕ್ಕೂ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? ಇಷ್ಟೇನಾ ಎಂದ ಫ್ಯಾನ್ಸ್.
Kannada News: ನಟ ಶಾರುಖ್ ಖಾನ್ (Shahrukh Khan) ಅವರು ಬರೋಬ್ಬರಿ 4 ವರ್ಷಗಳ ಗ್ಯಾಪ್ ನ ನಂತರ ಪಠಾಣ್ (Pathaan) ಸಿನಿಮಾ ಇಂದ ಸಿನಿಪ್ರಿಯರ ಎದುರು ಬಂದರು, ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿರುವುದರಿಂದ ಅಭಿಮಾನಿಗಳು ಇವರನ್ನು ಕರೆಯುವ ಹಾಗೆ ನಿಜಕ್ಕೂ ಶಾರುಖ್ ಖಾನ್ ಅವರು ಬಾದ್ ಶಾ ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸತತ ಸೋಲುಗಳಿಂದ ಬಾಲಿವುಡ್ (Bollywood) ಕಂಗೆಟ್ಟಿತ್ತು. ಬಾಲಿವುಡ್ ಬಗ್ಗೆ ಹೆಚ್ಚಿನ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಈಗ ಅದೆಲ್ಲವನ್ನು ಅಳಿಸಿ ಹಾಕಿದ ಪಠಾಣ್ ಸಕ್ಸಸ್, ಬಾಲಿವುಡ್ ಗೆ ಹೊಸ ಹುರುಪು ಮತ್ತು ಉತ್ಸಾಹವನ್ನು ತಂದುಕೊಟ್ಟಿದೆ.
ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಜನವರಿ 25ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿ ಆಕ್ಷನ್ ಬ್ಲಾಕ್ ಬಸ್ಟರ್ ಆಗಿದೆ. ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ (Siddharth Anand) ಅವರು ನಿರ್ದೇಶನ ಮಾಡಿದ್ದು, ನಾಯಕಿಯಾಗಿ ದೀಪಿಕಾ ಪಡುಕೋಣೆ (Deepika Padukone) ನಟಿಸಿದ್ದಾರೆ. ಹಾಗೆಯೇ ನಟ ಜಾನ್ ಅಬ್ರಹಾಂ (John Abraham) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಣಗಳಿಕೆಯನ್ನು ಸಹ ಮಾಡುತ್ತಿದೆ. ಬಿಡುಗಡೆಯಾಗಿ ಮೊದಲ ವಾರದಲ್ಲೇ ಬರೋಬ್ಬರಿ 700 ಕೋಟಿ ಹಣಗಳಿಕೆ ಮಾಡಿದ ಪಠಾಣ್ ಸಿನಿಮಾ, 12 ದಿನಗಳಲ್ಲಿ ಒಟ್ಟಾರೆಯಾಗಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಇದನ್ನು ಓದಿ.. Kannada News: ಬದಲಾಯ್ತು ಸಮಂತಾ ಅದೃಷ್ಟ, ಹೈದರ್ಬಾದ್ ಬಿಟ್ಟು ಅಲ್ಲಿ ಮನೆ ಖರೀದಿ ಮಾಡಿದ ಸಮಂತಾ. ಬೆಲೆ ಕೇಳಿದರೆ ನಡುಗಿ ಹೋಗ್ತೀರಾ. ಎಷ್ಟು ಗೊತ್ತೇ??

ಪಠಾಣ್ ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾ ನೋಡಿದ ಸಿನಿಪ್ರಿಯರು ಬಹಳ ಇಷ್ಟಪಟ್ಟಿದ್ದಾರೆ. ಈ ಪಠಾಣ್ ಸಿನಿಮಾ 12 ದಿನಗಳಲ್ಲಿ ಬರೋಬ್ಬರಿ 832 ಕೋಟಿ ರೂಪಾಯಿ Gross ಹಣಗಳಿಕೆ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಖುದ್ದು ಚಿತ್ರತಂಡವೆ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ಅಧಿಕೃತವಾಗಿ ಒಂದು ಪೋಸ್ಟರ್ ಬಿಡುಗಡೆ ಮಾಡಿದೆ. ಹಾಗೆಯೇ ಭಾರತದಲ್ಲಿ ಮಾತ್ರವೇ ಪಠಾಣ್ ಸಿನಿಮಾ ಬರೋಬ್ಬರಿ 500 ಕೋಟಿ ಹಣಗಳಿಕೆ ಮಾಡಿದೆಯಂತೆ. ಇದೀಗ ಶಾರುಖ್ ಖಾನ್ ಅವರ ನಿಜವಾದ ಬಾದ್ ಶಾ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ನಿಜಕ್ಕೂ ಪ್ರಥಮ್ ನಟನೆ ಮಾಡಿರುವ ನಟ ಭಯಂಕರ ಸಿನಿಮಾ ಮೂರು ದಿನದಲ್ಲಿ ಗಳಿಸಿದ್ದು ಎಷ್ಟು ಗೊತ್ತೇ?? ಕ್ರಾಂತಿ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡ್ತಾ??
Comments are closed.