Gold Rate: ದಿಡೀರ್ ಎಂದು ಸಾವಿರ ಲೆಕ್ಕದಲ್ಲಿ ಕುಸಿದ ಚಿನ್ನ ಬೆಲೆ: ಬೆಲೆ ತಿಳಿದರೆ, ಇಂದೇ ಹೋಗಿ ಖರೀದಿ ಮಾಡುತ್ತೀರಿ. ಎಷ್ಟಾಗಿದೆ ಗೊತ್ತೇ??
Gold Rate: ಚಿನ್ನ ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಬಂಗಾರದ ಮೇಲೆ ಪ್ರೀತಿ ಜಾಸ್ತಿ. ಮದುವೆ, ಹಬ್ಬಗಳು ಮತ್ತು ಇನ್ನಿತರ ಶುಭ ಸಮಾರಂಭಗಳಲ್ಲಿ ಹೆಣ್ಣುಮಕ್ಕಳು ಹೊಸದಾಗಿ ಚಿನ್ನ ಕೊಂಡುಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ಚಿನ್ನದ ದರ ಯಾವಾಗಲೂ ಒಂದೇ ರೀತಿ ಇರುವುದಿಲ್ಲ, ಅದರ ದರ ಹೆಚ್ಚಾಗುತ್ತಿರುತ್ತದೆ, ಹಾಗೆಯೇ ಕಡಿಮೆ ಕೂಡ ಆಗುತ್ತಿರುತ್ತದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಮಾತ್ರವೇ ಕಂಡುಬಂದಿತ್ತು.
ಆದರೆ ಈಗ ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ಡಾಲರ್ ನ ಬೆಲೆ ಕುಸಿದಿರುವ ಕಾರಣ ಬಂಗಾರದ ಬೆಲೆಯಲ್ಲಿ ಇಳಿಕೆ ಕಾಣಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ, ನಮ್ಮ ದೇಶದಲ್ಲಿ ಕೂಡ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಸಾವಿರ ರೂಪಾಯಿಯ ವರೆಗು ಬೆಲೆಯಲ್ಲಿ ಇಳಿಕೆ ಆಗಿದೆ, ಶುಕ್ರವಾರದ ದಿನ ಇಳಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಮತ್ತೊಮ್ಮೆ ಕಡಿಮೆ ಆಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಮ್ ಗೆ ₹5,265 ರೂಪಾಯಿ, 8 ಗ್ರಾಮ್ ₹42,120 ರೂಪಾಯಿಗಳು, 10 ಗ್ರಾಮ್ ಗೆ ₹52,650 ರೂಪಾಯಿಗಳು. 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹5,743, 8 ಗ್ರಾಮ್ ಗೆ ₹45,944 ರೂಪಾಯಿ, 10 ಗ್ರಾಮ್ ಗೆ ₹57,430 ರೂಪಾಯಿಗಳು. ಒಂದು ವೇಳೆ ನೀವು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ ಎಂದು ಹೇಳಬಹುದು. ಅದರಲ್ಲೂ ಪ್ರೇಮಿಗಳ ದಿನ ಹತ್ತಿರ ಇರುವುದರಿಂದ, ಗಿಫ್ಟ್ ಕೊಡುವುದಕ್ಕೆ ಇದು ಒಳ್ಳೆಯ ಆಯ್ಕೆ ಆಗಿದೆ. ಇದನ್ನು ಓದಿ..Kannada News: ಮದುವೆ ಆದ ತಕ್ಷಣವೇ ಕ್ರಿಕೆಟ್ ಆಡಲು ಆಥಿಯಾ ಇಂದ ದೂರ ಹೋದ ರಾಹುಲ್ ಗೆ ಮತ್ತೊಂದು ಶಾಕ್. ಆಥಿಯಾ ಏನು ಮಾಡಿದ್ದಾರೆ ಗೊತ್ತೇ??
Comments are closed.