Kannada News: ಸ್ನೇಹಿತೆಗೆ ಡೈವೋರ್ಸ್ ಕೊಡಿಸಿ ಆತನನ್ನೇ ಹನ್ಸಿಕಾ ಮದುವೆಯಾಗಲು ಕಾರಣವೇನು ಗೊತ್ತೇ? ಆತನ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
Kannada News: ಮೂಲತಃ ಉತ್ತರ ಭಾರತದವರಾದರು ದಕ್ಷಿಣ ಭಾರತದಲ್ಲಿ ಹೆಚ್ಚು ಗುರುತಿಸಿಕೊಂಡಿರುವವರು ನಟಿ ಹನ್ಸಿಕಾ. ಇವರು ಮೊದಲಿಗೆ ಹಿಂದಿಯ ಕೋಯಿ ಮಿಲ್ ಗಯಾ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು, ಬಳಿಕ ಅಪ್ಪು ಅವರ ಬಿಂದಾಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಕನ್ನಡದ ಬಿಂದಾಸ್ ನಂತರ ಇವರು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದರು. ಹನ್ಸಿಕಾ ಅವರು ಹೆಚ್ಚು ಫೇಮಸ್ ಆಗಿದ್ದು ತಮಿಳು ಸಿನಿಮಾಗಳಲ್ಲಿ.
ಇವರು ಚಿತ್ರರಂಗಕ್ಕೆ ಬಂದು 1 ದಶಕಕ್ಕಿಂತ ಹೆಚ್ಚು ಸಮಯ ಆಗಿದೆ. ಇತ್ತೀಚೆಗೆ ಹನ್ಸಿಕಾ ಅವರು ತಮ್ಮ ಬಹು ಕಾಲದ ಗೆಳೆಯ ಸೊಹೈಲ್ ಖತುರಿಯಾ ಅವರ ಜೊತೆಗೆ ಅದ್ಧೂರಿಯಾಗಿ ಮದುವೆಯಾದರು. ಈಗ ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಾ, ನಟನೆಗು ಕಂಬ್ಯಾಕ್ ಮಾಡಿದ್ದಾರೆ. ಅಷ್ಟಕ್ಕೂ ಹನ್ಸಿಕಾ ಅವರು ಮದುವೆ ಆಗಿರುವುದು ತಮ್ಮ ಸ್ನೇಹಿತೆಯ ಗಂಡನ ಜೊತೆಗೆ. ಸೊಹೈಲ್ ಮೊದಲಿಗೆ ಹನ್ಸಿಕಾ ಅವರ ಸ್ನೇಹಿತೆಯ ಜೊತೆಗೆ ಮದುವೆಯಾಗಿದ್ದರು. ಅವರ ಮದುವೆಗೆ ಹನ್ಸಿಕಾ ಅವರು ಸಂತೋಷದಿಂದ ಓಡಾಡಿದ್ದರು. ಆದರೆ ಕೆಲವು ವರ್ಷಗಳ ನಂತರ ಅವರಿಬ್ಬರ ನಡುವೆ ವೈಮನಸ್ಸು ಮೂಡಿ ವಿಚ್ಛೇದನ ಪಡೆದರು. ಇದನ್ನು ಓದಿ..Kannada News: ಮದುವೆ ಆದ ತಕ್ಷಣವೇ ಕ್ರಿಕೆಟ್ ಆಡಲು ಆಥಿಯಾ ಇಂದ ದೂರ ಹೋದ ರಾಹುಲ್ ಗೆ ಮತ್ತೊಂದು ಶಾಕ್. ಆಥಿಯಾ ಏನು ಮಾಡಿದ್ದಾರೆ ಗೊತ್ತೇ??

ಅದಾದ ಬಳಿಕ ಹನ್ಸಿಕಾ ಮತ್ತು ಸೊಹೈಲ್ ನಡುವೆ ಪ್ರೀತಿ ಶುರುವಾಗಿ, ಇಬ್ಬರು ಎರಡು ಕುಟುಂಬದವರನ್ನು ಒಪ್ಪಿಸಿ, ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದರು. ಸೊಹೈಲ್ ಅವರು ನಿಜಕ್ಕೂ ಯಾರು ಎಂದು ನೋಡುವುದಾದರೆ, ಅವರು ಒಬ್ಬ ಖ್ಯಾತ ಉದ್ಯಮಿ. ಹಲವು ಬ್ಯುಸಿನೆಸ್ ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಹನ್ಸಿಕಾ ಅವರು ಶುರು ಮಾಡಿರುವ ಕಂಪೆನಿಗೂ ಕೂಡ ಸೊಹೈಲ್ ಅವರು ಪಾರ್ಟ್ನರ್ ಆಗಿದ್ದಾರೆ. ಬಹಳ ಆಸ್ತಿವಂತರು ಕೂಡ ಹೌದು. ಇದನ್ನು ಓದಿ..Kannada News: ಕನ್ನಡದ ಮೊದಲ ಮಾಣಿಕ್ಯ, ವಿಷ್ಣು ದಾದಾ ರವರು ಬಳಸಿದ ಕಾರು ಈಗ ಎಲ್ಲಿದೆ ಗೊತ್ತೇ? ಖರೀದಿ ಮಾಡಿದ್ದು ಯಾರು ಗೊತ್ತೇ?
Comments are closed.