Cricket News: ಕ್ಯಾಚ್ ಬಿಡುವುದನ್ನೇ ಕಾಯಕ ಮಾಡಿಕೊಂಡ ಕಿಂಗ್ ಕೊಹ್ಲಿ; ಬಿಟ್ಟಿದ್ದು ಬರೋಬ್ಬರಿ ಎಷ್ಟು ಕ್ಯಾಚ್ ಗೊತ್ತೇ?? ನಾಯಕನಿಗೆ ಹೊಸ ತಲೆ ನೋವು.

Cricket News: ವಿರಾಟ್ ಕೊಹ್ಲಿ ಅವರು ಭಾರತ ತಂಡದ ಪ್ರಮುಖ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು. 2019ರಿಂದ ಫಾರ್ಮ್ ಇಂದ ದೂರ ಉಳಿದಿದ್ದ ಕೋಹ್ಲಿ ಅವರು ಈಗ 2022ರ ಏಷ್ಯಾಕಪ್ ಇಂದ ಮತ್ತೆ ಫಾರ್ಮ್ ಗೆ ಮರಳಿ ಬಂದರು. ಟಿ20 ಪಂದ್ಯಗಳು ಮತ್ತು ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಶತಕ ಸಿಡಿಸುತ್ತಿರುವ ಕೋಹ್ಲಿ ಅವರು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಹಿಂದೆ ಉಳಿಯುವ ಹಾಗೆ ಆಗುತ್ತಿದೆ. ಈಗ ನಡೆಯುತ್ತಿರುವ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಪಂದ್ಯದಲ್ಲಿ ಕೇವಲ 12 ಗಳಿಸಿ ಔಟ್ ಆದರು, ಕೊಹ್ಲಿ ಅವರು ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿ 3 ವರ್ಷದ ಮೇಲೆ ಆಗಿದೆ..

ಬ್ಯಾಟಿಂಗ್ ಮಾತ್ರವಲ್ಲ ಕೋಹ್ಲಿ ಅವರು ಫೀಲ್ಡಿಂಗ್ ನಲ್ಲಿ ಸಹ ಎಡವುತ್ತಿದ್ದಾರೆ. ಇದೀಗ ನಡೆದ ಟೆಸ್ಟ್ ಪಂದ್ಯದಲ್ಲಿ ಮೂರು ಕ್ಯಾಚ್ ಗಳನ್ನು ಕೈಬಿಟ್ಟಿದ್ದಾರೆ ಕೋಹ್ಲಿ. ಕ್ರಿಕೆಟ್ ಮ್ಯಾಚ್ ಗಳಲ್ಲಿ ಕ್ಯಾಚ್ ಗಳು ಬಹಳ ಮುಖ್ಯ ಆಗುತ್ತದೆ. ಒಂದು ಕ್ಯಾಚ್ ಗೆ ಇಡೀ ಮ್ಯಾಚ್ ಬದಲಾಯಿಸುವ ಶಕ್ತಿ ಇರುತ್ತದೆ. ಆದರೆ ಕೊಹ್ಲಿ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಸ್ಟೀವ್ ಸ್ಮಿತ್ ಅವರ ಕ್ಯಾಚ್, ಎರಡನೇ ಇನ್ನಿಂಗ್ಸ್ ನಲ್ಲಿ ಡೇವಿಡ್ ವಾರ್ನರ್ ಅವರ ಕ್ಯಾಚ್ ಅನ್ನು ಕೊಹ್ಲಿ ಅವರು ಕೈಬಿಟ್ಟರು. ಇದರಿಂದ ಕೊಹ್ಲಿ ಅವರು ಟೀಕೆಗೆ ಒಳಗಾಗಿದ್ದಾರೆ. ಇದನ್ನು ಓದಿ..Cricket News: ಕಿಂಗ್ ಕೊಹ್ಲಿ ರವರ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಶುಭಮ್ ಗಿಲ್; ಕಿಂಗ್ ಕೂಡ ಲೆಕ್ಕಕ್ಕೆ ಇಲ್ಲವೇ? ಭಾರತ ತಂಡಕ್ಕೆ ಹೊಸ ಆಧಾರ?

cricket news kohli catch drop kannada news Cricket News:
Cricket News: ಕ್ಯಾಚ್ ಬಿಡುವುದನ್ನೇ ಕಾಯಕ ಮಾಡಿಕೊಂಡ ಕಿಂಗ್ ಕೊಹ್ಲಿ; ಬಿಟ್ಟಿದ್ದು ಬರೋಬ್ಬರಿ ಎಷ್ಟು ಕ್ಯಾಚ್ ಗೊತ್ತೇ?? ನಾಯಕನಿಗೆ ಹೊಸ ತಲೆ ನೋವು. 2

ಕೊಹ್ಲಿ ಅವರು ಯಾವಾಗಲೂ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ, ಅದಕ್ಕಾಗಿ ತರಬೇತಿ, ಡಯೆಟ್ ಎಲ್ಲವನ್ನು ಮಾಡುತ್ತಾರೆ, ಫೀಲ್ಡ್ ನಲ್ಲಿ ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೊಹ್ಲಿ ಅವರು ಫೀಲ್ಡಿಂಗ್ ನಲ್ಲಿ ಹಿಂದೆ ಸರಿಯುತ್ತಿದ್ದಾರೆ, 2022ರಿಂದ ಅವರು ಆಡಿರುವ ಪಂದ್ಯಗಳಲ್ಲಿ ಕೊಹ್ಲಿ ಅವರು 14 ಕ್ಯಾಚ್ ಗಳಲ್ಲಿ 8 ಕ್ಯಾಚ್ ಗಳನ್ನು ಹಿಡಿದಿದ್ದು, 6 ಕ್ಯಾಚ್ ಗಳನ್ನು ಕೈಬಿಟ್ಟಿದ್ದಾರೆ. ಭಾರತ ತಂಡ ಈಗ ಮೊದಲ ಟೆಸ್ಟ್ ಮ್ಯಾಚ್ ಗೆದ್ದಿದೆ, ಇನ್ನೆರಡು ಮ್ಯಾಚ್ ಗಳನ್ನು ಸಹ ಭರವಸೆ ಹೊಂದಿದೆ. ಈ ಟೂರ್ನಿಯ ಗೆಲುವು ಭಾರತ ತಂಡವನ್ನು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಗೆ ಕರೆದೊಯ್ಯುತ್ತದೆ. ಹಾಗಾಗಿ ಕೊಹ್ಲಿ ಅವರು ಈಗ ಫಾರ್ಮ್ ನಲ್ಲಿರುವುದು ಬಹಳ ಮುಖ್ಯವಾಗುತ್ತದೆ. ಇದನ್ನು ಓದಿ..Cricket News: ಯಾರು ಕಾಣದಂತಹ ದುಬಾರಿ ಉಡುಗೊರೆಯನ್ನು ಪಡೆದ ರಾಹುಲ್: ಕೊಹ್ಲಿ, ಧೋನಿ, ಸಲ್ಮಾನ್ ಕೋಟಿ ಕೋಟಿ ಖರ್ಚು ಮಾಡಿ ಕೊಟ್ಟ ಉಡುಗೊರೆ ಏನು ಗೊತ್ತೇ??

Comments are closed.