Cricket News: ವಿರಾಟ್ ಕೊಹ್ಲಿ ನಾಯಕತ್ವ ಕಿತ್ತುಕೊಳ್ಳಲು ನಡೆದ ಷಡ್ಯಂತ್ರ ಬಯಲು: ಕಿಂಗ್ ಮೆರೆಯುತ್ತಿರುವಾಗ ನಡೆದದ್ದು ಏನು ಗೊತ್ತೇ??
Cricket News: ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಕಿಂಗ್ ಕೊಹ್ಲಿ ಎಂದೇ ಕರೆಯಲ್ಪಡುವ, ಕ್ರಿಕೆಟ್ ಲೋಕದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ವಿರಾಟ್ ಕೊಹ್ಲಿ (Virat Kohli) ಅವರು ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ಬಹಳಷ್ಟು ಟೂರ್ನಿಗಳನ್ನು ಗೆದ್ದಿದ್ದಾರೆ. ಯಶಸ್ಸಿನಲ್ಲಿ ಸಾಗುತ್ತಿದ್ದು, ಕೊಹ್ಲಿ ಅವರು ಫಾರ್ಮ್ ಕಳೆದುಕೊಂಡಾಗ ಅವರನ್ನು ಟೀಮ್ ಇಂಡಿಯಾದ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಲಾಯಿತು, ವಿರಾಟ್ ಕೊಹ್ಲಿ ಅವರಂಥ ಅತ್ಯುತ್ತಮವಾದ ಕ್ಯಾಪ್ಟನ್ ಅನ್ನು ಇದ್ದಕ್ಕಿದ್ದ ಹಾಗೆ ಆ ರೀತಿ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಿ ಅಸಲಿ ಕಾರಣ ಏನು ಎನ್ನುವ ಬಗ್ಗೆ ಹಲವರಲ್ಲಿ ಅನುಮಾನ ಇತ್ತು.
ಇದೀಗ ಈ ಎಲ್ಲಾ ಅನುಮಾನಗಳಿಗೆ ಬಿಸಿಸಿಐ ನ (BCCI) ಚೇತನ್ ಶರ್ಮ (Chetan Sharma) ಅವರ ಮೂಲಕ ಉತ್ತರ ಸಿಕ್ಕಿದೆ, ಒಂದು ಸ್ಟಿಂಗ್ ಆಪರೇಷನ್ ನಡೆದಿದ್ದು, ಅದರಲ್ಲಿ ಚೇತನ್ ಶರ್ಮಾ ಅವರು ಮಾತನಾಡಿರುವ ವಿಡಿಯೋ ಈಗ ಬಿಸಿಸಿಐ ನಲ್ಲಿ ಬಿರುಗಾಳಿ ಎಬ್ಬಿಸಿದೆ. ವಿರಾಟ್ ಕೊಹ್ಲಿ ಅವರನ್ನು ಕ್ಯಾಪ್ಟನ್ಸಿ ಇಂದ ತೆಗೆದುಹಾಕಲು ಸೌರವ್ ಗಂಗೂಲಿ ಮತ್ತು ವಿರಾಟ್ ಅವರ ನಡುವೆ ನಡೆಯುತ್ತಿದ್ದ ಕೋಲ್ಡ್ ವಾರ್ ಕಾರಣ ಎಂದು ಚೇತನ್ ಶರ್ಮ ಅವರು ಹೇಳಿದ್ದಾರೆ. ವಿರಾಟ್ ಅವರನ್ನು ಕಂಡರೆ ಗಂಗೂಲಿ ಅವರಿಗೆ ಆಗುತ್ತಿರಲಿಲ್ಲ. ವಿರಾಟ್ ಅವರನ್ನು ತೆಗೆದುಹಾಕಬೇಕು ಎಂದು ಕಾದು ಕುಳಿತಿದಿದ್ದರು. ಇದನ್ನು ಓದಿ..Cricket News: ಕ್ಯಾಚ್ ಬಿಡುವುದನ್ನೇ ಕಾಯಕ ಮಾಡಿಕೊಂಡ ಕಿಂಗ್ ಕೊಹ್ಲಿ; ಬಿಟ್ಟಿದ್ದು ಬರೋಬ್ಬರಿ ಎಷ್ಟು ಕ್ಯಾಚ್ ಗೊತ್ತೇ?? ನಾಯಕನಿಗೆ ಹೊಸ ತಲೆ ನೋವು.

ಅದೇ ಸಮಯಕ್ಕೆ ವಿರಾಟ್ ಅವರು ಫಾರ್ಮ್ ಕಳೆದುಕೊಂಡರು, ಹಾಗಾಗಿ ಅದನ್ನೇ ಕಾರಣವಾಗಿ ಮಾಡಿಕೊಂಡು ವಿರಾಟ್ ಅವರನ್ನು ಕ್ಯಾಪ್ಟನ್ಸಿ ಇಂದ ತೆಗೆದುಹಾಕಲಾಯಿತು. ರೋಹಿತ್ ಶರ್ಮಾ (Rohit Sharma) ಅವರಿಗೆ ಬೆಂಬಲ ನೀಡಲು ಬಿಸಿಸಿಐ ಗೆ ಇಷ್ಟವಿರಲಿಲ್ಲ, ಕೊಹ್ಲಿ ಅವರನ್ನು ಕ್ಯಾಪ್ಟನ್ಸಿ ಇಂದ ತೆಗೆದುಹಾಕಿದ ಒಂದೇ ಒಂದು ಕಾರಣಕ್ಕೆ ರೋಹಿತ್ ಅವರಿಗೆ ಕ್ಯಾಪ್ಟನ್ಸಿ ನೀಡಿ ಬೆಂಬಲ ಕೊಡಲಾಯಿತು ಎಂದು ಚೇತನ್ ಶರ್ಮ ಅವರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ಭಾರಿ ವೈರಲ್ ಆಗಿತ್ತು, ಕ್ರಿಕೆಟ್ ಪ್ರಿಯರು ಗಂಗೂಲಿ ಅವರನ್ನು ಮತ್ತು ಬಿಸಿಸಿಐ ಅವರನ್ನು ಟೀಕಿಸುವುದಕ್ಕೆ ಶುರು ಮಾಡಿದ್ದಾರೆ. ಇತ್ತ ಬಿಸಿಸಿಐ ನಲ್ಲೂ ಈ ಹೇಳಿಕೆ ಬಿರುಗಾಳಿಯನ್ನೇ ಸೃಷ್ಟಿಸಿದೆ. ಇದನ್ನು ಓದಿ..Cricket News: ಕಿಂಗ್ ಕೊಹ್ಲಿ ರವರ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಶುಭಮ್ ಗಿಲ್; ಕಿಂಗ್ ಕೂಡ ಲೆಕ್ಕಕ್ಕೆ ಇಲ್ಲವೇ? ಭಾರತ ತಂಡಕ್ಕೆ ಹೊಸ ಆಧಾರ?
Comments are closed.