Cricket News: ಪೃತ್ವಿ ಶಾ ರವರ ಮೇಲೆ ಹಲ್ಲೆ ನಡೆಸಿರುವ ಈ ಸುಂದರಿ ಸಪ್ನಾ ಗಿಲ್ ಯಾರು ಗೊತ್ತೇ?? ಇವಳ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
Cricket News: ಟೀಮ್ ಇಂಡಿಯಾದ ಕ್ರಿಕೆಟರ್ ಪೃಥ್ವಿ ಶಾ ಅವರ ಹೆಸರು ಈಗ ವಿವಾದಕ್ಕೆ ಸಿಲುಕಿದೆ. ತಂಡದಿಂದ ಹೊರಗಿರುವ ಪೃಥ್ವಿ ಶಾ ಅವರು ಮುಂಬೈ ಏರ್ಪೋರ್ಟ್ ಬಳಿ ಇರುವ ಐಷಾರಾಮಿ ಹೋಟೆಲ್ ಒಂದರಲ್ಲಿ ಇದ್ದಾಗ ಬುಧವಾರ ಬೆಳಗ್ಗೆ ಇಬ್ಬರು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಬಂದಾಗ, ಜಗಳ ನಡೆದಿದೆ ಎಂದು ಗೊತ್ತಾಗಿದ್ದು. ಪೃಥ್ವಿ ಶಾ ಅವರ ಸ್ನೇಹಿತನ ಕಾರ್ ನ ಗ್ಲಾಸ್ ಪುಡಿ ಪುಡಿ ಮಾಡಿದ್ದು ಮಾತ್ರವಲ್ಲದೆ, 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ಇವರ ವಿರುದ್ಧ ಈಗ ಪೊಲೀಸರ ಬಳಿ ದೂರು ನೀಡಲಾಗಿದ್ದು, 8 ಜನರಲ್ಲಿ ಒಬ್ಬ ಹುಡುಗನನ್ನು ಶೋಭಿತ್ ಠಾಕೂರ್ ಹಾಗು ಮತ್ತೊಬ್ಬ ಹುಡುಗಿಯನ್ನು ಸಪ್ನ ಗಿಲ್ ಎಂದು ಗುರುತಿಸಲಾಗಿದೆ. ಈ ಘಟನೆ ನಡೆದ ಬಳಿಕ ಪೃಥ್ವಿ ಶಾ ಅವರ ಮೇಲೆ ಹಲ್ಲೆ ಮಾಡಿದ ಈ ಸಪ್ನ ಗಿಲ್ ಯಾರು ಎನ್ನುವ ಕುತೂಹಲ ಶುರುವಾಗಿದೆ. ವಕೀಲರ ಎದುರು ಮಾತನಾಡಿರುವ ಸಪ್ನ ಅವರು, ಮೊದಲಿಗೆ ಪೃಥ್ವಿ ಅವರೇ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಉಲ್ಟಾ ಹೊಡೆದಿದ್ದಾರೆ. ಅದಕ್ಕೆ ಪೂರಕವಾಗಿ, ಪೃಥ್ವಿ ಶಾ ಅವರ ಕೈಯಲ್ಲಿ ಬೇಸ್ ಬಾಲ್ ಆಡುವ ಬ್ಯಾಟ್ ಇರುವುದು ವಿಡಿಯೋದಲ್ಲಿ ಕಾಣಿಸಿದೆ. ಇದನ್ನು ಓದಿ..Cricket News: ವಿರಾಟ್ ಕೊಹ್ಲಿ ನಾಯಕತ್ವ ಕಿತ್ತುಕೊಳ್ಳಲು ನಡೆದ ಷಡ್ಯಂತ್ರ ಬಯಲು: ಕಿಂಗ್ ಮೆರೆಯುತ್ತಿರುವಾಗ ನಡೆದದ್ದು ಏನು ಗೊತ್ತೇ??

ಸೋಷಿಯಲ್ ಮೀಡಿಯಾದಲ್ಲಿ ಸಪ್ನ ಗಿಲ್ ಅವರು ಬಹಳ ಆಕ್ಟಿವ್ ಆಗಿದ್ದಾರೆ. 1,471 ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ, ಅಷ್ಟೇ ಅಲ್ಲದೆ ಸಪ್ನಾ ಅವರಿಯೇ 2,18,000 ಕ್ಕಿಂತ ಹೆಚ್ಚು ಫಾಲೋವರ್ಸ್ ಗಳು ಕೂಡ ಇದ್ದಾರೆ. ಇವರು ಭೋಜಪುರಿ ಚಿತ್ರರಂಗದವರಾಗಿದ್ದು, ಕಾಶಿ ಅಮರನಾಥ್ ಮತ್ತು ಮೇರಾ ವತನ್ ಎನ್ನುವ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಪೃಥ್ವಿ ಶಾ ಅವರು ಕಂಪ್ಲೇಂಟ್ ಮಾಡಿರುವ ಎಲ್ಲಾ ಆರೋಪಿಗಳು ಕೂಡ ತಮ್ಮ ವಿರುದ್ಧದ ಆರೋಪಕ್ಕೆ ಪ್ರಶ್ನೆ ಮಾಡಿದ್ದಾರೆ. ಸಪ್ನಾ ಗಿಲ್ ಅವರ ಪರ ಲಾಯರ್ ಕಾಶಿಫ್ ಖಾನ್ ಕೂಡ ಪೃಥ್ವಿ ಅವರೇ ಮೊದಲು ಹಲ್ಲೆ ಮಾಡಿದ್ದು ಎಂದು ವಾದ ಮಾಡುತ್ತಿದ್ದು, ಈ ಪ್ರಕರಣ ಯಾವ ಟ್ವಿಸ್ಟ್ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Cricket News: ಕ್ಯಾಚ್ ಬಿಡುವುದನ್ನೇ ಕಾಯಕ ಮಾಡಿಕೊಂಡ ಕಿಂಗ್ ಕೊಹ್ಲಿ; ಬಿಟ್ಟಿದ್ದು ಬರೋಬ್ಬರಿ ಎಷ್ಟು ಕ್ಯಾಚ್ ಗೊತ್ತೇ?? ನಾಯಕನಿಗೆ ಹೊಸ ತಲೆ ನೋವು.
Comments are closed.