Kannada News: ಹುಡುಗ ಹಾಗೆ ಇದ್ದರೇ, ನಿಂತಲ್ಲೇ ಮದುವೆಯಾಗುತ್ತೇನೆ ಎಂದ ರಾಕುಲ್: ಹೇಗಿರಬೇಕಂತೆ ಗೊತ್ತೇ? ಕೇಳಿದರೆ, ನಿಂತಲ್ಲೇ ಶಾಕ್ ಆಗ್ತೀರಾ.

Kannada News: ನಟಿ ರಾಕುಲ್ ಪ್ರೀತ್ ಸಿಂಗ್ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. ರಾಕುಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಪ್ರೀತಿ ಬಗ್ಗೆ ತಮ್ಮ ನಿಲುವು ಏನು ಎನ್ನುವುದನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ತಂದೆ ತಾಯಿಯ 31ನೇ ವಿವಾಹ ವಾರ್ಷಿಕೋತ್ಸವವನ್ನು ಮಾಲ್ಡಿವ್ಸ್ ನಲ್ಲಿ ಆಚರಿಸಿ, ಅವರಿಬ್ಬರ ಫೋಟೋ ಮತ್ತು ವಿಡಿಯೋ ಶೇರ್ ಮಾಡಿದ್ದಾರೆ. ನನಗೆ ಪ್ರೀತಿ ಮತ್ತು ನಂಬಿಕೆಯ ಅರ್ಥ ಗೊತ್ತಾಗಿದ್ದೆ ನಿಮ್ಮಿಂದ ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಇತ್ತೀಚಿಗೆ ರಾಕುಲ್ ಅವರು ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಕೂಡ ಹೇಳಿಕೊಂಡಿದ್ದಾರೆ.. ಪ್ರೀತಿ ಮತ್ತು ಮದುವೆ ಈ ಎರಡನ್ನು ನಾನು ಬಲವಾಗಿ ನಂಬುತ್ತೇನೆ. ನಾನು ಮದುವೆ ಆಗುವ ಹುಡುಗನಿಗೆ ಜೀವನದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ದೃಷ್ಟಿ ಮತ್ತು ಉತ್ಸಾಹ ಇರಬೇಕು. ನನ್ನ ಕುಟುಂಬದಲ್ಲಿ ಸಂಪ್ರದಾಯವನ್ನು ಗೌರವಿಸುವುದನ್ನು ಹೇಳಿಕೊಟ್ಟೋದ್ದಾರೆ, ನನ್ನ ತಂದೆ ಆರ್ಮಿಯಲ್ಲಿ ಇದ್ದಿದ್ರಿಂದ ನಾನು ಅದೇ ವಾತಾವರಣದಲ್ಲಿ ಬೆಳೆದವಳು, ಈ ಕಾರಣಕ್ಕೆ ನನ್ನ ಗಂಡ ಆಗುವವರು ಹೆಲ್ತಿ ಹ್ಯಾಬಿಟ್ಸ್ ಹೊಂದಿದ್ದರೆ ನನಗೂ ಸಂತೋಷವಿರುತ್ತದೆ. ನನ್ನ ಮದುವೆ ನನ್ನ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸಮ್ಮುಖದಲ್ಲಿ ನಡೆಯುತ್ತದೆ ಎಂದುಕೊಂಡಿದ್ದೇನೆ, ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುವ ಪ್ಲಾನ್ ಇದೆ ಎಂದು ಸಹ ಹೇಳಿದ್ದಾರೆ..

kannada news rakul dreams about marriage Kannada News:
Kannada News: ಹುಡುಗ ಹಾಗೆ ಇದ್ದರೇ, ನಿಂತಲ್ಲೇ ಮದುವೆಯಾಗುತ್ತೇನೆ ಎಂದ ರಾಕುಲ್: ಹೇಗಿರಬೇಕಂತೆ ಗೊತ್ತೇ? ಕೇಳಿದರೆ, ನಿಂತಲ್ಲೇ ಶಾಕ್ ಆಗ್ತೀರಾ. 2

ರಾಕುಲ್ ಅವರು ಹೇಳಿರುವ ಮಾತುಗಳನ್ನು ಕೇಳುತ್ತಿದ್ದರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಹಾಗೆ ಅನ್ನಿಸುತ್ತಿದೆ. ಆದರೆ ಈಗ ರಾಕುಲ್ ಅವರು ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ಮೂರು ಸಿನಿಮಾಗಳು, ತೆಲುಗಿನಲ್ಲಿ ಒಂದು ಮತ್ತು ತಮಿಳಿನಲ್ಲಿ ಒಂದು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ವೈಷ್ಣವ್ ತೇಜ್ ಜೊತೆಗಿನ ಕ್ರಿಶ್ ಸಿನಿಮಾದ ಚಿತ್ರೀಕರಣವನ್ನು ರಾಕುಲ್ ಮುಗಿಸಿದ್ದಾರೆ. ನಿತಿನ್ ಅವರ ಜೊತೆಗಿನ ಚೆಕ್ ಸಿನಿಮಾ ಚಿತ್ರೀಕರಣ ಬಾಕಿ ಇದೆ, ಹಾಗೆಯೇ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಅವರೊಡನೆ ನಟಿಸುತ್ತಿರುವ ಮೇ ಡೇ ಸಿನಿಮಾ ಚಿತ್ರೀಕರಣ ಈಗಷ್ಟೇ ಶುರುವಾಗಿದೆ.

Comments are closed.