ದೇಶವನ್ನೇ ಶೇಕ್ ಶೇಕ್ ಮಾಡುವಷ್ಟು ಬ್ಯಾಕ್ ಗ್ರೌಂಡ್ ಇದ್ದರೂ, ಎನ್ಟಿಆರ್ ಅಣ್ಣ, ತಾರಕರತ್ನ ಸೀಕ್ರೆಟ್ ಆಗಿ ಮದುವೆಯಾಗಿದ್ದು ಯಾಕೆ ಗೊತ್ತೆ?

ನಟ ತಾರಕರತ್ನ ಅವರಿಗೆ ಅಷ್ಟು ಒಳ್ಳೆಯ ಬ್ಯಾಗ್ರೌಂಡ್, ದೊಡ್ಡ ಕುಟುಂಬ ಎಲ್ಲವೂ ಇದ್ದರು ಕೂಡ ಅವರ ಮದುವೆಯನ್ನು ತುಂಬಾ ಸೀಕ್ರೆಟ್ ಆಗಿ ಮಾಡಲಾಯಿತು. 2012ರ ಆಗಸ್ಟ್ 2ರಂದು ಹೈದರಾಬಾದ್ ನಲ್ಲಿರುವ ದೇವಸ್ಥಾನದಲ್ಲಿ ಬಹಳ ಸರಳವಾಗಿ ತಾರಕರತ್ನ ಮತ್ತು ಅಲೇಖ್ಯ ಅವರ ಮದುವೆ ಬಹಳ ಸರಳವಾಗಿ ನಡೆಯಿತು. ದೊಡ್ಡವರು ಮದುವೆಗೆ ಒಪ್ಪದ ಕಾರಣಕ್ಕೆ ಹೀಗೆ ಮದುವೆಯಾದದ್ದು ಎಂದು ತಾರಕರತ್ನ ಅವರೇ ಹಲವು ಸಾರಿ ಹೇಳಿದ್ದಾರೆ. ಮನೆಯವರು ಒಪ್ಪದೇ ಇದ್ದರು ಮದುವೆ ಆಗಿದ್ದಕ್ಕೆ ಇವರನ್ನು ಮನೆಯವರು ಕೆಲ ವರ್ಷಗಳು ದೂರ ಇಟ್ಟಿದ್ದರು. ಈ ಸಮಯದಲ್ಲಿ ತಾರಕರತ್ನ ಅವರ ಮನಸ್ಸಿಗೆ ಬಹಳ ನೋವಾಗಿತ್ತು ಎಂದು ಅವರ ಆಪ್ತರು ಹೇಳುತ್ತಾರೆ. ಅಲೇಖ್ಯಾ ರೆಡ್ಡಿ ಅವರಿಗೆ ಇದು ಎರಡನೇ ಮದುವೆ ಆಗಿತ್ತು, ಇಕ ವೈಸಿಪಿ ಸಂಸದ ವಿಜಯಸಾಯಿ ರೆಡ್ಡಿ ಅವರ ಪತ್ನಿಯ ಸಂಬಂಧಿ, ವಿಜಯಸಾಯಿ ರೆಡ್ಡಿ ಅವರಿಗೆ ತಾರಕರತ್ನ ಅವರು ಅಳಿಯನ ಸಂಬಂಧ ಆಗುತ್ತಾರೆ.

ಈ ಜೋಡಿಯ ಮದುವೆಗೆ ಇಬ್ಬರ ಮನೆಯವರು ಕೂಡ ಒಪ್ಪಿರಲಿಲ್ಲ. ಆ ಸಮಯದಲ್ಲಿ ವಿಜಯಸಾಯಿ ರೆಡ್ಡಿ ದೊಡ್ಡಪ್ಪ ಇವರಿಗೆ ಸಪೋರ್ಟ್ ಮಾಡಿದರು ಎಂದು ಸ್ವತಃ ಅಲೇಖ್ಯಾ ರೆಡ್ಡಿ ಹೇಳಿಕೊಂಡಿದ್ದರು. ಅಲೇಖ್ಯಾ ರೆಡ್ಡಿ ಅವರ ಸಹೋದರಿ ಚೆನ್ನೈನಲ್ಲಿ ಸ್ಕೂಲ್ ನಲ್ಲಿ ಓದುತ್ತಿದ್ದರು, ಅಲ್ಲಿ ತಾರಕರತ್ನ ಆಕೆಯ ಸೀನಿಯರ್ ಆಗಿದ್ದರು. ತಾರಕರತ್ನ ಅವರು ಹೈದರಾಬಾದ್ ಗೆ ಬಂದ ನಂತರ, ಇಬ್ಬರು ಫ್ರೆಂಡ್ಸ್ ಮೂಲಕ ಭೇಟಿಯಾದರು. ತಾರಕರತ್ನ ಅವರ ನಂದೀಶ್ವರುಡು ಸಿನಿಮಾಗೆ ಅಲೇಖ್ಯಾ ರೆಡ್ಡಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಆಗ ಇಬ್ಬರ ಪರಿಚಯ ಹೆಚ್ಚಾಗಿ, ಪ್ರೀತಿಯಾಯಿತು. ತಾರಕರತ್ನ ಅವರೇ ಪ್ರೊಪೋಸ್ ಮಾಡಿದರು. ಇದು ಅಲೇಖ್ಯಾ ರೆಡ್ಡಿ ಅವರಿಗೆ ಎರಡನೇ ಮದುವೆ ಆಗಿದ್ದ ಕಾರಣ ಮನೆಯವರು ಒಪ್ಪಲಿಲ್ಲ. ಇದನ್ನು ಓದಿ..Kannada News: ಹೆಚ್ಚು ಬೇಡ, ಸ್ವಲ್ಪ ಕಡಿಮೆ ಮಾಡಿಕೊ, ಜೀವನದಲ್ಲಿ ಉದ್ದಾರ ಆಗುತ್ತೀಯ: ಸಮಂತಾಗೆ ಟಾಪ್ ನಟ ಹೀಗೆ ಹೇಳಿದ್ದು ಯಾಕೆ ಗೊತ್ತೇ?

kannada news tarakaratna love story 1
ದೇಶವನ್ನೇ ಶೇಕ್ ಶೇಕ್ ಮಾಡುವಷ್ಟು ಬ್ಯಾಕ್ ಗ್ರೌಂಡ್ ಇದ್ದರೂ, ಎನ್ಟಿಆರ್ ಅಣ್ಣ, ತಾರಕರತ್ನ ಸೀಕ್ರೆಟ್ ಆಗಿ ಮದುವೆಯಾಗಿದ್ದು ಯಾಕೆ ಗೊತ್ತೆ? 2

ಅಲೇಖ್ಯಾ ರೆಡ್ಡಿ ಅವರು ಮೊದಲೇ ಮಾಜಿ ಗೃಹ ಸಚಿವರಾದ ಎಲಿಮಿನಾಟಿ ಮಾಧವ್ ರೆಡ್ಡಿ ಅವರ ಮಗ ಸಂದೀಪ್ ಅವರೊಡನೆ ಮದುವೆಯಾಗಿದ್ದರು, ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದರು. ಈ ಕಾರಣಕ್ಕೆ ಮನೆಯವರು ಈ ಮದುವೆಯನ್ನು ಒಪ್ಪದೆ, ತಾರಕರತ್ನ ಅವರು ಸೀಕ್ರೆಟ್ ಆಗಿ ಮದುವೆ ಆಗಬೇಕಾಯಿತು. ಈ ಸಮಯದಲ್ಲಿ ಕುಟುಂಬದವರು ಇವರಿಬ್ಬರನ್ನು ದೂರವೇ ಇಟ್ಟರು.. ತಾರಕರತ್ನ ಅವರ ಸ್ವಂತ ತಂಗಿ ರೂಪಾ ಅವರ ಮದುವೆಗೂ ಅಣ್ಣನನ್ನೇ ಕರೆಯಲಿಲ್ಲ. ಮದುವೆಯ ಒಂದು ವರ್ಷದ ನಂತರ ಇವರ ಮಗಳು ನಿಷ್ಕಾ ಹುಟ್ಟಿದಳು, ಮಗೆಳೆಂದರೆ ತಾರಕರತ್ನ ಅವರಿಗೆ ಪ್ರಾಣ. ಮಗಳ ಜೊತೆಗೆ ಅವರು ಹೆಚ್ಚು ಸಮಯ ಕಳೆಯುತ್ತಿದ್ದರು, ಮಗಳ ಜೊತೆಗೆ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿದ್ದರು. ಇದನ್ನು ಓದಿ..Kannada News: ರಾಮ್ ಚರಣ್ ಪತ್ನಿ ಮಾಡಿದ ಅದೊಂದು ಕೆಲಸದಿಂದ, ಚಿರಂಜೀವಿ ಫ್ಯಾಮಿಲಿ ಅಲ್ಲೋಲ ಕಲ್ಲೋಲ. ಏನಾಗಿದೆ ಗೊತ್ತೇ?? ಸೊಸೆ ಮಾಡಿದ್ದು ಏನು ಗೊತ್ತೇ?

Comments are closed.