Cricket News: ಏಕದಿನ ಸರಣಿಗೆ ಮೇಜರ್ ಸರ್ಜರಿ ಮಾಡಿಯೇ ಬಿಟ್ಟ ಭಾರತ: ಹೊರಹೋದ ಆಟಗಾರರು ಯಾರು ಗೊತ್ತೇ? ವಾಪಾಸ್ ಬಂದ ಖಡಕ್ ಪ್ಲೇಯರ್ಸ್ ಯಾರು ಗೊತ್ತೆ?

Cricket News: ಟೀಮ್ ಇಂಡಿಯಾ ಈಗ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇದಾದ ನಂತರ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ 18 ಸದಸ್ಯರ ತಂಡವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಗೆ ಆಯ್ಕೆಯಾಗಿದ್ದ ಆಟಗಾರರ ಪೈಕಿ ಮೂವರು ಆಟಗಾರರನ್ನು ಬಿಸಿಸಿಐ ಕೈಬಿಡಲಾಗಿದೆ, ಹಾಗೆಯೇ ಐವರು ಹೊಸ ಆಟಗಾರರು ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಆ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ…

ತಂಡದಿಂದ ಹೊರಬಿದ್ದಿರುವ ಆಟಗಾರರು ಯಾರ್ಯಾರು ಎಂದು ನೋಡುವುದಾದರೆ..ರಜತ್ ಪಾಟಿದಾರ್, ಇವರಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು, ಆದರೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ಕಿರಲಿಲ್ಲ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಇವರು ಆಯ್ಕೆಯಾಗಿಲ್ಲ. ಶಹಬಾಜ್ ಅಹ್ಮದ್, ಇವರು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಲ್ ರೌಂಡರ್ ಆಗಿ ಆಯ್ಕೆಯಾಗಿದ್ದರು, ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ. ಶ್ರೀಕರ್ ಭರತ್, ಇವರು ನ್ಯೂಜಿಲೆಂಡ್ ವಿರುದ್ಧ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರು, ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ. ಇದನ್ನು ಓದಿ..Cricket News: ಎಲ್ಲವೂ ಉಲ್ಟಾ ಪಲ್ಟಾ; ಪೃತ್ವಿ ಶಾ ಪ್ರಕರಣದಲ್ಲಿ ಅವರು ಯಾರೆಂದೇ ತಿಳಿದಿಲ್ಲ ಎಂದು ಬಿಟ್ಟರು. ಟಿಕ್ ಟಾಕ್ ಸ್ಟಾರ್ ಸ್ವಪ್ನ ಅರೆಸ್ಟ್ ಆದಮೇಲೆ ಏನಾಗಿದೆ ಗೊತ್ತೇ??

cricket news team india vs aus odi series kannada news Cricket News:

ತಂಡಕ್ಕೆ ಎಂಟ್ರಿ ಕೊಟ್ಟಿರುವ ಆಟಗಾರರು ಯಾರ್ಯಾರು ಎಂದು ನೋಡುವುದಾದರೆ.. ರವೀಂದ್ರ ಜಡೇಜಾ, ಹಿಂದಿನ 5 ತಿಂಗಳುಗಳಿಂದ ಟೀಮ್ ಇಂಡಿಯಾ ಇಂದ ಹೊರಗಿದ್ದ ಇವರು ಟೆಸ್ಟ್ ಸರಣಿ ಮೂಲಕ ಕಂಬ್ಯಾಕ್ ಮಾಡಿ, ಏಕದಿನ ಸರಣಿಗೂ ಆಯ್ಕೆಯಾಗಿದ್ದಾರೆ. ಕೆ.ಎಲ್.ರಾಹುಲ್, ಇವರ ಮದುವೆ ಕಾರಣದಿಂದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿರಲಿಲ್ಲ, ಈಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಅಕ್ಷರ್ ಪಟೇಲ್, ಆಲ್ ರೌಂಡರ್ ಆಗಿರುವ ಅಕ್ಷರ್ ಪಟೇಲ್ ಅವರು ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾಗದೆ ಈಗ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಇವರು ಗಾಯಕ್ಕೆ ಒಳಗಾಗಿದ್ದರು, ಈಗ ಅಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ..

ಜಯದೇವ್ ಉನಾದ್ಕಟ್, ಇವರು ಎಡಗೈ ವೇಗಿ, ಜಯದೇವ ಅವರು ಕೂಡ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರಲಿಲ್ಲ, ಆದರೆ ಈಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟಾರೆಯಾಗಿ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ.. ಹಾರ್ದಿಕ್ ಪಾಂಡ್ಯ (ಮೊದಲ ಪಂದ್ಯಕ್ಕೆ ಕ್ಯಾಪ್ಟನ್) ರೋಹಿತ್ ಶರ್ಮಾ (ಮೊದಲ ಪಂದ್ಯಕ್ಕೆ ಇರುವುದಿಲ್ಲ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನಾದ್ಕಟ್. ಇದನ್ನು ಓದಿ..Cricket News: ಪೃತ್ವಿ ಶಾ ರವರ ಮೇಲೆ ಹಲ್ಲೆ ನಡೆಸಿರುವ ಈ ಸುಂದರಿ ಸಪ್ನಾ ಗಿಲ್ ಯಾರು ಗೊತ್ತೇ?? ಇವಳ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Comments are closed.