Kannada News: ಕಾಂತಾರ ಗೆಲ್ಲಲು ಕಾರಣ ರಿಷಬ್ ನಟನೆ ಅಲ್ಲವೇ ಅಲ್ಲ, ಅದಕ್ಕಿಂತ ಮಿಗಿಲಾದದ್ದು ಆ ನಟ ಯಾರು ಗೊತ್ತೇ??

Kannada News: ಕಾಂತಾರ (Kantara) ಸಿನಿಮಾ ಕನ್ನಡದ ಹೆಮ್ಮೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಸಿನಿಮಾವನ್ನು ಭಾರತಾದ್ಯಂತ ಚಿತ್ರಪ್ರೇಮಿಗಳು ಬಹಳ ಇಷ್ಟಪಟ್ಟಿದ್ದಾರೆ. ಕಾಂತಾರ ಸಿನಿಮಾ ತುಳುನಾಡಿನ ಸಂಸ್ಕೃತಿ ಆಚರಣೆಯನ್ನು ಜನರಿಗೆ ತಿಳಿಸಿದ ಸಿನಿಮಾ. ಈ ಸಿನಿಮಾ ಎಲ್ಲಾ ಭಾಷೆಗಳಲ್ಲೂ ತೆರೆಕಂಡು, ಎಲ್ಲದರಲ್ಲೂ ಯಶಸ್ಸು ಕಂಡು ಬಹಳಷ್ಟು ದಾಖಲೆಗಳನ್ನು ಸೃಷ್ಟಿಸಿತು. ಕಾಂತಾರ ನೋಡಿದ ಸಿನಿಪ್ರಿಯರು ಮಂತ್ರಮುಗ್ಧರಾಗಿದ್ದಂತೂ ನಿಜ. ಈ ಕಾಂತಾರ ಇಂದ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಕರ್ನಾಟಕದ ಕಡೆಗೆ ತಿರುಗಿ ನೋಡುವ ಹಾಗೆ ಆಯಿತು.

ಕಾಂತಾರ ಸಿನಿಮಾದ ಕಥೆ, ಚಿತ್ರಕಥೆ ಬರೆದು, ಸಂಭಾಷಣೆಯಲ್ಲಿ ತೊಡಗಿಸಿಕೊಂಡು, ಸಿನಿಮಾವನ್ನು ನಿರ್ದೇಶನ ಮಾಡಿ, ನಟನೆ ಸಹ ಮಾಡಿ ಸಿನಿಮಾದ ಯಶಸ್ಸಿಗೆ ಸಂಪೂರ್ಣ ಕಾರಣ ರಿಷಬ್ ಶೆಟ್ಟಿ (Rishab Shetty) ಅವರೇ ಎಂದು ಎಲ್ಲರೂ ಅಂದುಕೊಂಡಿದ್ದರು. ಅದು ನಿಜವು ಹೌದು, ಆದರೆ ರಿಷಬ್ ಅವರನ್ನು ಹೊರತುಪಡಿಸಿ ಮತ್ತೊಬ್ಬ ನಟ ಕೂಡ ಈ ಯಶಸ್ಸಿನಲ್ಲಿ ಸಮಪಾಲು ಪಡೆಯುತ್ತಾರೆ. ಆ ನಟ ಯಾರು? ಕಾಂತಾರ ಸಿನಿಮಾದ ಯಶಸ್ಸು ಅವರಿಗೆ ಯಾಕೆ ಸಿಗಬೇಕು? ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ತಾರಕರತ್ನ ಹೀಗೆ ಆಗಲು ಕಾರಣ ಏನಿರಬಹುದೇ?? ಜೊತೆಗೆ ಇರಬೇಕಾದವರೇ ಇದಕ್ಕೆ ಕಾರಣನಾ?? ಷಾಕಿಂಗ್ ವಿಚಾರಗಳು ಬಯಲಿಗೆ.

kannada news kantara latest update Kannada News:
Kannada News: ಕಾಂತಾರ ಗೆಲ್ಲಲು ಕಾರಣ ರಿಷಬ್ ನಟನೆ ಅಲ್ಲವೇ ಅಲ್ಲ, ಅದಕ್ಕಿಂತ ಮಿಗಿಲಾದದ್ದು ಆ ನಟ ಯಾರು ಗೊತ್ತೇ?? 2

ಆ ನಟ ಮತ್ಯಾರು ಅಲ್ಲ, ರಾಜ್ ಬಿ ಶೆಟ್ಟಿ (Raj B Shetty) ಅವರು. ಕಾಂತಾರ ಸಿನಿಮಾದಲ್ಲಿ ಎಲ್ಲಕ್ಕಿಂತ ಹೆಚ್ಚು ಹೈಲೈಟ್ ಆಗಿದ್ದು, ಕ್ಲೈಮ್ಯಾಕ್ಸ್ ದೃಶ್ಯ. ದೈವದ ದೃಶ್ಯಗಳನ್ನು ನೋಡಿದ ಜನರು ಒಂದು ಕ್ಷಣ ಬೆರಗಾಗಿದ್ದಂತೂ ನಿಜ. ಆ ದೃಶ್ಯವನ್ನು ಚಿತ್ರೀಕರಣ ಮಾಡಿದ್ದು ನಿರ್ದೇಶಿಸಿದ್ದು ರಾಜ್ ಬಿ ಶೆಟ್ಟಿ ಅವರು, ರಿಷಬ್ ಅವರು ದೈವದ ವೇಷ ಹಾಕಿದ್ದರಿಂದ, ಅವರಿಗೆ ಈ ದೃಶ್ಯಗಳಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡುವುದು ಸ್ವಲ್ಪ ಕಷ್ಟವಾಗಿತ್ತು, ಹಾಗಾಗಿ ರಾಜ್ ಬಿ ಶೆಟ್ಟಿ ಅವರು ಜೊತೆಗಿದ್ದು, ನೋಡಿಕೊಂಡಿದ್ದರು. ಈ ಕಾರಣಕ್ಕೆ ಸಿನಿಮಾದ ಯಶಸ್ಸಿನ ಪಾಲು ರಾಜ್ ಬಿ ಶೆಟ್ಟಿ ಅವರಿಗು ಸೇರುತ್ತದೆ. ಇದನ್ನು ಓದಿ..Kannada News: ವರ್ಷಗಳು ಕಳೆದ ಮೇಲೆ ವಾಪಸ್ಸು ಬಂದ ಕನ್ನಡಿಗರ ಮನ ಕದ್ದ ಚೆಲುವೆ: ಪ್ರೇಮ್ ಚಿತ್ರಕ್ಕೆ ನಾಯಕಿ ಯಾರು ಗೊತ್ತೇ? ಇವರು ನಿಜವಾದ ಕರ್ನಾಟಕದ ಕ್ರಶ್.

Comments are closed.