Kannada News: ಇಂದಿದ್ದು ಈಗಾಗಿದ್ದ ಬೇಬಿ ಶಾಮಿಲಿ ಈಗ ಹೇಗಾಗಿದ್ದರೆ ಗೊತ್ತೇ? ಅವಕಾಶ ಸಿಗದೇ ಇದ್ದರೂ ಹೇಗೆ ಬದುಕುತ್ತಿದ್ದಾರೆ ಗೊತ್ತೇ?
Kannada News: ಚಿತ್ರರಂಗ ಚೈಲ್ಡ್ ಆರ್ಟಿಸ್ಟ್ ಆಗಿ ಬಂದ ಎಲ್ಲರೂ ಹೀರೋಯಿನ್ ಆಗಿಯು ಸಕ್ಸಸ್ ಕಾಣುತ್ತಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇದಕ್ಕೆ ಅನೇಕ ಉದಾಹರಣೆಗಳು ಇದೆ, ಅವರಲ್ಲಿ ಒಬ್ಬರು ನಟಿ ಬೇಬಿ ಶಾಮಿಲಿ. ಇವರು ಒಂದುವರೆಯಿಂದ ಎರಡು ವರ್ಷದ ಮಗು ಆಗಿದ್ದಾಗಲೇ ಚೈಲ್ಡ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಗೆ ಮತ್ತೆ ಹಾಡಿತು ಕೋಗಿಲೆ ಸಿನಿಮಾದಲ್ಲಿ ಎಷ್ಟು ಮುದ್ದಾಗಿ ಅಭಿನಯಿಸಿದ್ದಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾ ನಂತರ ಶಾಮಿಲಿ (Shamili) ಕನ್ನಡದಲ್ಲಿ ಅನೇಕ ಮಕ್ಕಳ ಸಿನಿಮಾದಲ್ಲಿ ನಟಿಸಿದರು.
ಕನ್ನಡ, ತೆಲುಗು, ತಮಿಳು ಹೀಗೆ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ಚೈಲ್ಡ್ ಆರ್ಟಿಸ್ಟ್ ಆಗಿದ್ದರು ಶಾಮಿಲಿ. ಇವರ ಅಕ್ಕ ಶಾಲಿನಿ ಕೂಡ ಚೈಲ್ಡ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡು, ಹೀರೋಯಿನ್ ಆಗಿಯೂ ಬಹಳ ಹೆಸರು ಮಾಡಿದ್ದಾರೆ. ಅಣ್ಣ ರಿಷಿ ರಿಚರ್ಡ್ ಕೂಡ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದರೆ ಇವರಿಗೆ ಅಷ್ಟೇನು ಒಳ್ಳೆಯ ಹೆಸರು ಬರಲಿಲ್ಲ. ಬೇಬಿ ಶಾಮಿಲಿ ಅವರು ಚೈಲ್ಡ್ ಆರ್ಟಿಸ್ಟ್ ಆಗಿ 50ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಬಳಿಕ ಒಂದು ಬ್ರೇಕ್ ಪಡೆದರು, ಬಳಿಕ ಸಿದ್ಧಾರ್ಥ್ ಅವರ ಓಯ್ ಸಿನಿಮಾ ಮೂಲಕ ಹೀರೋಯಿನ್ ಆಗಿ ಕಂಬ್ಯಾಕ್ ಮಾಡಿದರು, ಆದರೆ ಈ ಸಿನಿಮಾ ಸಕ್ಸಸ್ ಕಾಣಲಿಲ್ಲ.

ಚಿಕ್ಕ ವಯಸ್ಸಿನಲ್ಲಿ ಇದ್ದಂಥ ಕ್ಯೂಟ್ನೆಸ್ ಹೀರೋಯಿನ್ ಆಗಿ ಇರಲಿಲ್ಲ ಎನ್ನುವ ಕಾರಣಕ್ಕೆ ಶಾಮಿಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಶಾಮಿಲಿ ಅವರು ಮತ್ತೊಮ್ಮೆ ಸಿನಿಮಾ ಇಂದ ದೂರ ಉಳಿದು, ಸ್ವಲ್ಪ ಸಣ್ಣ ಆಗಿ ಕಂಬ್ಯಾಕ್ ಮಾಡಿದರು, ಆದರೆ ಆ ಸಮಯಕ್ಕೆ ಹಲವು ಹೊಸ ನಾಯಕಿಯರ ಎಂಟ್ರಿ ಆಗಿ ಟ್ರೆಂಡ್ ಕೂಡ ಚೇಂಜ್ ಆಗಿತ್ತು. ಹಾಗಾಗಿ ಇವರ ಸೆಕೆಂಡ್ ಇನ್ನಿಂಗ್ಸ್ ಕೂಡ ಹೇಳಿಕೊಳ್ಳುವಂಥ ಯಶಸ್ಸು ನೀಡಲಿಲ್ಲ. ಈಗ ಚಿತ್ರರಂಗದಿಂದ ಪೂರ್ತಿ ದೂರ ಆಗಿದ್ದಾರೆ ಶಾಮಿಲಿ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರು, ಇತ್ತೀಚೆಗೆ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅವುಗಳು ಈಗ ವೈರಲ್ ಆಗಿವೆ.
Comments are closed.