Kannada News: ರೀಲ್ಸ್ ಮೂಲಕ ಎಲ್ಲರ ಹೃದಯ ಜಲ್ ಜಲ್ ಅನ್ನುವಂತೆ ಮಾಡಿದ್ದ ಯುವತಿಗೆ ಬಿಗ್ ಶಾಕ್ ಕೊಟ್ಟ ಪೊಲೀಸರು. ಯಾಕೆ ಗೊತ್ತೇ? ಏನಾಗುತ್ತಿದೆ ಗೊತ್ತೇ?

Kannada News: ಇದು ಸೋಷಿಯಲ್ ಮೀಡಿಯಾ ಯುಗ, ಈಗ ಎಲ್ಲರೂ ಇನ್ಸ್ಟಾಗ್ರಾಮ್ ಯೂಟ್ಯೂಬ್ ಮೂಲಕ ರೀಲ್ಸ್ ಅಪ್ಲೋಡ್ ಮಾಡಿ, ಡ್ಯಾನ್ಸ್ ಮಾಡಿ, ಅಥವಾ ಅವರ ಬೇರೆ ಟ್ಯಾಲೆಂಟ್ ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವ ಪ್ರಯತ್ನ ಮಾಡುತ್ತಿದ್ದಾರೆ. ಹಲವರು ಈಗಾಗಲೇ ಯೂಟ್ಯೂಬ್, ಇನ್ಸ್ಟಾಗ್ರಾಮ್ ಮೂಲಕ ಖ್ಯಾತಿ ಪಡೆದು ಸ್ಟಾರ್ ಆಗುವುದರ ಜೊತೆಗೆ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಹೀಗೆ ಇನ್ಸ್ಟಾಗ್ರಾಮ್ ಇಂದ ಹೆಸರು ಮಾಡಿರುವ Social Media Influencer ತಮನ್ನಾ ಅವರು ತಾನು ಮಾಡಿದ ವಿಡಿಯೋ ಇಂದ ತೊಂದರೆಗೆ ಸಿಲುಕಿಕೊಂಡಿದ್ದು, ತಪ್ಪಿಸಿಕೊಂಡಿರುವ ಈಕೆಯನ್ನು ಪೊಲೀಸರು ಹುಡುಕುತ್ತಿದ್ದಾರೆ.

ಈ ಹುಡುಗಿ ತಮನ್ನಾ ತಮಿಳು ನಾಡಿನ ಕೊಯಮತ್ತೂರು ಜಿಲ್ಲೆಗೆ ಸೇರಿದ ಹುಡುಗಿ. ಫ್ಯಾನ್ಸ್ ಕಾಲ್ ಮಿ ತಮನ್ನಾ ಹೆಸರಿನ ಇನ್ಸ್ಟ್ಯಾಗ್ರ್ ಖಾತೆ ಈಕೆಯದ್ದು. ಈಕೆಗೆ ಇನ್ಸ್ಟಾಗ್ರಾಮ್ ನಲ್ಲಿ ದೊಡ್ಡ ಮಟ್ಟದ ಫಾಲೋಯಿಂಗ್ ಇದೆ. ಈ ಹುಡುಗಿ ಆಗಾಗ ಯುವಜನತೆಗೆ ಬೇರೆ ರೀತಿಯ ಉತ್ತೇಜನ ನೀಡುವಂಥ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಳು. ಸ್ಮೋಕ್ ಮಾಡುವುದು, ಕತ್ತಿಯ ತಂತ್ರಗಳನ್ನು ತೋರಿಸುವುದು ಇಂಥಹ ವಿಚಾರಗಳನ್ನು ಈಕೆಯ ವಿಡಿಯೋಗಳಲ್ಲಿ ಕಾಣಬಹುದು. ಈಕೆ ಶೇರ್ ಮಾಡುವ ಇಂಥಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇದು ಪೋಲೀಸರ ಗಮನಕ್ಕೂ ಬಂದಿದ್ದು, ಈಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಈ ವಿಚಾರ ಗೊತ್ತಾಗಿ ಆಕೆ ಊರನ್ನೇ ಬಿಟ್ಟು ಹೋಗಿದ್ದಾಳೆ. ಇದನ್ನು ಓದಿ..Kannada News: ಹಿರಿಯ ನಟ ಅನುಪಮ್ ಖೇರ್ ರವರ ಹೆಂಡತಿಯನ್ನು ನೋಡಿದ್ದೀರಾ ಹೇಗಿದ್ದಾರೆ ಗೊತ್ತೇ? ಹೇಗಿದ್ದಾರೆ ಗೊತ್ತೇ??

influencer tamanna in tamil nadu Kannada News:

ಇದೀಗ ಪೊಲೀಸರು ಈ ಹುಡುಗಿಯನ್ನು ಟ್ರ್ಯಾಕ್ ಮಾಡಿ ಹಿಡಿಯಲು ಒಂದು ವಿಶೇಷ ತಂಡವನ್ನೇ ಮಾಡಿಕೊಂಡಿದ್ದಾರೆ. ಆಕೆಯನ್ನು ಆದಷ್ಟು ಬೇಗ ಬಂಧಿಸಬೇಕು ಎಂದುಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಫೋಟೋ ಸಹ ಪೋಸ್ಟ್ ಮಾಡಿ, ಈಕೆಯ ಹೆಸರು ತಮನ್ನಾ, ಫ್ಯಾನ್ಸ್ ಕಾಲ್ ಮಿ ತಮನ್ನಾ ಇನ್ಸ್ಟಾಗ್ರಾಮ್ ಅಕೌಂಟ್ ಇಂದ ಪ್ರಾಣಕ್ಕೆ ಅಪಾಯ ಮಾಡಬಹುದಾದ ವಸ್ತುಗಳ ವಿಡಿಯೋ ಹಾಕಿದ್ದಾರೆ.. ಈ ಹುಡುಗಿಯನ್ನು ನಗರದ ಪೊಲೀಸರು ಆದಷ್ಟು ಬೇಗ ಹಿಡಿಯಲು ವಿಶೇಷ ತಂಡ ರಚಿಸಿದ್ದಾರೆ ಎಂದು ಬರೆದಿದ್ದಾರೆ. ನೆಟ್ಟಿಗರು ಈಕೆಯ ವಿಡಿಯೋ ನೋಡಿ, ಇದಕ್ಕೆ ಅರ್ಥವಿಲ್ಲ ಎಂದು ಬಯ್ಯುತ್ತಿದ್ದಾರೆ. ಇದನ್ನು ಓದಿ..Kannada News: ಆತ ಬಾಲಕ ಜೀವನದಲ್ಲಿ ಅಂತಹ ಕಾರ್ ಅನ್ನು ನೋಡಿರಲಿಲ್ಲ, ಹೊಸ ಕಾರು ನೋಡಿ ಒರಗಿ ನಿಂತಾಗ ಬಂದ ಮಾಲೀಕ ಏನು ಮಾಡಿದ್ದಾನೆ ಗೊತ್ತೇ??

Comments are closed.