Kannada Astrology: ಇನ್ನು ಜಸ್ಟ್ 8 ದಿನ ಆದ್ಮೇಲೆ ಈ ರಾಶಿಗಳ ಆಟ ಶುರು: ಬದುಕಿನಲ್ಲಿ ದೊಡ್ಡ ಬದಲಾವಣೆ ಖಚಿತ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಪ್ರತಿ ಗ್ರಹದ ಸ್ಥಾನ ಬದಲಾವಣೆ ಕೂಡ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಇದೀಗ ಮಾರ್ಚ್ 16ರವರೆಗೂ ಬುಧ ಗ್ರಹವು ಕುಂಭ ರಾಶಿಯಲ್ಲಿ ಇರುತ್ತದೆ. ಇದರಿಂದ ಕೆಲವು ರಾಶಿಗಳಲ್ಲಿ ಪಾಸಿಟಿವ್ ಆಗಿ ಬದಲಾವಣೆಗಳು ಉಂಟಾಗುತ್ತದೆ. ಬುಧ ಗ್ರಹದ ಆಶೀರ್ವಾದ ಇರುವ ಜನರು ಚೆನ್ನಾಗಿ ಮಾತನಾಡುತ್ತಾರೆ, ಈ ಕಾರಣಕ್ಕೆ ಜನರು ಅವರ ಕಡೆಗೆ ಆಕರ್ಷಣೆಗೆ ಒಳಗಾಗುತ್ತಾರೆ. ಯಾರ ಜಾತಕದಲ್ಲಿ ಬುಧ ಗ್ರಹವು ಒಳ್ಳೆಯ ಸ್ಥಾನದಲ್ಲಿ ಇರುತ್ತದೆಯೋ, ಆ ರಾಶಿಯವರಿಗೆ ಒಳ್ಳೆಯ ಫಲ ಸಿಗುತ್ತದೆ. ಬುಧ ಗ್ರಹದಿಂದ ಉತ್ತಮ ಫಲಿತಾಂಶ ಪಡೆಯುವ ಯಾವೆಲ್ಲಾ ರಾಶಿಗಳಿವೆ ಎಂದು ತಿಳಿಸುತ್ತೇವೆ ನೋಡಿ..

ವೃಶ್ಚಿಕ ರಾಶಿ :- ಈ ರಾಶಿಯ 8ನೇ ಮತ್ತು 11ನೇ ಮನೆಗೆ ಬುಧ ಗ್ರಹವು ಅಧಿಪತಿ ಆಗಿದ್ದಾನೆ. ಪ್ರಸ್ತುತ ಬುಧ ಗ್ರಹದ ಸಂಚಾರ 4ನೇ ಮನೆಯಲ್ಲಿ ನಡೆಯುತ್ತದೆ. ಈ ಕಾರಣದಿಂದ ನೀವು ಮಾಡುವ ಕೆಲಸಗಳಿಗೆ ಮಿಶ್ರ ಫಲಿತಾಂಶ ಸಿಗಬಹುದು. ಕೆಲಸದಲ್ಲಿ ನಿಮಗೆ ಭದ್ರತೆ ಇಲ್ಲ ಅನ್ನಿಸಬಹುದು. ಉದ್ಯೋಗ ಚೇಂಜ್ ಆಗುವ ಸಾಧ್ಯತೆ ಕೂಡ ಇದೆ. ಬುಧ ಸಂಚಾರದಿಂದ ನೀವು ರಿಯಲ್ ಎಸ್ಟೇಟ್ ನಲ್ಲಿ ಖರೀದಿ ಅಥವಾ ಹೂಡಿಕೆ ಮಾಡುವ ಸಾಧ್ಯತೆ ಇದೆ. ಮನೆಯವರ ಜೊತೆಗೆ ನೀವು ಚೆನ್ನಾಗಿರುತ್ತೀರಿ. ಇದನ್ನು ಓದಿ..Kannada Astrology: ಇನ್ನು ಕೇವಲ 10 ದಿನ ಮಾತ್ರ ಈ ರಾಶಿಯವರಿಗೆ ಕಷ್ಟ: ಆಮೇಲೆ ಮುಟ್ಟಿದೆಲ್ಲಾ ಚಿನ್ನ. ಏನೇನೋ ಮುಟ್ಟೋಕೆ ಹೋಗ್ಬೇಡಿ, ಯಾವ ರಾಶಿಗಳಿಗೆ ಗೊತ್ತೇ??
ವೃಷಭ ರಾಶಿ :- ಈ ರಾಶಿಯ 2ನೇ ಮತ್ತು 5ನೇ ಮನೆಗೆ ಬುಧ ಗ್ರಹ ಅಧಿಪತಿ ಆಗಿದೆ. ಬುಧ ಗ್ರಹದ ಸಂಚಾರ ಕುಂಭ ರಾಶಿಯಲ್ಲಿ ಆದಾಗ ನಿಮ್ಮ ರಾಶಿಯ 10ನೇ ಮನೆಗೆ ಪ್ರವೇಶ ಮಾಡಿರುತ್ತದೆ. ಇದರಿಂದ ನಿಮ್ಮ ಉದ್ಯೋಗಕ್ಕೆ ಅನುಕೂಲ. ಉದ್ಯೋಗದಲ್ಲಿ ನಿಮಗೆ ಮೆಚ್ಚುಗೆ ಸಿಗುತ್ತದೆ. ನಿಮ್ಮಲ್ಲಿರುವ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ, ಬ್ಯುಸಿನೆಸ್ ನಲ್ಲಿ ಯಶಸ್ಸು ಪಡೆಯಲು ಇದು ಒಳ್ಳೆಯ ಸಮಯ. ಒಂದು ವೇಳೆ ನೀವು ಮನೆಯವರ ಪೂರ್ವಿಕರ ಬ್ಯುಸಿನೆಸ್ ಮಾಡುತ್ತಿದ್ದರೆ ಹೆಚ್ಚು ಲಾಭ ಪಡೆಯುತ್ತೀರಿ. ಈ ವೇಳೆ ಹೆಚ್ಚು ಹಣವನ್ನು ಪಡೆಯುತ್ತೀರಿ.

ಮಿಥುನ ರಾಶಿ :- ಈ ರಾಶಿಯ ಅಧಿಪತಿ ಬುಧ ಗ್ರಹ, ಈ ರಾಶಿಯ 1ನೇ ಮತ್ತು 4ನೇ ಮನೆಗೆ ಬುಧ ಗ್ರಹನೇ ಅಧಿಪತಿ. ಈ ವೇಳೆ ಬುಧ ಗ್ರಹ ನಿಮ್ಮ ರಾಶಿಯ 9ನೇ ಮನೆಗೆ ಪ್ರವೇಷ ಮಾಡುತ್ತದೆ. ಇದು ಅದೃಷ್ಟದ ಮನೆ ಆಗಿದ್ದು, ಬುಧ ಗ್ರಹ ಈ ಮನೆಗೆ ಬರುವುದರಿಂದ ನಿಮ್ಮ ಉದ್ಯೋಗದ ವಿಷಯದಲ್ಲಿ ನಿಮಗೆ ಒಳ್ಳೆಯ ಬದಲಾವಣೆ ಆಗಬಹುದು. ನಿಮ್ಮ ಆದಾಯದ ಜೊತೆಗೆ ಅದೃಷ್ಟ ಕೂಡ ಸೇರಿಕೊಳ್ಳುವ ಸಾಧ್ಯತೆ ಇರುವುದರಿಂದ, ನಿಮ್ಮ ಎಲ್ಲಾ ಆಸೆಗಳು ಈ ಸಮಯದಲ್ಲಿ ಪೂರೈಸಬಹುದು. ಹಣ ಖರ್ಚು ಮಾಡುವುದಕ್ಕೂ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Kannada Astrology: ಬರೋಬ್ಬರಿ 700 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ರಾಜಯೋಗ: ಈ 5 ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೆ?
Comments are closed.