Kannada News: ತಾಯಿಯ ಆಯಸ್ಸು ಮುಗಿಯುತ್ತಿದೆ ಎಂದು ತಿಳಿದರೂ ಕೂಡ ಮಗಳು ಏನು ಮಾಡಿದ್ದಾಳೆ ಗೊತ್ತೇ??
Kannada News: ಬೇರೆ ಊರಿನಿಂದ ಬೆಂಗಳೂರಿಗೆ ವಲಸೆ ಬಂದ ಮಹಿಳೆ ಶಿಖಾ ರಾಣಿ, ಈಕೆಯ ಗಂಡ ಸರಿಯಾಗಿ ನೋಡಿಕೊಳ್ಳಲಿಲ್ಲ, ಇವರು ಮಗಳ ಜೊತೆಗೆ ಬೆಂಗಳೂರಿನಲ್ಲಿ ಇದ್ದರು. ಬಹಳ ಕಷ್ಟಪಟ್ಟು ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಅವಳನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿದರು. ಇವರ ಮಗಳ ಹೆಸರು ಜಯಾ. ಮಗಳು ದೊಡ್ಡವಳಾದಳು ಅವಳಿಗೆ ಮದುವೆ ಮಾಡಬೇಕು ಎಂದುಕೊಂಡು ಮದುವೆ ಬಗ್ಗೆ ಮಾತನಾಡಿದಾಗ, ಅವರ ಮಗಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ಹೇಳಿ, ಅವರ ಮನೆಯಲ್ಲೆಲ್ಲಾ ಒಪ್ಪಿದ್ದಾರೆ ನೀನು ಒಪ್ಪಬೇಕು ಎನ್ನುತ್ತಾಳೆ. ಆಗ ತಾಯಿ ತನ್ನ ಮಗಳು ಒಳ್ಳೆಯ ಹುಡುಗನನ್ನೇ ಆಯ್ಕೆ ಮಾಡಿರುತ್ತಾಳೆ ಎಂದು ಮದುವೆಗೆ ಒಪ್ಪಿಗೆ ಕೊಡುತ್ತಾಳೆ.
ಎಂಗೇಜ್ಮೆಂಟ್ ಫಿಕ್ಸ್ ಆದಾಗ ಹುಡುಗನ ಮನೆಯಲ್ಲಿ ನಡೆಯುವುದರಿಂದ ಇವರು ಹೋಗಬೇಕಾದಾಗ, ನೀನು ಹೋಗಮ್ಮ ನಾನು ನಾಳೆ ಬೆಳಗ್ಗೆ ಬರುತ್ತೇನೆ ಎಂದು ಆಕೆಯ ತಾಯಿ ಹೇಳುತ್ತಾರೆ. ಹಾಗೆಯೇ ಮಗಳು ಹೋಗಿ, ಎಂಗೇಜ್ಮೆಂಟ್ ಗೆ ತಯಾರಿ ಮಾಡಿಕೊಳ್ಳುವಾಗ, ಇದ್ದಕ್ಕಿದ್ದ ಹಾಗೆ ಫೋನ್ ಬಂದು, ನಿಮ್ಮ ತಾಯಿಯನ್ನು ಅಡ್ಮಿಟ್ ಮಾಡಲಾಗಿದೆ ಈ ಕೂಡಲೇ ಬನ್ನಿ ಎಂದು ಹೇಳುತ್ತಾರೆ. ಮಗಳು ಎಂಗೇಜ್ಮೆಂಟ್ ಅನ್ನು ಕೂಡ ಬಿಟ್ಟು ಹೋಗುತ್ತಾಳೆ, ಆಸ್ಪತ್ರೆಯಲ್ಲಿ ಡಾಕ್ಟರ್ ನಿಮ್ಮ ತಾಯಿಗೆ ಎರಡು ಕಿಡ್ನಿ ಫೆಲ್ಯೂರ್ ಆಗಿದೆ, ಕಿಡ್ನಿ ಡೊನೇಟ್ ಮಾಡೋದಕ್ಕೆ ಯಾರಾದರೂ ಇದ್ದರೆ, ಈ ಕೂಡಲೇ transplant ಮಾಡಬಹುದು ಎನ್ನುತ್ತಾರೆ. ಆಗ ಅವರ ಮಗಳು ನಾನೇ ಕಿಡ್ನಿ ಕೊಡುತ್ತೇನೆ ಎನ್ನುತ್ತಾರೆ. ಆಗ ಮದುವೆ ಆಗುವ ಹುಡುಗ, ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ, ನೀನು ಕಿಡ್ನಿ ಕೊಟ್ಟರೆ ಈ ಮದುವೆ ನಡೆಯುವುದಿಲ್ಲ ಎನ್ನುತ್ತಾನೆ. ಇದನ್ನು ಓದಿ..Kannada News: ಮೂರು ಮಕ್ಕಳು ಆಗುವವರೆಗೂ ಎಲ್ಲವನು ಬಚ್ಚಿಟ್ಟಿದ್ದ ಗಂಡ: ರಂಭಾ ಜೀವನದಲ್ಲಿ ಶೇಕ್ ಶೇಕ್; ಪಾಪ ನಟಿಗೆ ಏನಾಗಿದೆ ಗೊತ್ತೇ?? ಗಂಡ ಏನು ಮಾಡಿದ್ದಾನೆ ಗೊತ್ತೇ?

ಆದರೆ ಜಯಾ ಈ ಮಾತಿಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ, ನನಗೆ ನನ್ನ ತಾಯಿ ಮುಖ್ಯ ಎಂದು ತನ್ನ ಒಂದು ಕಿಡ್ನಿಯನ್ನು ತಾಯಿಗೆ ಕೊಡುತ್ತಾಳೆ. ಈ ಎಲ್ಲವನ್ನೂ ನೋಡಿದ್ದ ಮಣಿಪಾಲ್ ಆಸ್ಪತ್ರೆಯ ಡಾಕ್ಟರ್ ಶಂಕರ್ ಸುಂದರನ್ ಅವರು ಜಯಾಳ ಒಳ್ಳೆಯತನ ತಾಯಿಯ ಮೇಲೆ ಆಕೆಗೆ ಇಫ್ದ ಪ್ರೀತಿ ನೋಡಿ, ಆಕೆಯನ್ನು ಇಷ್ಟಪಟ್ಟು ಮದುವೆ ಆಗುವುದಕ್ಕೆ ನಿರ್ಧಾರ ಮಾಡಿ, ಅವಳ ತಾಯಿಯನ್ನು ಕೇಳುತ್ತಾರೆ. ಆಗ ಅವರ ತಾಯಿ, ಅವಳಿಗೆ ಒಂದು ಕಿಡ್ನಿ ಇಲ್ಲ ಎಂದಾಗ, ಅವಳಿಗೆ ಒಂದು ಕಿಡ್ನಿ ಇಲ್ಲ ಅಂದ್ರು ಪರವಾಗಿಲ್ಲ ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ, ಜಯಾಳನ್ನು ಮದುವೆಯಾಗಿ ಇಂದು ಶಿಖಾ ರಾಣಿ ಅವರನ್ನು ಇಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದಾರೆ. ಇದನ್ನು ಓದಿ..Kannada News: ಮೂರು ಮಕ್ಕಳು ಆಗುವವರೆಗೂ ಎಲ್ಲವನು ಬಚ್ಚಿಟ್ಟಿದ್ದ ಗಂಡ: ರಂಭಾ ಜೀವನದಲ್ಲಿ ಶೇಕ್ ಶೇಕ್; ಪಾಪ ನಟಿಗೆ ಏನಾಗಿದೆ ಗೊತ್ತೇ?? ಗಂಡ ಏನು ಮಾಡಿದ್ದಾನೆ ಗೊತ್ತೇ?
Comments are closed.