Kannada Story: ಗಟ್ಟಿಯಾಗಿ ಪ್ರೀತಿ ಮಾಡಿದ್ದರು, ಎಲ್ಲವೂ ನಡೆದಿತ್ತು, ಕೊನೆಗೆ ಹುಡುಗಿ ಬೇರೆಯವರನ್ನು ಮದುವೆಯಾಗಲು ಈತನಿಗೆ ಏನು ಮಾಡಿದ್ದಾಳೆ ಗೊತ್ತೇ??
Kannada Story: ಕೆಲವೊಮ್ಮೆ ಯಾರನ್ನು ನಂಬುವುದು, ಯಾರನ್ನು ಬಿಡುವುದು ಎಂದೇ ಗೊತ್ತಾಗುವುದಿಲ್ಲ. ಒಬ್ಬರನ್ನು ನಂಬಿ, ಪ್ರೀತಿ ಮಾಡಿ, ಅವರ ಜೊತೆಗೆ ಇಡೀ ಜೀವನ ಕಳೆಯಬೇಕು ಎಂದು ಬಯಸಿದ್ದಾಗ, ಆ ವ್ಯಕ್ತಿಯಿಂದಲೇ ಜೀವನಕ್ಕೆ ಅಥವಾ ಜೀವಕ್ಕೆ ತೊಂದರೆ ಆದರೆ ಮಾಡುವುದಾದರೂ ಏನು? ಇಂಥದ್ದೇ ಒಂದು ಘಟನೆ ಇತ್ತೀಚೆಗೆ ಕೇರಳ ರಾಜ್ಯದಲ್ಲಿ ನಡೆದಿದೆ. ಗ್ರೀಷ್ಮ ಎನ್ನುವ ಹುಡುಗಿ ತಾನೇ ಪ್ರೀತಿ ಮಾಡಿದ ಹುಡುಗನಿಗೆ ಕಷಾಯದಲ್ಲಿ ಕೀಟನಾಶಕ ಬೆರೆಸಿ ಕೊಟ್ಟು, ಅವನ ಉಸಿರನ್ನೇ ನಿಲ್ಲಿಸಿದ್ದಾಳೆ.
ಈ ಘಟನೆಯಲ್ಲಿ ನಡೆದಿದ್ದೇನು ಎಂದು ನೋಡುವುದಾದರೆ, ಗ್ರೀಷ್ಮ ಶೆರೋನ್ ಎನ್ನುವ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಇವನನ್ನು ಪ್ರೀತಿ ಮಾಡುವಾಗಲೇ, ಆಕೆ ತಂದೆ ತಾಯಿ ನೋಡಿದ ಹುಡುಗನನ್ನು ಮದುವೆಯಾಗುವ ಹಾಗೆ ಆಯಿತು.. ಆ ಕಾರಣಕ್ಕೆ ಶೆರೋನ್ ಜೊತೆಗೆ ಬ್ರೇಕಪ್ ಮಾಡಿಕೊಳ್ಳಲು ನಿರ್ಧಾರ ಮಾಡಿದಳು. ಆದರೆ ಶೆರೋನ್ ಗರ್ಲ್ ಫ್ರೆಂಡ್ ಅನ್ನು ಬಿಡಲು ಒಪ್ಪಲಿಲ್ಲ. ತನ್ನ ಜೊತೆಗೆ ಮದುವೆಯಾಗಬೇಕು ಎಂದು ಪಟ್ಟು ಹಿಡಿದನು. ಆದರೆ ಗ್ರೀಷ್ಮಗೆ ಶೆರೋನ್ ಜೊತೆಗೆ ಮದುವೆಯಾಗುವುದು ಇಷ್ಟವಿರಲಿಲ್ಲ. ಇದನ್ನು ಓದಿ.. Kannada News: ರೀಲ್ಸ್ ಮೂಲಕ ಎಲ್ಲರ ಹೃದಯ ಜಲ್ ಜಲ್ ಅನ್ನುವಂತೆ ಮಾಡಿದ್ದ ಯುವತಿಗೆ ಬಿಗ್ ಶಾಕ್ ಕೊಟ್ಟ ಪೊಲೀಸರು. ಯಾಕೆ ಗೊತ್ತೇ? ಏನಾಗುತ್ತಿದೆ ಗೊತ್ತೇ?

ಹಾಗಾಗಿ ಆಕೆ ಒಂದು ನಿರ್ಧಾರ ಮಾಡಿ, ತಾನು ತನ್ನ ತಂದೆ ತಾಯಿ ತೋರಿಸಿದ ಹುಡುಗನನ್ನೇ ಮದುವೆಯಾಬೇಕು ಎಂದು ನಿರ್ಧಾರ ಮಾಡಿದಳು. ಕೊನೆಗೆ ಕಳೆದ ಆಕ್ಟೊಬರ್ 14ರಂದು ತನ್ನ ಬಾಯ್ ಫ್ರೆಂಡ್ ಮನೆಗೆ ಬಂದಾಗ, ಅವನ ಜೊತೆಗೆ ಚೆನ್ನಾಗಿಯೇ ಇದ್ದು, ಕಷಾಯದ ಜೊತೆಗೆ ಕೀಟನಾಶಕ ಬೆರೆಸಿ ಕೊಟ್ಟಿದ್ದಾಳೆ, ಅದನ್ನು ಕುಡಿದ ಹುಡುಗ ಉಸಿರನ್ನೇ ನಿಲ್ಲಿಸಿದ್ದಾನೆ. ಇದೀಗ ತಾನೇ ಈ ರೀತಿ ಮಾಡಿದ್ದಾಗಿ ಗ್ರೀಷ್ಮ ಒಪ್ಪಿಕೊಂಡಿರುವುದಾಗಿ ಪೊಲೀಸರು ಸುದ್ದಿಗೋಷ್ಠಿ ಮೂಲಕ ತಿಳಿಸಿದ್ದಾರೆ. ಅನ್ಯಾಯವಾಗಿ ಒಂದು ಹುಡುಗನ ಪ್ರಾಣಕ್ಕೆ ಅಪಾಯವಾಗಿದೆ. ಇದನ್ನು ಓದಿ..Kannada News: ತಾಯಿಯ ಆಯಸ್ಸು ಮುಗಿಯುತ್ತಿದೆ ಎಂದು ತಿಳಿದರೂ ಕೂಡ ಮಗಳು ಏನು ಮಾಡಿದ್ದಾಳೆ ಗೊತ್ತೇ??
Comments are closed.