Kannada News: ಉತ್ತರ ಕೊರಿಯಾ ದಲ್ಲಿ ಇನ್ನು ಮುಂದೆ ಹಾಲಿವುಡ್ ಸಿನಿಮಾ ನೋಡುವಂತೆ ಇಲ್ಲ, ನೋಡಿದರೆ ಕಿಮ್ ಏನು ಮಾಡುತ್ತಾನಂತೆ ಗೊತ್ತೇ??
Kannada News: ನಾರ್ತ್ ಕೊರಿಯಾ ಎಂದ ತಕ್ಷಣ ಎಲ್ಲರಿಗೂ ನೆನಪಾಗುವ ಒಂದೇ ಹೆಸರು ಕಿಮ್. ನಾರ್ತ್ ಕೊರಿಯಾದ ಸುಪ್ರೀಂ ಲೀಡರ್ ಆಗಿ ಅವರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗುತ್ತದೆ. ಆ ದೇಶದ ಜನರಿಗೆ ಹೊರಗಿನ ಜನರ ಬಗ್ಗೆ ಗೊತ್ತಿಲ್ಲ, ಹೊರಗಿನವರಿಗೂ ಅಲ್ಲಿನ ಜನರ ಪರಿಸ್ಥಿತಿ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಬಹಳಷ್ಟು ಕಠಿಣವಾದ ರೂಲ್ಸ್ ಗಳ ನಡುವೆ ನಾರ್ತ್ ಕೊರಿಯಾ ಜನರು ಜೀವನ ನಡೆಸುತ್ತಿದ್ದಾರೆ. ಕಿಮ್ ಮನಸ್ಸಿಗೆ ಬಂದ ಹಾಗೆ ಮಾಡುವುದೇ ಕಾನೂನು, ಒಂದು ವೇಳೆ ಆ ರೂಲ್ಸ್ ಬ್ರೇಕ್ ಮಾಡಿದರೆ, ಆ ವ್ಯಕ್ತಿಯನ್ನು ಮುಗಿಸುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಇದೀಗ, ಕಿಮ್ ಅವರು ಇದೆಲ್ಲಕ್ಕಿಂತ ದೊಡ್ಡ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ.
ಈ ಸಾರಿ ಕಿಮ್ ತೆಗೆದುಕೊಂಡಿರುವ ನಿರ್ಧಾರ ಏನು ಎಂದು ನೋಡುವುದಾದರೆ, ಈ ಸಾರಿ ಕಿಮ್ ಹೊಸ ರೂಲ್ಸ್ ಮಾಡಿರುವುದು ಹಾಲಿವುಡ್ ಸಿನಿಮಾಗಳ ಮೇಲೆ. ಹಾಲಿವುಡ್ ಸಿನಿಮಾಗಳನ್ನು ನೋಡಿ ತನ್ನ ವಿರುದ್ಧ ತನ್ನ ದೇಶದ ಜನರು ಸಿಡಿದು ನಿಲ್ಲಬಹುದು ಎನ್ನುವ ಕಾರಣಕ್ಕೆ ಹಾಲಿವುಡ್ ಸಿನಿಮಾಗಳು ಮತ್ತು ಸೀರೀಸ್ ಗಳನ್ನು ನಾರ್ತ್ ಕೊರಿಯಾದಲ್ಲಿ ಬ್ಯಾನ್ ಮಾಡಿದ್ದಾನೆ ಕಿಮ್. ಮಕ್ಕಳು ಅಥವಾ ದೊಡ್ಡವರು ಹಾಲಿವುಡ್ ಸಿನಿಮಾಗಳನ್ನು ನೋಡುವುದು ಕಾಣಿಸಿದರೆ, ಅವರನ್ನು ತಕ್ಷಣವೇ ಜೈಲಿಗೆ ಹಾಕಲಾಗುತ್ತದೆ ಎಂದು ಹೊಸ ರೂಲ್ಸ್ ಮಾಡಲಾಗಿದೆ. ಚಿಕ್ಕ ವಯಸ್ಸಿನವರು ಹಾಲಿವುಡ್ ಸಿನಿಮಾ ನೋಡಿದರೆ, ಅವರ ತಂದೆ ತಾಯಿಯನ್ನು ಆರು ತಿಂಗಳು ಲೇಬರ್ ಶಿಬಿರಕ್ಕೆ ಕಳಿಸುತ್ತಾರೆ. ಮಕ್ಕಳಿಗೆ ಐದು ವರ್ಷ ಜೈಲು ವಾಸಕ್ಕೆ ಹಾಕಲಾಗುತ್ತದೆ ಬಳಿಕ ಇದೇ ಶಿಬಿರಕ್ಕೆ ಕಳಿಸಲಾಗುತ್ತದೆ. ಇದನ್ನು ಓದಿ..Kannada News: ಗಾಳಿಪಟ 2 ನಟಿಗೆ ಆಯ್ತಾ ಲವ್?? ಅದು ಡೈವೋರ್ಸ್ ಪಡೆದಿರುವ ನಟನ ಮೇಲೆ ಪ್ರೀತಿ ಹುಟ್ಟಿತಾ?? ಆತನ ವಯಸ್ಸಿಗೆ ಬೆಣ್ಣೆಯಂತಹ ನಟಿ.

ಈ ನಿರ್ಧಾರದ ಬಗ್ಗೆ ನಾರ್ತ್ ಕೊರಿಯಾ ಅಧಿಕಾರಿಗಳು ಮಾಡುತ್ತಿರುವ ವಾದ ಬೇರೆಯೇ ಆಗಿದೆ. ತಂದೆ ತಾಯಿಯರು ತಮ್ಮ ಮಕ್ಕಳಿಯೇ ತಮ್ಮ ದೇಶದ ಬಗ್ಗೆ, ತಮ್ಮ ದೇಶದ ವಿಶೇಷತೆ, ವೈವಿಧ್ಯತೆ ಇದನ್ನೆಲ್ಲಾ ಹೇಳಿಕೊಡಬೇಕು. ಇಲ್ಲದೆ ಹೋದರೆ ಮಕ್ಕಳು ಸಮಾಜಕ್ಕೆ ತೊಂದರೆ ಆಗಬಹುದು. ಇಬ್ಬರು ಯುವಕರು ಸೌತ್ ಕೊರಿಯಾದ ಸಿನಿಮಾಗಳ ಕ್ಯಾಸೆಟ್ ಜೊತೆ ಸಿಕ್ಕಿಹಾಕಿಕೊಂಡಾಗ, ಅವರನ್ನು ತಕ್ಷಣವೇ ಮುಗಿಸಲಾಯಿತು. ಹಾಗೆಯೇ, ನಾರ್ತ್ ಕೋರಿಯಾದಲ್ಲಿ ಯಾರೇ ಆದರೂ, ಬೇರೆ ರೀತಿಯ ಡಿಂಗ್ ಡಾಂಗ್ ಸಿನಿಮಾಗಳನ್ನು ನೋಡುವುದು ಗೊತ್ತಾದರೆ, ತಕ್ಷಣವೇ ಅವರನ್ನು ಮುಗಿಸಲು ಆದೇಶ ನೀಡಲಾಗಿದೆ. ಬೇರೆ ದೇಶದಲ್ಲಿ ಸಿನಿಮಾಗಳನ್ನು ಇಷ್ಟಪಟ್ಟು ನೋಡುವ ಸಿನಿಪ್ರಿಯರು, ಇವರ ಸ್ಥಿತಿ ನೋಡಿ ಬೇಸರ ಪಟ್ಟುಕೊಳ್ಳುತ್ತಾರೆ. ಇದನ್ನು ಓದಿ..Kannada Story: ಗಟ್ಟಿಯಾಗಿ ಪ್ರೀತಿ ಮಾಡಿದ್ದರು, ಎಲ್ಲವೂ ನಡೆದಿತ್ತು, ಕೊನೆಗೆ ಹುಡುಗಿ ಬೇರೆಯವರನ್ನು ಮದುವೆಯಾಗಲು ಈತನಿಗೆ ಏನು ಮಾಡಿದ್ದಾಳೆ ಗೊತ್ತೇ??
Comments are closed.