Film News: ಕ್ಯಾಮೆರಾ ಮುಂದೇನೆ ಪ್ರೀತಿ ತೋರಿದ್ದ ತಮನ್ನಾ ಕೊನೆ ಕ್ಷಣದಲ್ಲಿ ವಿಜಯ್ ವರ್ಮಾ ಗೆ ಶಾಕ್ ಕೊಟ್ಟಿದ್ದು ಹೇಗೆ ಗೊತ್ತೇ? ಅಷ್ಟೆಲ್ಲ ಪ್ರೀತಿ ಏನಾಗಿ ಹೋಯ್ತು ಗೊತ್ತೇ?
Film News: ಟಾಲಿವುಡ್ ನ ಮಿಲ್ಕ್ ಬ್ಯೂಟಿ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ತಮನ್ನಾ ಭಾಟಿಯಾ. ಈ ನಟಿಯ ಸೌಂದರ್ಯಕ್ಕೆ ಮನಸೋಲದೆ ಇರುವ ಪ್ರೇಕ್ಷಕರೇ ಇಲ್ಲ.ಇನ್ನೂ ಈ ನಟಿ ಕಾಲಿವುಡ್ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಹೆಚ್ಚು ಸುದ್ದಿ ಮಾಡುತ್ತಾ ಇರುತ್ತಾರೆ. ಇನ್ನೂ ಈ ನಟಿ ಬಣ್ಣದ ಲೋಕದಲ್ಲಿ ಪರಿಚಯಿಸಿಕೊಂಡು ವರ್ಷಗಳು ಉರುಳಿವೆ ಹೀಗಿದ್ದರೂ ಕೂಡ ಈ ನಟಿಗೆ ಇರುವ ಕ್ರೇಜ್ ಕಡಿಮೆಯಾಗಿಲ್ಲ.ಇದೀಗ ಟಾಲಿವುಡ್ ಹಾಗೂ ಕಾಲಿವುಡ್ ಗಿಂತ ಹೆಚ್ಚಾಗಿ ಬಾಲಿವುಡ್ ನಲ್ಲಿಯೇ ಬ್ಯುಸಿ ಇರುವ ನಟಿ.ಆದರೆ ಇತ್ತೀಚೆಗೆ ಸಿನಿಮಾಗಳಿಗಿಂತ ಈ ನಟಿಯ ಲವ್ ಲೈಫ್ ಬಗ್ಗೆ ಹೆಚ್ಚಾಗಿ ಎಲ್ಲೆಡೆ ಸುದ್ದಿಯಾಗುತ್ತಿದೆ.ಆದರೆ ಈ ವಿಚಾರವಾಗಿ ತಮನ್ನಾ ಸ್ಪಷ್ಟನೆ ನೀಡಿದ್ದಾರೆ.ಅಷ್ಟಕ್ಕೂ ಈ ನಟಿ ತಮ್ಮ ಲವ್ವಿ ಡವ್ವಿ ಬಗ್ಗೆ ಹೇಳುವುದು ಏನು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಈ ನಟಿ ಬಾಲಿವುಡ್ ನಟ ವಿಜಯ್ ವರ್ಮಾ ಎಂದು ಅವರೊಟ್ಟಿಗೆ ಡೇಟ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.ಆದರೆ ಈ ವರ್ಷದ ನ್ಯೂ ಇಯರ್ ಪಾರ್ಟಿ ಯಲ್ಲಿ ವಿಜಯ್ ವರ್ಮಾ ಅವರೊಟ್ಟಿಗೆ ಹಾಡುತ್ತಾ ಕುಣಿಯುತ್ತಾ ಕೊನೆಯಲ್ಲಿ ಲಿಪ್ ಲಾಕ್ ಕೂಡಾ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.ಇನ್ನೂ ಇಷ್ಟು ವರ್ಷದಲ್ಲಿ ತೆರೆಯ ಮೇಲೆ ಲಿಪ್ ಲಾಕ್ ಮಾಡಿರದ ಈ ನಟಿ ಈಗ ಅಪ್ಸ್ಕರ್ನ್ ನಲ್ಲಿ ಲಿಪ್ ಲಾಕ್ ಮಾಡಿರುವುದು ನೋಡಿ ಎಲ್ಲರೂ ಇವರಿಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂಬ ಸ್ಪಷ್ಟನೆಗೆ ಬಂದಿದ್ದಾರೆ. ಇನ್ನೂ ವಿಜಯ್ ವರ್ಮಾ ಹಾಗೂ ತಮನ್ನಾ ಒಟ್ಟಾಗಿ ಲವ್ ಸ್ಟೋರಿ 2ನಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ.ಇವರಿಬ್ಬರ ಭೇಟಿ ಆಗಿದ್ದು ಕೊಡ ಈ ಸೆಟ್ ನಲ್ಲಿಯೇ. ಈ ಸಿನಿಮಾ ಮುಖಾಂತರ ಭೇಟಿ ಆದ ಈ ಜೋಡಿ ಒಳ್ಳೆಯ ಸ್ನೇಹಿತರಾಗಿ ಇದೀಗ ಆ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನಲಾಗುತ್ತಿದೆ. ಇದನ್ನು ಓದಿ..Kannada News: ಮುಗ್ದ ಬಾಲಕಿಯಂತೆ ಕಾಣುವ ಈ ಬಾಲಕಿ ಇಂದು ದೇಶವನ್ನೇ ಶೇಕ್ ಶೇಕ್ ಮಾಡುವ ನಟಿ: ಯಾರು ಗೊತ್ತೇ ಈ ನಟಿ??

ಸಿನಿಮಾ ರಂಗದಲ್ಲಿ ಒಟ್ಟಾಗಿ ನಟಿಸುತ್ತಿರುವ ಜೋಡಿಗಳು ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎಂದು ಸುದ್ದಿಯಾಗುವುದು ಸರ್ವೇ ಸಾಮಾನ್ಯ.ಹಾಗೆಯೇ ಈ ಜೋಡಿಗಳು ಕೂಡ ಬಾಲಿವುಡ್ ಅಂಗಳದಲ್ಲಿ ಸುದ್ದಿಯಲ್ಲಿ ಇದ್ದರೂ.ಆದ್ರೆ ಈ ಜೋಡಿ ಪಾರ್ಟಿಯಲ್ಲಿ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿದೆ.ಇನ್ನೂ ಈ ವಿಚಾರ ಬಹಿರಂಗವಾಗಿ ಎಲ್ಲೆಡೆ ಸುದ್ದಿಯಾದ ಕಾರಣ ಇದೀಗ ಈ ವಿಚಾರವಾಗಿ ತಮನ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಈ ನಟಿ ಹೇಳುವುದು ಏನೆಂದರೆ ನಾನು ಹಾಗೂ ವಿಜಯ್ ವರ್ಮಾ ಅವ್ರು ಒಟ್ಟಾಗಿ ಸಿನಿಮಾ ಮಾಡುತ್ತಿದ್ದೇವೆ ಹಾಗಾಗಿ ಕೆಲ ಸಂಧರ್ಭ ಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತೇವೆ. ಇನ್ನೂ ನಮ್ಮಿಬ್ಬರ ಪ್ರತಿ ಭೇಟಿಗೂ ನಿಮಗಲ್ಲರಿಗೂ ಸ್ಪಷ್ಟನೆ ನೀಡುವ ಅವಶ್ಯಕತೆ ಇಲ್ಲ. ಹಾಗೆಯೇ ನಾವಿಬ್ಬರೂ ಒಳ್ಳೆಯ ಸ್ನೇಹಿತರು” ಎಂದು ಹೇಳಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದ ಇವರಿಬ್ಬರ ಲವ್ವಿ ಡವ್ವಿ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ ಬ್ರೇಕಪ್ ಆಗಿದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದು, ಇಬ್ಬರು ಒಂದು ವಾರದಿಂದ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಇದನ್ನು ಓದಿ..Kannada News: ಇಷ್ಟು ದಿನ ಒಳ್ಳೆಯ ಹೆಂಡತಿ ಎನ್ನುತ್ತಿದ್ದ ರಣಬೀರ್, ಈಗ ದಿಡೀರ್ ಎಂದು ಆಕೆ ಒಳ್ಳೆಯ ಹೆಂಡತಿ ಅಲ್ಲ ಎಂದದ್ದು ಯಾಕೆ ಗೊತ್ತೇ??
Comments are closed.