Film News: ಯಶ್ ಬಗ್ಗೆ ನಿಂದನೆ ಮಾಡಿದ್ದ ತೆಲುಗಿನ ಡೈರೆಕ್ಟರ್ ಬಗ್ಗೆ ಸಾಯಿ ಕುಮಾರ್ ಮಗ, ಆದಿ ಹೇಳಿದ್ದೇನು ಗೊತ್ತೇ? ಈತನಿಗೆ ಕನ್ನಡದವರೇ ಗೊತ್ತಿಲ್ಲ ಆದರೂ ಹೇಳಿದ್ದೇನು ಗೊತ್ತೇ?
Film News: ಕೆಲ ದಿನಗಳ ಹಿಂದೆ ತೆಲುಗು ನಿರ್ದೇಶಕ ವೆಂಕಟೇಶ್ ಮಹಾನ್ ಅವರು ಕೆಜಿಎಫ್ ಸಿನಿಮಾ ಬಗ್ಗೆ ಮತ್ತು ನಟ ಯಶ್ ಅವರ ಬಗ್ಗೆ ಅಸಂಬದ್ಧವಾಗಿ ಮಾತನಾಡಿ ವಿವಾದಕ್ಕೆ ಒಳಗಾಗಿದ್ದರು. ಇವರ ಮೇಲೆ ನೆಟ್ಟಿಗರು ಮತ್ತು ಮೀಮ್ ಮೇಕರ್ ಗಳು ಕೋಪಗೊಂಡು, ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಿದ್ದರು. ಸಿನಿಮಾ ಇಷ್ಟವಾಗದೆ ಹೋದರೆ, ಇಷ್ಟವಿಲ್ಲ ಎಂದು ಹೇಳಬೇಕು. ಆದರೆ ಇಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದಿದ್ದರು. ಈ ಬಗ್ಗೆ ವೆಂಕಟೀಶ್ ಅವರು ಪ್ರತಿಕ್ರಿಯೆ ನೀಡಿ, ನಾನು ಅಸಭ್ಯವಾಗಿ ಮಾತನಾಡಿದಕ್ಕೆ ಕ್ಷಮೆ ಕೇಳುತ್ತೇನೆ, ಆದರೆ ನನ್ನ ಅಭಿಪ್ರಾಯಕ್ಕೆ ಪರವಾಗಿಯೇ ನಿಲ್ಲುತ್ತೇನೆ ಎಂದು ಹೇಳಿದ್ದರು.
ಈತ ಕ್ಷಮೆ ಕೇಳಿದ ನಂತರ ನೆಟ್ಟಿಗರು ಟ್ರೋಲ್ ಮಾಡುವುದನ್ನು ಕಡಿಮೆ ಮಾಡಿದ್ದರು. ಕೆಜಿಎಫ್ ಸಿನಿಮಾ ಕೆಲವರಿಗೆ ಇಷ್ಟವಾಗದೆ ಇರಬಹುದು, ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿದ ಈ ಸಿನಿಮಾ ಬಗ್ಗೆ ಯಾರೇ ಈ ರೀತಿಯ ಕಮೆಂಟ್ಸ್ ಮಾಡಿದರು ಕೂಡ, ಸೆಲೆಬ್ರಿಟಿಗಳು ಇಂಡೈರೆಕ್ಟ್ ಆಗಿ ಆದರೂ ಕೂಡ ರಿಯಾಕ್ಟ್ ಮಾಡಿ, ಕೌಂಟರ್ ಕೊಡುತ್ತಿದ್ದಾರೆ, ಏಕೆಂದರೆ ಕೆಜಿಎಫ್ ಸಿನಿಮಾ ಅಷ್ಟರ ಮಟ್ಟಿಗೆ ಎಲ್ಲರಿಗೂ ಇಷ್ಟವಾಗಿದೆ. ಭಾಷೆಯ ವ್ಯಾಪ್ತಿ ಇಲ್ಲದೆ, ಎಲ್ಲರೂ ಕೆಜಿಎಫ್ ಸಿನಿಮಾ ಅಭಿಮಾನಿಗಳಾಗಿದ್ದಾರೆ. ತೆಲುಗು ನಿರ್ದೇಶಕ ಹೀಗೆ ಹೇಳಿರುವುದಕ್ಕೆ, ತೆಲುಗು ಕಲಾವಿದರು ಕೂಡ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇತ್ತೀಚೆಗೆ ನಟ ನಾನಿ ಅವರು ವೆಂಕಟೇಶ್ ಮಹಾನ್ ಅವರಿಗೆ ಕೌಂಟರ್ ಕೊಟ್ಟಿದ್ದರು. ಇದನ್ನು ಓದಿ..Film News: ತನ್ನ ಹೆಂಡತಿ ಆಲಿಯಾ ಗಿಂತ ಸುಂದರಿ ನಟಿಯನ್ನು ಹೆಸರಿಸಿದ ರಣಬೀರ್: ಹೆಂಡತಿಗಿಂತ ಯಾರು ಸುಂದರವಾಗಿದ್ದರೆ ಅಂತೇ ಗೊತ್ತೇ? ನಿಮಗೂ ಇಷ್ಟ ಆಗ್ತಾರೆ.

ಇದೀಗ ನಟ ಆದಿ ಸಾಯಿಕುಮಾರ್ ಕೂಡ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. “ಆ ನಿರ್ದೇಶಕರು ಹೇಳಿರುವುದು ಅವರ ಅಭಿಪ್ರಾಯ. ನನ್ನ ಪ್ರಕಾರ ಕೆಜಿಎಫ್ ಕನ್ನಡ ಇಂಡಸ್ಟ್ರಿಯ ಬಿಗ್ ಹಿಟ್, ಸಿನಿಮಾ ಕಲೆಕ್ಷನ್ ಹೇಗಿದೆ, ಎಷ್ಟು ಜನ ನೋಡಿದ್ದಾರೆ ಎನ್ನುವುದು ಗೊತ್ತೇ ಇದೆ.. ಇದು ಕನ್ನಡಿಗರಿಗೆ ದೊಡ್ಡ ವಿಚಾರ, ಎಲ್ಲರಿಗು ಕೆಜಿಎಫ್ ಇಷ್ಟ ಆಗಬೇಕು ಎಂದು ಹೇಳಲಾಗುವುದಿಲ್ಲ. ಕೆಜಿಎಡ್ ಇಷ್ಟ ಇಲ್ಲ ಎಂದ ಮಾತ್ರಕ್ಕೆ ಅದು ಫ್ಲಾಪ್ ಎನ್ನಿಸಿಕೊಳ್ಳುವುದಿಲ್ಲ. ಆ ಮಟ್ಟಕ್ಕೆ ಯಶಸ್ಸು ಪಡೆಯುವುದು ಈಸಿ ಅಲ್ಲ. ಹಾಗಾಗಿ ನಾನು ಅದರ ಬಗ್ಗೆ ಮಾತನಾಡೋಕೆ ಇಷ್ಟ ಪಡುವುದಿಲ್ಲ..”ಎಂದು ಹೇಳಿದ್ದಾರೆ ನಟ ಆದಿ ಸಾಯಿಕುಮಾರ್. ಇದೀಗ ಆದಿ ಅವರು ಹೇಳಿರುವ ಮಾತುಗಳು ವೈರಲ್ ಆಗಿದೆ. ಇದನ್ನು ಓದಿ..Film News: ಹೋಟೆಲ್ ನಲ್ಲಿ ಸಿಕ್ಕಿ ಬಿದ್ದಿದ್ದ ನಟಿಯ ಸಂಚಲನ ಹೇಳಿಕೆ: ಕೋರ್ಟ್ ನಲ್ಲಿ ಗೆದ್ದು ಬಂದೆ, ಆದರೆ ಮತ್ತೇನಾಗಿದೆ ಗೊತ್ತೇ?? ಮತ್ತೊಂದು ಮುಖ ತೆರೆದಿಟ್ಟ ಯಮುನಾ
Comments are closed.