Post Office Recruitment: ಮತ್ತೊಂದು ಭರ್ಜರಿ ಅವಕಾಶ: 10 ನೇ ತರಗತಿ ಪಾಸ್ ಆಗಿದ್ದರೆ ಕೇಂದ್ರ ಸರ್ಕಾರೀ ಉದ್ಯೋಗ: ಅದು ಪೋಸ್ಟ್ ಆಫೀಸ್ ನಲ್ಲಿ. ಹೇಗೆ ಪಡೆಯಬೇಕು ಗೊತ್ತೇ?
Post Office Recruitment: ಸೆಂಟ್ರಲ್ ಗವರ್ನಮೆಂಟ್ ನಲ್ಲಿ ಕೆಲಸ ಪಡೆಯಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಅದಕ್ಕೀಗ ಭಾರತೀಯ ಪೋಸ್ಟಲ್ ಡಿಪಾರ್ಟ್ಮೆಂಟ್ ಹೊಸ ಅವಕಾಶ ನೀಡಿದೆ. ಇದೀಗ 58 ಸ್ಟಾಫ್ ಕಾರ್ ಡ್ರೈವರ್ ಕೆಲಸ ಖಾಲಿ ಇದ್ದು, ಅದನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಈ ಕೆಲಸದ ಮೇಲೆ ಆಸಕ್ತಿ ಇರುವವರು ಹಾಗೂ ಅರ್ಹರಿರುವವರು, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗಿದ್ದರೆ ಈ ಹುದ್ದೆಯ ಬಗ್ಗೆ ಇನ್ನುಳಿದ ಎಲ್ಲಾ ಮಾಹಿತಿಗಳನ್ನು ತಿಳಿಸುತ್ತೇವೆ ನೋಡಿ..
ಒಟ್ಟು 58 ಸ್ಟಾರ್ ಕಾರ್ ಡ್ರೈವರ್ ಹುದ್ದೆಗಳು ಖಾಲಿ ಇದ್ದು, ಈ ಕೆಲಸಕ್ಕೆ 10ನೇ ತರಗತಿ ಕಂಪ್ಲೀಟ್ ಆಗಿರಬೇಕು. ಈ ಕೆಲಸಕ್ಕೆ ತಿಂಗಳ ಸಂಬಳ, ₹19,900 ರಿಂದ ₹63,200 ರೂಪಾಯಿ ವರೆಗು ಇರುತ್ತದೆ. ಕೆಲಸ ಖಾಲಿ ಇರುವುದು ತಮಿಳುನಾಡಿನಲ್ಲಿ. ಅಪ್ಲಿಕೇಶನ್ ಹಾಕಲು ಲಾಸ್ಟ್ ಡೇಟ್ ಮಾರ್ಚ್ 31. ಚೆನ್ನೈ ಸಿಟಿಯಲ್ಲಿ 6 ಹುದ್ದೆ, ಚೆನ್ನೈ ಸೆಂಟ್ರಲ್ ನಲ್ಲಿ 9 ಹುದ್ದೆ, ಎಮ್.ಎಂ.ಎಸ್ ಪ್ರದೇಶದಲ್ಲಿ 25 ಹುದ್ದೆ, ಚೆನ್ನೈ ಸೌತ್ ನಲ್ಲಿ 3 ಹುದ್ದೆ, ಚೆನ್ನೈ ವೆಸ್ಟ್ ನಲ್ಲಿ 15 ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಅಪ್ಲೈ ಮಾಡಲು ಸರ್ಕಾರದ ಮಾನ್ಯತೆ ಇರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಇದನ್ನು ಓದಿ..Film News: ಇಷ್ಟು ದಿವಸ ಮಾಡದ ಕೆಲಸವನ್ನು ಮಾಡಲು ಮುಂದಾದ ಕೀರ್ತಿ ಸುರೇಶ್: ನಿಮಗ್ಯಾಕೆ ಈ ಬುದ್ಧಿ ಎಂದು ಕಣ್ಣೀರು ಹಾಕಿದ ಫ್ಯಾನ್ಸ್. ಏನು ಮಾಡುತ್ತಿದ್ದಾರೆ ಗೊತ್ತೇ?

ಅಪ್ಲೈ ಮಾಡುವವರ ವಯಸ್ಸು 2023ರ ಮಾರ್ಚ್ 31ಕ್ಕೆ ಮಿನಿಮಮ್ 18 ವರ್ಷ ತುಂಬಿರಬೇಕು, ಹಾಗೆಯೇ 27 ವರ್ಷ ಮೀರಿರಬಾರದು. ಹಾಗೂ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 8 ವರ್ಷ, ಮಾಜಿ ಸೈನಿಕ ಓಬಿಸಿ ಅಭ್ಯರ್ಥಿಗಳಿಗೆ 6 ವರ್ಷ ವಯಸ್ಸಿನ ಸಡಿಲಿಕೆ ಇದೆ. ಇಲ್ಲಿ ಆಯ್ಕೆ ಮಾಡುವುದು ಇಂಟರ್ವ್ಯೂ ಮತ್ತು ಡ್ರೈವಿಂಗ್ ಟೆಸ್ಟ್ ಮೂಲಕ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುವುದರಿಂದ, ನೀವು ಅರ್ಜಿ ಸಲ್ಲಿಸಬೇಕಾದ ವಿಳಾಸ ಈ ಕೆಳಕಂಡಂತಿದೆ..
ಸೀನಿಯರ್ ಮ್ಯಾನೇಜರ್ (JAG)
ಮೇಲ್ ಮೋಟಾರ್ ಸರ್ವೀಸ್
ನಂ-37
ಗ್ರೀಮ್ಸ್ ರಸ್ತೆ
ಚೆನ್ನೈ- 600006
ಮಾರ್ಚ್ 31ರ ಒಳಗೆ ಅರ್ಜಿ ಸಲ್ಲಿಸಬೇಕು. ಇದನ್ನು ಓದಿ..Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ.
Comments are closed.