News: ಪ್ರೀತಿಸಿದ ಹುಡುಗನಿಗೆ ಮದುವೆಯಾಗಿ ಫೋಟೋ ಕಳುಹಿಸಿದ ಯುವತಿ: ಮೋಸ ಮಾಡಿ ಮದುವೆಯಾದಳು, ಆಮೇಲೆ ಏನಾಗಿದೆ ಗೊತ್ತೇ??

News: ಜೀವನ ಏನು ಎಂದು ತಿಳಿಯದ ವಯಸ್ಸಿನಲ್ಲಿ ಪ್ರೀತಿ ಮಾಡಿದರೆ, ಅದರಿಂದ ಹಾನಿಯಾಗುವುದೇ ಹೆಚ್ಚು. ಅಂತಹ ಪ್ರೀತಿ ಪ್ರಾಣ ತೆಗೆಯುವ ಹಾಗೆ ಮಾಡಿರುವ ಘಟನೆಗಳು ಸಹ ಇದೆ. ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಮಾಡಿ ಬ್ರೇಕಪ್ ಆದರೆ, ಆ ವಯಸ್ಸಿನಲ್ಲಿ ಮೆಚ್ಯುರಿಟಿ ಇಲ್ಲದೆ, ಜೀವನವೇ ವ್ಯರ್ಥ ಅನ್ನಿಸಿ, ಜೀವನವನ್ನೇ ನಿಲ್ಲಿಸ್ಕೊಳ್ಳುವಂಥ ನಿರ್ಧಾರಗಳನ್ನೇ ತೆಗೆದುಕೊಂಡು ಬಿಡುತ್ತಾರೆ ಈಗಿನ ಪೀಳಿಗೆಯವರು. ತನ್ನನ್ನು ಪ್ರೀತಿ, ಜೀವನ ಪೂರ್ತಿ ನಿನ್ನ ಜೊತೆಗಿರುತ್ತೇನೆ ಎಂದು ಹೇಳಿ, ಮತ್ತೊಬ್ಬನನ್ನು ಮದುವೆಯಾದ ಹುಡುಗಿ ಗಂಡನ ಜೊತೆಗಿರುಗ ಫೋಟೋವನ್ನು ಎಕ್ಸ್ ಬಾಯ್ ಫ್ರೆಂಡ್ ಗೆ ಕಳಿಸಿದ್ದು, ತನ್ನ ಹುಡುಗಿಯನ್ನು ಬೇರೆಯವರ ಹೆಂಡತಿಯಾಗಿ ಹುಡುಗ ಕೊನೆಗೆ ಏನು ಮಾಡಿದ್ದಾನೆ ಗೊತ್ತಾ?

ರಂಗಾರೆಡ್ಡಿ ಜಿಲ್ಲೆಯ ತುರ್ಕಯಂಜಲ್ ಊರಿನ ಮುನಗನೂರು ಗ್ರಾಮದ ವಿನಾಯಕ ನಗರ ಕಾಲೋನಿಯಲ್ಲಿ ಪಾಂಡುಗೋಟ್ಲ ಲಕ್ಷ್ಮಯ್ಯ ಮತ್ತು ಅನಂತಮ್ಮ ದಂಪತಿ ಜೀವನ ನಡೆಸುತ್ತಿದ್ದರು. ಇವರಿಗೆ 3 ಗಂಡು ಮಕ್ಕಳು, ಈ ದಂಪತಿಯ ಎರಡನೇ ಮಗನ ಹೆಸರು ಗಣೇಶ್, ಇವನಿಗೆ 23 ವರ್ಷ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗಣೇಶ್ ತಮ್ಮ ಮನೆಯ ಹತ್ತಿರವಿದ್ದ ಹುಡುಗಿಯೊಬ್ಬಳನ್ನು ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದ. ಇವರಿಬ್ಬರು ಪರಸ್ಪರ ಪ್ರೀತಿಸಿ, ಮದುವೆಯಾಗಬೇಕು ಎಂದುಕೊಂಡಿದ್ದರು. ಆದರೆ ಹುಡುಗಿ ಮನೆಯಲ್ಲಿ ತೋರಿಸಿದ ಹುಡುಗನನ್ನು ಒಪ್ಪಿ, ಆತನ ಜೊತೆಯಲ್ಲೇ ಮದುವೆಯಾಗಿದ್ದಾಳೆ. ಬಳಿಕ ಮದುವೆ ಫೋಟೋವನ್ನು ತನ್ನ ಬಾಯ್ ಫ್ರೆಂಡ್ ಗೆ ವಾಟ್ಸಾಪ್ ಮಾಡಿದ್ದಾಳೆ. ಇದನ್ನು ಓದಿ..Kannada Story: ಮನೆಯಲ್ಲಿ ನನಗೆ ಮತ್ತೊಬ್ಬರ ಮೇಲೆ ಪ್ರೀತಿ ಇದೆ ಎಂದು ಹೇಳುವುದು ಹೇಗೆ ಗೊತ್ತೇ? ಪೋಷಕರನ್ನು ಸುಲಭವಾಗಿ ಒಪ್ಪಿಸುವುದು ಹೇಗೆ ಗೊತ್ತೆ?

coup wom 27 News:
News: ಪ್ರೀತಿಸಿದ ಹುಡುಗನಿಗೆ ಮದುವೆಯಾಗಿ ಫೋಟೋ ಕಳುಹಿಸಿದ ಯುವತಿ: ಮೋಸ ಮಾಡಿ ಮದುವೆಯಾದಳು, ಆಮೇಲೆ ಏನಾಗಿದೆ ಗೊತ್ತೇ?? 2

ಅಂದು ಸೋಮವಾರ ಮನೆಯಿಂದ ಹೊರಗಡೆ ಬಂದ ಗಣೇಶ್ ಮನಸ್ಸಿಗೆ ತುಂಬಾ ನೋವಾಗಿತ್ತು. ಬಳಿಕ ಅವನ ತಂದೆ ತಾಯಿ ಎಷ್ಟೇ ಹುಡುಕಿದರೂ ಗಣೇಶ್ ಎಲ್ಲಿಯು ಸಿಗಲಿಲ್ಲ, ಪ್ರತಿ ದಿನ ಹೊತ್ತಿಗೆ ಮುಂಚೆ ಮನೆಗೆ ಬರುತ್ತಿದ್ದ ಮಗ, ಮರುದಿನ ಆದರೂ ಬರಲಿಲ್ಲ. ಅಲ್ಲಿ ಮುನಗನೂರಿನಲ್ಲಿ ಒಬ್ಬ ಹುಡುಗ ಮರದಲ್ಲಿ ಉಸಿರು ನಿಲ್ಲಿಸಿರುವ ವಿಚಾರ ಗೊತ್ತಾಗಿ, ಪೊಲೀಸರು ಅಲ್ಲಿಗೆ ಹೋಗಿ ನೋಡಿದಾಗ, ಅದು ಗಣೇಶ್ ಎಂದು ಗೊತ್ತಾಗಿದೆ. ತಕ್ಷಣವೇ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಗಣೇಶ್ ಪಾಕೆಟ್ ನಲ್ಲಿ ಒಂದು ಮಂಗಳಸೂತ್ರ ಇದ್ದಿದ್ದು ಬೆಳಕಿಗೆ ಬಂದಿದೆ. ಸಾಕಿ ಬೆಳೆಸಿದ ಮಗನನ್ನು ಆ ಸ್ಥಿತಿಯಲ್ಲಿ ನೋಡಿ ಅವನ ತಂದೆ ತಾಯಿ ಮನಸ್ಸಿಗೆ ತುಂಬಾ ನೋವಾಗಿದೆ. ಹುಡುಗಿಗೊಸ್ಕರ ನಮ್ಮ ಬಗ್ಗೆ ಯೋಚನೆ ಮಾಡದೆ ಈ ಥರ ಮಾಡಿಕೊಂಡೆಯಾ ಎಂದು ಗಣೇಶ್ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ..Kannada Story: ಪಿಯುಸಿ ಅಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂದು ಮದುವೆಯಾಗುವ ಹುಡುಗಿಗೆ ಮಂಟಪದಲ್ಲಿಯೇ ಏನು ಮಾಡಿದ್ದಾನೆ ಗೊತ್ತೇ? ಇಂಗು ಜನ ಇರ್ತಾರ??

Comments are closed.