Kannada News: ಸಿಂಹಾದ್ರಿಯ ಸಿಂಹ ಪಾರ್ಟ್ 2 ಮಾಡೋಣ ಎಂದು ಸುದೀಪ್ ಗೆ ಆಫರ್ ಬಂದರೂ ಸುದೀಪ್ ಯಾಕೆ ಮಾಡಲಿಲ್ಲ ಗೊತ್ತೇ? ಕೊನೆಗೆ ಏನಾಗಿದೆ ಗೊತ್ತೇ??

Kannada News: ಸಾಹಸಸಿಂಹ ವಿಷ್ಣುವರ್ಧನ್ ಅವರ ವೃತ್ತಿ ಜೀವನದ ಪ್ರಮುಖವಾದ ಸಿನಿಮಾಗಳಲ್ಲಿ ಒಂದು ಸಿಂಹಾದ್ರಿಯ ಸಿಂಹ. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ತ್ರಿಪಾತ್ರದ ಅಭಿನಯವನ್ನು ಯಾರು ಮರೆಯಲು ಸಾಧ್ಯವಿಲ್ಲ, ಮೂರು ವಿಭಿನ್ನ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದರು ವಿಷ್ಣುದಾದ, ಇಂದಿಗು ಕೂಡ ಈ ಸಿನಿಮಾವನ್ನು ಜನರು ತುಂಬಾ ಇಷ್ಟಪಡುತ್ತಾರೆ, ವಿಷ್ಣುವರ್ಧನ್ ಅವರು ಕೂಡ ಬಹಳ ಮೆಚ್ಚಿಕೊಂಡಿದ್ದ ಸಿನಿಮಾ ಇದು. ಸಿಂಹಾದ್ರಿಯ ಸಿಂಹ ರಿಮೇಕ್ ಸಿನಿಮಾ ಆಗಿದ್ದರು ಕೂಡ, ಜನರಲ್ಲಿ ಸಿಕ್ಕ ರೀಚ್ ನೆಕ್ಸ್ಟ್ ಲೆವೆಲ್ ರೀಚ್ ಆಗಿತ್ತು.

ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಎಸ್.ನಾರಾಯಣ್ ಅವರು ಹಾಗೆಯೇ ನಿರ್ಮಾಣ ಮಾಡಿದ್ದು, ವಿಷ್ಣುವರ್ಧನ್ ಅವರಿಗೆ ಬಹಳ ಆಪ್ತವಾಗಿದ್ದ ವಿಜಯ್ ಕುಮಾರ್ ಅವರು. ಸಿಂಹಾದ್ರಿಯ ಸಿಂಹ ನಂತರ ವಿಜಯ್ ಕುಮಾರ್ ಅವರು ಮತ್ತು ಎಸ್.ನಾರಾಯಣ್ ಅವರು ಈ ಸಿನಿಮಾದ ಮುಂದುವರೆದ ಭಾಗದ ಚಿತ್ರೀಕರಣ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಅದಕ್ಕಾಗಿ ಕಥೆಯನ್ನು ಸಿದ್ಧಪಡಿಸುವ ಕೆಲಸ ಕೂಡ ನಡೆಯಿತು. ವಿಷ್ಣುದಾದ ಅವರೊಡನೆ ಸಿನಿಮಾ ಮಾಡಬೇಕು ಎಂದುಕೊಂಡಾಗ ವಿಷ್ಣುವರ್ಧನ್ ಅವರು ವಿಧಿವಶರಾದರು. ಇದನ್ನು ಓದಿ..Kannada News: ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಖ್ಯಾತ ನಟಿ: ದೇಶವನ್ನೇ ಅಲುಗಾಡಿಸುತ್ತಿರುವ ಈ ನಟಿಗೆ ಆ ಅಭ್ಯಾಸ ಇದೆಯೇ? ಕ್ಯಾಮೆರಾ ಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತೇ??

sudeep simhadriya simha part 2 story kannada news Kannada News:
Kannada News: ಸಿಂಹಾದ್ರಿಯ ಸಿಂಹ ಪಾರ್ಟ್ 2 ಮಾಡೋಣ ಎಂದು ಸುದೀಪ್ ಗೆ ಆಫರ್ ಬಂದರೂ ಸುದೀಪ್ ಯಾಕೆ ಮಾಡಲಿಲ್ಲ ಗೊತ್ತೇ? ಕೊನೆಗೆ ಏನಾಗಿದೆ ಗೊತ್ತೇ?? 2

ಆದರೆ ವಿಷ್ಣುದಾದ್ ಅವರ ನೆನಪಿನಲ್ಲಿ ಈ ಸಿನಿಮಾ ಮಾಡಲೇಬೇಕು ಎಂದು ಪೂರ್ತಿ ಕಥೆ ಸಿದ್ಧಮಾಡಿ, ನಾಯಕನಾಗಿ ಯಾರನ್ನು ಹಾಕಿಕೊಳ್ಳಬೇಕು ಎಂದಾಗ, ಕಿಚ್ಚ ಸುದೀಪ್ ಅವರು ಎಂದು ಆಯ್ಕೆಯಾಯಿತು. ಆ ವೇಳೆ ಸುದೀಪ್ ಅವರು ವಿಷ್ಣುವರ್ಧನ್ ಅವರ ಛಾಯೆ ಇರುವ ಸಿನಿಮಾದಲ್ಲಿ ನಟಿಸಿದ್ದರು, ಜೊತೆಗೆ ಸುದೀಪ್ ಅವರು ವಿಷ್ಣುದಾದ ಅವರ ದೊಡ್ಡ ಅಭಿಮಾನಿ ಕೂಡ ಆಗಿದ್ದರು, ಸುದೀಪ್ ಅವರಿಗೆ ಕಥೆ ಹೇಳಿ, ಸುದೀಪ್ ಅವರು ಕೂಡ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ನಂತರ ಆದ ಬದಲಾವಣೆಗಳು, ಸಿನಿಮಾಗೆ ಬಂದ ತೊಂದರೆಗಳಿಂದ ಸಿಂಹಾದ್ರಿಯ ಸಿಂಹ2 ಮುಂದುವರೆಯಲೇ ಇಲ್ಲ. ನಿರ್ಮಾಪಕ ವಿಜಯ್ ಕುಮಾರ್ ಅವರು ಇತ್ತೀಚೆಗೆ ವಿಧಿವಶರಾದರು, ಆದರೆ ಸಿನಿಮಾದ ಕಥೆ ಇನ್ನು ಎಸ್.ನಾರಾಯಣ್ ಅವರ ಹತ್ತಿರವಿದ್ದು, ಒಬ್ಬ ಒಳ್ಳೆ ನಿರ್ಮಾಪಕ ಸಿಗಲಿ ಎನ್ನುವ ಹಂಬಲದಲ್ಲಿದ್ದಾರೆ. ಇದನ್ನು ಓದಿ..Kannada News: ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದಿದ್ದ ಬಾಲಯ್ಯ ರವರ ಮತ್ತೊಂದು ಮುಖ ಬಿಚ್ಚಿಟ್ಟ ತಾರಕರತ್ನ ಪತ್ನಿ: ನೇರವಾಗಿ ಹೇಳಿದ್ದೇನು ಗೊತ್ತೇ??

Comments are closed.