WPL 2023: 99 ರನ್ ಗಳಿಸಿ ಔಟ್ ಆಗಿದ್ದೀರಿ ಎಂದಿದ್ದಕ್ಕೆ ಆರ್ಸಿಬಿ ಡಿವೈನ್ ಹೇಳಿದ್ದೇನು ಗೊತ್ತೇ? ಇದು ಇದು ಬೇಕಾಗಿರೋದು. ಏನಂತೀರಿ??
WPL 2023: ಈಗ ನಡೆಯುತ್ತಿರುವ ವುಮನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿ ತಂಡದ 7ನೇ ಪಂದ್ಯ ಗುಜರಾತ್ ಜೈನ್ಟ್ಸ್ ತಂಡದ ವಿರುದ್ಧ ನಡೆಯಿತು, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 189 ರನ್ ಗಳ ಗುರಿಯನ್ನು ಆರ್ಸಿಬಿ ತಂಡಕ್ಕೆ ನೀಡಿತು. ಈ ರನ್ ಚೇಸಿಂಗ್ ಶುರು ಮಾಡಿದ ಆರ್ಸಿಬಿ ತಂಡದ ಓಪನರ್ ಸೋಫಿ ಡಿವೈನ್ ಅವರು ಅತ್ಯದ್ಭುತ ಪ್ರದರ್ಶನ ನೀಡಿದರಿ. ಶನಿವಾರ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ತಂಡ 8 ವಿಕೆಟ್ಸ್ ಗಳ ಭರ್ಜರಿ ಜಯ ಸಾಧಿಸಿತು, ಪ್ಲೇ ಆಫ್ಸ್ ಹಂತಕ್ಕೆ ತಲುಪಲಿ ಆರ್ಸಿಬಿ ತಂಡ ಶತಾಯ ಗತಾಯ ಹೋರಾಟ ಮಾಡುತ್ತಿದೆ..
ಇನ್ನು ಆರ್ಸಿಬಿ ತಂಡದ ಪರವಾಗಿ ಅಂದು ಸ್ಫೋಟಕ ಪ್ರದರ್ಶನ ನೀಡಿದರು ಸೋಫಿ ಡಿವೈನ್, 36 ಎಸೆತಗಳಲ್ಲಿ 8 ಸಿಕ್ಸರ್, 9 ಬೌಂಡರಿ ಸೇರಿದಂತೆ ಬರೋಬ್ಬರಿ 99 ರನ್ಸ್ ಭಾರಿಸಿದರು, ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆಯುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಸೋಫಿ ಅವರು 99 ರನ್ ಗಳಿಗೆ ವಿಕೆಟ್ ನೀಡಿ ಶತಕ ವಂಚಿತರಾದರು. ಆದರೆ ವೈಯಕ್ತಿಕವಾಗಿ ಅತಿ ಹೆಚ್ಚು ರನ್ಸ್ ಗಳಿಸಿದ ಆಟಗಾರ್ತಿ ಎನ್ನಿಸಿಕೊಂಡಿದ್ದಾರೆ ಡಿವೈನ್. ಈ ಬಗ್ಗೆ ಡಿವೈನ್ ಅವರು ಹೇಳಿದ್ದೇನು ಗೊತ್ತಾ? “ಮೆಗ್ ಲ್ಯಾನಿಂಗ್ ಅವರ ಸ್ಕೋರ್ ಬೀಟ್ ಮಾಡುವುದು ಒಳ್ಳೆಯ ಫೀಲ್ ಕೊಡುತ್ತದೆ. ಇವತ್ತು ನಾನು ಒಳ್ಳೆಯ ಫಾರ್ಮ್ ನಲ್ಲಿದ್ದೆ, ಬ್ಯಾಟಿಂಗ್ ಮಾಡುವಾಗ ಶತಕ ಸಿಡಿಸಲು ಇನ್ನೊಂದು ರನ್ ಬೇಕು ಎಂದು ಯೋಚನೆ ಮಾಡಲೇ ಇಲ್ಲ. ಇದನ್ನು ಓದಿ..Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ.

ಅಂದು ರನ್ ರೇಟ್ ಬಹಳ ಮುಖ್ಯವಾಗಿತ್ತು, ನಮ್ಮ ತಂಡ ಬೇಗ ಗೆಲ್ಲಬೇಕು, ರನ್ ರೇಟ್ ಹೆಚ್ಚಾಗಬೇಕು ಎಂದು ಪ್ರಯತ್ನ ಮಾಡಿದೆ. ನಮ್ಮ ತಂಡ ಪ್ಲೇಆಫ್ಸ್ ತಲುಪುವುದಕ್ಕೆ ಇನ್ನು ಅವಕಾಶವಿದೆ ಎನ್ನುವ ವಿಶ್ವಾಸದಲ್ಲಿದ್ದೇನೆ. ಕೆಲವು ಪಂದ್ಯಗಳಲ್ಲಿ ನೋಡಿ ಕಲಿತಿದ್ದೇನೆ, ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿದ್ದೇನೆ ಹಾಗೆಯೇ ಬಹಳಷ್ಟು ಕಲಿತಿದ್ದೇನೆ. ನಾನು ತಂಡದ ಸೀನಿಯರ್ ಆಟಗಾರ್ತಿ ಆಗಿರುವುದರಿಂದ, ಇಲ್ಲಿನ ಎಕ್ಸ್ಪೀರಿಯನ್ಸ್ ನನ್ನ ಆಟದ ಸುಧಾರಣೆಗೆ ಸಹಾಯ ಮಾಡಿದೆ. ನಮ್ಮ ತಂಡದ ಬೌಲರ್ ಗಳ ಪ್ರದರ್ಶನ ಕೂಡ ಚೆನ್ನಾಗಿದ್ದು, ಅವರಿಗು ಮೆಚ್ಚುಗೆ ಸಿಗಬೇಕು. ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ತಂಡ ಒಳ್ಳೆಯ ಪ್ರದರ್ಶನ ನೀಡಿರುವುದಕ್ಕೆ ಸಿಕ್ಕಿರುವ ಜಯ ಇದು, ಈ ಪಂದ್ಯದಿಂದ ನನಗೆ ಸಿಕ್ಕಿರುವ ಸೇಲ್ಫ್ ಕಾನ್ಫಿಡೆನ್ಸ್ ಅನ್ನು ಮುಂದುವರೆಸಿಕೊಂಡು ಉತ್ತಮ ಪ್ರದರ್ಶನ ನೀಡುತ್ತೇನೆ..” ಎಂದು ಹೇಳಿದ್ದಾರೆ ಸೋಫಿ ಡಿವೈನ್. ಇದನ್ನು ಓದಿ..Cricket News: ಒಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪತ್ನಿ ಹೇಗಿದ್ದಾರೆ ಗೊತ್ತೇ?? ಎಲ್ಲೂ ತೋರಿಸದ ಮುಖ ಕೊನೆಗೂ ಸಿಕ್ಕೇ ಬಿಡ್ತು. ಹೇಗಿದ್ದಾರೆ ಗೊತ್ತೇ??
Comments are closed.