ಕನ್ನಡದ ತ್ರಿಮೂರ್ತಿಗಳ ಅಬ್ಬರಕ್ಕೆ ಬೆಚ್ಚಿಬಿದ್ದ ಬಾಕ್ಸ್ ಆಫೀಸ್! ಎಲ್ಲಿ ನೋಡಿದ್ರು ಕಬ್ಜಾ ಮೇನಿಯಾ.

ಕನ್ನಡದ ತ್ರಿಮೂರ್ತಿಗಳ ಅಬ್ಬರಕ್ಕೆ ಬೆಚ್ಚಿಬಿದ್ದ ಬಾಕ್ಸ್ ಆಫೀಸ್! ಎಲ್ಲಿ ನೋಡಿದ್ರು ಕಬ್ಜಾ ಮೇನಿಯಾ.

ಇತ್ತೀಚಿನ ವರ್ಷಗಳಲ್ಲಿ ಮೂರು ಸೂಪರ್ ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಂತಹ ಮೊದಲ ಕನ್ನಡ ಚಿತ್ರ ಎಂದರೆ ಖಂಡಿತವಾಗಿ ಕಬ್ಜಾ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನು ತಂದಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಈ ಮೂರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ಸಂಭಾಳಿಸುವಂತಹ ಕೆಲಸವನ್ನು ಮಾಡಿರುವಂತಹ ನಿರ್ದೇಶಕ ಆರ್ ಚಂದ್ರು ಅವರ ಸಾಹಸಕ್ಕೆ ನಾವೆಲ್ಲರೂ ಸಲ್ಯೂಟ್ ಹೊಡೆಯಲೇಬೇಕು. ಮೂರು ನಟರ ಅಭಿಮಾನಿಗಳಿಗೂ ಕೂಡ ಕಬ್ಜಾ ಸಿನಿಮಾದಲ್ಲಿ ಅವರ ನೆಚ್ಚಿನ ನಟರು ನಟಿಸಿರುವಂತಹ ರೀತಿ ಇಷ್ಟವಾಗಿದೆ.

ಸಿನಿಮಾ ಮಾಸ್ ಆಗಿದ್ದರೂ ಕೂಡ ಫ್ಯಾಮಿಲಿ ಆಡಿಯನ್ಸ್ ಕೂಡ ಕುಟುಂಬ ಸಮೇತರಾಗಿ ಬಂದು ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಮದರ್ ಸೆಂಟಿಮೆಂಟ್ ರೋಮ್ಯಾಂಟಿಕ್ ಹಾಗೂ ದ್ವೇಷದ ಕತೆಯನ್ನು ಕೂಡ ಈ ಸಿನಿಮ ಹೊಂದಿದ್ದು ಪ್ರತಿಯೊಂದು ವಿಧದಲ್ಲಿಯೂ ಕೂಡ ಎಲ್ಲಾ ರೀತಿಯ ಮನರಂಜನೆ ಅಂಶಗಳನ್ನು ಪ್ರೇಕ್ಷಕರಿಗೆ ನೀಡುವಂತಹ ಸಾಮರ್ಥ್ಯವನ್ನು ಈ ಸಿನಿಮಾ ಹೊಂದಿದೆ.

ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆದಾಗಿನಿಂದಲೂ ಕನ್ನಡ ಸೇರಿದಂತೆ ಪರಭಾಷೆಗಳಲ್ಲಿ ದಿನದಿಂದ ದಿನಕ್ಕೆ ಕಬ್ಜಾ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಹಲವಾರು ದಾಖಲೆಗಳನ್ನು ಕಬ್ಜಾ ಸಿನಿಮಾ ಖಂಡಿತವಾಗಿ ಮುರಿಯಲಿದೆ. ಕಬ್ಜಾ ಸಿನಿಮಾದ ಬಗ್ಗೆ ನಿಮಗೆ ಇಷ್ಟ ಆಗಿರುವಂತಹ ಅಂಶಗಳು ಯಾವುವು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.