IPL 2023: ಐಪಿಎಲ್ ನಲ್ಲಿ ಮತ್ತಷ್ಟು ಕಿಕ್ಕೇರಿಸಲು ಹೊಸ ನಿಯಮಗಳನ್ನು ಘೋಷಣೆ ಮಾಡಿದ ಬಿಸಿಸಿಐ; ಯಾವ್ಯಾವ ನಿಯಮದಲ್ಲಿ ಬದಲಾವಣೆ ಗೊತ್ತೆ?
IPL 2023: 2023ರ ಐಪಿಇಲ್ ಟೂರ್ನಿ ಶುರುವಾಗುವುದಕ್ಕೆ ಉಳಿದಿರುವುದು ಇನ್ನು ಒಂದು ವಾರ ಮಾತ್ರ. ಇನ್ನೇನು ವುಮನ್ಸ್ ಪ್ರೀಮಿಯರ್ ಲೀಗ್ ಮುಗಿಯಲಿದ್ದು, ಮೆನ್ಸ್ ಪ್ರೀಮಿಯರ್ ಲೀಗ್ ಇನ್ನಷ್ಟೇ ಶುರುವಾಗಲಿದೆ. ಐಪಿಎಲ್ ಶುರುವಾಗುವ ಮೊದಲೇ ಬಿಸಿಸಿಐ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳು ತಂಡಕ್ಕೂ ಒಳಿತು ಎನ್ನಲಾಗಿದೆ. ಈ ಹೊಸ ನಿಯಮ ಏನು ಎಂದರೆ, ಇನ್ನುಮುಂದೆ ಟಾಸ್ ಆದ ನಂತರ ಕೂಡ ತಂಡದ ಕ್ಯಾಪ್ಟನ್ ಗಳು ತಮ್ಮ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಟಾಸ್ ಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
ಮೊದಲೆಲ್ಲಾ ಟಾಸ್ ಗಿಂತ ಮೊದಲು ಕ್ಯಾಪ್ಟನ್ ಗಳು ಬದಲಾವಣೆ ಮಾಡಬಹುದಿತ್ತು, ಆದರೆ ಈಗ ಟಾಸ್ ನಂತರ ಕೂಡ ಮಾಡಬಹುದು. ಈ ರೂಲ್ ಸೌತ್ ಆಫ್ರಿಕಾ ದೇಶ ಎಸ್.ಎ ಟಿ20 ಲೀಗ್ ನಲ್ಲಿ ಲೀಗ್ ನಲ್ಲಿ ಅಳವಡಿಸಲಾಗಿತ್ತು, ಅಲ್ಲಿ ಸಕ್ಸಸ್ ಕಂಡ ಕಾರಣ ಐಪಿಎಲ್ ನಲ್ಲೂ ಈ ನಿಯಮ ಜಾರಿಗೆ ತರಲಾಗುತ್ತಿದೆ. ಮತ್ತೊಂದು ನಿಯಮ ಏನೆಂದರೆ, ಬೌಲಿಂಗ್ ಮಾಡುವ ಸಮಯದಲ್ಲಿ, ವಿಕೆಟ್ ಕೀಪರ್ ಅಥವಾ ಫೀಲ್ಡರ್ ಗಳ ಸ್ಥಾನದಲ್ಲಿ ಬದಲಾವಣೆ ಆದರೆ, ಆ ಎಸೆತವನ್ನು ಡೆಡ್ ಬಾಲ್ ಎಂದು ಹೇಳಿ, 5 ರನ್ ಗಳ ಪೆನಾಲ್ಟಿ ಹಾಕಲಾಗುತ್ತದೆ. ಇದನ್ನು ಓದಿ..Cricket News: ಆತ ಆಡಿದ್ದು ಅದೊಂದು ದಿನ ಮಾತ್ರ; ಮೊದಲು ಈತನನ್ನು ತೆಗೆದು ಹಾಕಿ. ಮೂರನೇ ಪಂದ್ಯಕ್ಕೆ ಬೇಕೇ ಬೇಕು ಈ ಬದಲಾವಣೆ: ಯಾರು ಹೋಗಬೇಕು ಗೊತ್ತೇ?

ಇನ್ನೊಂದು ನಿಯಮ, ಕೊಟ್ಟಿರುವ ಸಮಯದ ಒಳಗೆ ಓವರ್ ಮುಗಿಯದೆ ಹೋದರೆ, 30 ಯಾರ್ಡ್ಸ್ ಸರ್ಕಲ್ ನ ಹೊರಗೆ 4 ಫೀಲ್ಡರ್ ಗಳು ಮಾತ್ರ ಫೀಲ್ಡಿಂಗ್ ಮಾಡಬೇಕು. ಅಷ್ಟೇ ಅಲ್ಲದೆ ಡಿ.ಆರ್.ಎಸ್ ವಿಚಾರದಲ್ಲೂ ಹೊಸ ನಿಯಮ ಜಾರಿಗೆ ತರಲಾಗಿದೆ, ಇನ್ನುಮುಂದೆ ವೈಡ್ ಮತ್ತು ಡೆಡ್ ಬಾಲ್ ಪರಿಶೀಲಿಸಲು ಡಿ.ಆರ್.ಎಸ್ ತೆಗೆದುಕೊಳ್ಳಬಹುದು. ಇದೆಲ್ಲ ಇದ್ದರು ಲೆಗ್ ಬೈ ಎಂದು ಅಂಪೈರ್ ಡಿಸಿಷನ್ ನೀಡಿದರೆ, ಅದಕ್ಕೆ ಡಿ.ಆರ್.ಎಸ್ ತೆಗೆದುಕೊಳ್ಳಲು ಆಗುವುದಿಲ್ಲ. ಇದನ್ನು ಓದಿ..Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ.
Comments are closed.