Post Office Scheme: ಹೆಚ್ಚು ದುಡ್ಡು ಇಲ್ಲ ಎಂದರೂ, 50 ರೂಪಾಯಿಯಂತೆ ಉಳಿಸಿ, 35 ಲಕ್ಷ ಗಳಿಸುವುದು ಹೇಗೆ ಗೊತ್ತೇ?? ಇದು ಪೋಸ್ಟ್ ಆಫೀಸ್ ಯೋಜನೆ ಪಕ್ಕ ಸೇಫ್.
Post Office Scheme: ಹಣ ಉಳಿತಾಯ ಮಾಡಲು ಬಯಸುವವರಿಗೆ ಸುರಕ್ಷಿತವಾದ ಆಯ್ಕೆ ಎಂದರೆ ಪೋಸ್ಟ್ ಆಫೀಸ್ ಸ್ಕೀಮ್ ಗಳು. ಹೆಚ್ಚಿನ ಅಭಿವೃದ್ಧಿ ಆಗದ ಊರುಗಳಲ್ಲಿರುವ ಜನರಿಗೂ ಪೋಸ್ಟ್ ಆಫೀಸ್ ಉತ್ತಮ ಯೋಜನೆಗಳನ್ನು ನೀಡುತ್ತಿದೆ. ಅಂತಹ ಪ್ಲಾನ್ ಗಳಲ್ಲಿ ಒಂದು ಗ್ರಾಮ ಸುರಕ್ಷಾ ಯೋಜನೆ, ಈ ಯೋಜನೆಗೆ ಸೇರಿಕೊಳ್ಳುವ ವ್ಯಕ್ತಿಯ ವಯಸ್ಸು ಕನಿಷ್ಠ 19 ವರ್ಷ ಆಗಿರಬೇಕು, ಹಾಗೆಯೇ 55 ವರ್ಷಕ್ಕಿಂತ ಹೆಚ್ಚಿರಬಾರದು. ಇಲ್ಲಿ ನೀವು ಕನಿಷ್ಠ 10,000 ಸಾವಿರ ಹಾಗೂ ಗರಿಷ್ಠ 10,00,000 ಲಕ್ಷ ಹೂಡಿಕೆ ಮಾಡಬಹುದು.
ಈ ಪಾಲಿಸಿ ತೆಗೆದುಕೊಂಡು 4 ವರ್ಷಗಳ ನಂತರ ನೀವು ಕವರೇಜ್ ಸಹ ಪಡೆಯಬಹುದು, ಆದರೆ ಒಂದು ವೇಳೆ ನೀವು ಈ ಪಾಲಿಸಿ ಶುರುಮಾಡಿದ ಐದು ವರ್ಷಕ್ಕಿಂತ ಮೊದಲೇ ಹೊರಬರಬೇಕು ಎಂದುಕೊಂಡರೆ ನಿಮಗೆ ಬೋನಸ್ ಸಿಗುವುದಿಲ್ಲ. ಇಲ್ಲಿ ನಿಮಗೆ ₹1000 ರೂಪಾಯಿಗೆ ₹60 ರೂಪಾಯಿ ಬೋನಸ್ ಸಿಗುತ್ತದೆ. ಈ ಪಾಲಿಸಿ ತೆಗೆದುಕೊಳ್ಳುವವರು 59 ವರ್ಷ ಆಗುವವರೆಗೂ ಎಂಡೋಮೆಂಟ್ ಅಶುರೆನ್ಸ್ ಪಾಲಿಸಿ ಆಗಿ ಸಹ ಚೇಂಜ್ ಮಾಡಿಕೊಳ್ಳಬಹುದು. ಈ ಪಾಲಿಸಿಯಲ್ಲಿ ನೀವು 55, 58 ಹಾಗೂ 60 ವರ್ಷಗಳವರೆಗು ಪ್ರೀಮಿಯಂ ಪಾವತಿ ಮಾಡಬಹುದು. ಇದನ್ನು ಓದಿ..Post Office Recruitment: ಮತ್ತೊಂದು ಭರ್ಜರಿ ಅವಕಾಶ: 10 ನೇ ತರಗತಿ ಪಾಸ್ ಆಗಿದ್ದರೆ ಕೇಂದ್ರ ಸರ್ಕಾರೀ ಉದ್ಯೋಗ: ಅದು ಪೋಸ್ಟ್ ಆಫೀಸ್ ನಲ್ಲಿ. ಹೇಗೆ ಪಡೆಯಬೇಕು ಗೊತ್ತೇ?

ಗ್ರಾಮ ಸುರಕ್ಷಾ ಯೋಜನೆಯಲ್ಲಿ ನೀವು 50 ರೂಪಾಯಿ ಕಟ್ಟುವ ಮೂಲಕ ₹35 ಲಕ್ಷದ ವರೆಗು ಹಣ ಪಡೆಯಬಹುದು. ಈ ಯೋಜೆನಯಲ್ಲಿ ನೀವು ದಿನಕ್ಕೆ 50 ರೂಪಾಯಿಯ ಹಾಗೆ ತಿಂಗಳಿಗೆ ₹1,515 ರೂಪಾಯಿ ಕಟ್ಟಿದರೆ, ಈ ಪಾಲಿಸಿ ಮೆಚ್ಯುರ್ ಆಗುವ ಸಮಯಕ್ಕೆ ₹34.60 ಲಕ್ಷ ರೂಪಾಯಿ ಪಡೆಯಬಹುದು. 55 ವರ್ಷಗಳಿಗೆ ಮೆಚ್ಯುರಿಟಿ ಆದರೆ, ನಿಮಗೆ ₹31,60,000 ಲಾಭ ಸಿಗುತ್ತದೆ. 58 ವರ್ಷಕ್ಕೆ ಮೆಚ್ಯುರಿಟಿ ಆದರೆ ₹34,40,000 ಲಾಭ ಸಿಗುತ್ತದೆ. 60 ವರ್ಷಕ್ಕೆ ಮೆಚ್ಯುರಿಟಿ ಮಾಡಿಸಿದರೆ, ₹34,60,000 ಲಾಭ ಸಿಗುತ್ತದೆ. ಇದನ್ನು ಓದಿ..Post Office Schemes: ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅಂಚೆ ಕಚೇರಿಯಲ್ಲಿ ಬೆಸ್ಟ್ ಯೋಜನೆ ಯಾವುದು ಗೊತ್ತೇ?? ಲಕ್ಷ ಲಕ್ಷ ಉಳಿಸುವ ಸುಲಭ ಮಾರ್ಗ.
Comments are closed.