Kannada News: ಎರಡನೇ ಮದುವೆ ಬಗ್ಗೆ ವಿಷಯ ಕೇಳಿ ಬಂದ ತಕ್ಷಣ: ಪಾಪ ನಟಿ ಮೀನಾ ಕ್ಯಾಮೆರಾ ಮುಂದೆ ಬಂದು ಹೇಳಿದ್ದೇನು ಗೊತ್ತೇ? ಇಷ್ಟೆಲ್ಲ ಆಗಿದ್ಯಾ.
Kannada News: ಖ್ಯಾತ ನಟಿ ಮೀನಾ ಅವರು ಎರಡನೇ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಾಗುತ್ತಿದೆ. ಅದರಲ್ಲೂ ನಟ ಧನುಷ್ ಅವರೊಡನೆ ಮೀನಾ ಅವರು ರೀಲೇಶನ್ಷಿಪ್ ನಲ್ಲಿದ್ದಾರೆ, ಇವರಿಬ್ಬರು ಮದುವೆ ಆಗುತ್ತಾರೆ, ಜುಲೈನಲ್ಲಿ ಮದುವೆ ಆಗಬಹುದು, ಒಂದು ವೇಳೆ ಮದುವೆ ಆಗದೆ ಹೋದರೆ ಇಬ್ಬರು ಲಿವಿನ್ ರಿಲೇಶನ್ಶಿಪ್ ನಲ್ಲಿ ಇರಬಹುದು ಎಂದು ತಮಿಳಿನ ಬೈಲ್ವಾನ್ ರಂಗನಾಥನ್ ಅವರು ತಮ್ಮ ಯುಟ್ಯೂನ್ ಚಾನೆಲ್ ನಲ್ಲಿ ಹೇಳಿದ್ದರು..
ಈ ವಿಷಯ ಹೊರಬರುತ್ತಿದ್ದ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಧನುಷ್ ಅವರು ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ, ಇತ್ತ ಮೀನಾ ಅವರು ಕಳೆದ ವರ್ಷ ಗಂಡನನ್ನು ಕಳೆದುಕೊಂಡಿದ್ದಾರೆ, ಇವರಿಬ್ಬರು ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಮೀನಾ ಅವರು 2009ರಲ್ಲಿ ವಿದ್ಯಾಸಾಗರ್ ಅವರೊಡನೆ ಮದುವೆಯಾಗಿದ್ದರು. ಕಳೆದ ವರ್ಷದ ಶುರುವಿನಲ್ಲಿ ಇಡೀ ಕುಟುಂಬಕ್ಕೆ ಕೋವಿಡ್ ಸೋಂಕು ತಗುಲಿತ್ತು, ಅದರಿಂದ ಚೇತರಿಸಿಕೊಂಡ ಕೆಲ ಸಮಯದ ನಂತರ ವಿದ್ಯಾಸಾಗರ್ ಅವರು ಆರೋಗ್ಯ ಸಮಸ್ಯೆಗೆ ಗುರಿಯಾಗಿ ವಿಧಿವಶರಾದರು. ಈಗ ಮೀನಾ ಅವರು ಎರಡನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದನ್ನು ಓದಿ..Kannada News: ಸರ್ಜರಿ ಇಂದ ಮುಖವನ್ನು ಬದಲಾಯಿಸಿಕೊಂಡ ರಶ್ಮಿಕಾ: ಅಂದು ಕ್ರಶ್ ಆಗಿದ್ದವರ ಮುಖ ನೋಡಿ, ಊಟ ಮಾಡೋಕೆ ಮನಸ್ಸು ಬರಲ್ಲ. ಪಾಪ ಏನಾಗಿದೆ ಗೊತ್ತೇ?

ಇದು ಮೀನಾ ಅವರನ್ನು ಕೂಡ ತಲುಪಿದ್ದು, ಇತ್ತೀಚೆಗೆ ನೀಡಿರುವ ಒಂದು ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಈಗಲೂ ಗಂಡನನ್ನು ಕಳೆದುಕೊಂಡಿರುವ ನೋವಿನಲ್ಲಿದ್ದೇನೆ, ಅದರಿಂದ ಹೊರಬರಲು ನನ್ನಿಂದ ಸಾಧ್ಯವಾಗಿಲ್ಲ. ಇಂತಹ ಸಮಯದಲ್ಲಿ ಎರಡನೇ ಮದುವೆ ಎಂದು ವಿವಾದ ಸೃಷ್ಟಿಸಿರುವುದು ಮನಸ್ಸಿಗೆ ತುಂಬಾ ನೋವು ನೀಡಿದೆ. ವಿದ್ಯಾಸಾಗರ್ ಅವರು ಅಗಲಿದ ನೋವಿನಿಂದಲೇ ನಾನಿನ್ನು ಹೊರಬಂದಿಲ್ಲ. ಅದನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟಪಡುವಾಗ ಈ ರೀತಿ ಗಾಸಿಪ್ ಹಬ್ಬಿಸಿದರೆ ಇನ್ನು ಹೆಚ್ಚು ಸಂಕಟ ಆಗುತ್ತದೆ. ಈಗ ನಾನು ನನ್ನ ಮಗಳ ಭವಿಷ್ಯದ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ. ಆಯ್ಕೆ ಮಾಡಿಕೊಳ್ಳುತ್ತಿರುವ ಪಾತ್ರಗಳ ಬಗ್ಗೆ ಬಹಳ ಚೂಸಿ ಆಗಿದ್ದೇನೆ..” ಎಂದು ಹೇಳಿದ್ದಾರೆ ನಟಿ ಮೀನಾ. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿ, ಇನ್ನು ಮದುವೆಯಾಗಿಲ್ಲ ಯಾಕೆ ಗೊತ್ತೇ? ಅಸಲಿಗೆ ಮದುವೆ ಆಗುತ್ತಾರೆಯೇ?? ಕೊನೆಗೂ ಬಯಲಾದ ಸತ್ಯವೇನು ಗೊತ್ತೇ??
Comments are closed.