Kannada Story: ಬಾಡಿಗೆ ಕೊಟ್ಟಿಲ್ಲ ಎಂದು, ಕನಿಕರ ಮರೆತು ವಯಸ್ಸಾದ ಅಜ್ಜನನ್ನು ಹೊರಹಾಕಿದ ಮಾಲೀಕ. ಆದರೆ ಆಮೇಲೆ ನಡೆದಿದ್ದು ನೋಡಿ, ಬೆವತು ಹೋಗಿದ್ದು ಯಾಕೆ ಗೊತ್ತೇ??
Kannada Story: ಹಿರಿಯರು ವಯಸ್ಸಾದವರಿಗೆ ಮರಿಯಾದೆ ಕೊಡಬೇಕು. ಆದರೆ ಈಗಿನ ಸಮಾಜದಲ್ಲಿ ಅವರು ಯಾರೇ ಆಗಿರಲಿ ಹಣ ಇದ್ದರೆ ಮಾತ್ರ ಬೆಲೆ ಎನ್ನುವ ಹಾಗೆ ಆಗಿದೆ. ಅದಕ್ಕೆ ಒಂದು ಅಚ್ಚರಿ ಉದಾಹರಣೆಯನ್ನು ಇಂದು ತಿಳಿಸುತ್ತೇವೆ. ಒಂದು ಬಾಡಿಗೆ ಮನೆಯಲ್ಲಿ ಒಬ್ಬ ವಯಸ್ಸಾದ ಅಜ್ಜ ವಾಸವಾಗಿದ್ದರು. ಅವರ ಬಳಿ ಇದ್ದದ್ದೆಲ್ಲವು ಹಳೆಯ ವಸ್ತುಗಳೇ ಆಗಿದ್ದವು. ತಮ್ಮ ಬಳಿ ಇರುತ್ತಿದ್ದ ಹಣದಲ್ಲಿ ಸಮಯಕ್ಕೆ ಸರಿಯಾಗಿ ಬಾಡಿಗೆ ಹಣ ಕಟ್ಟುತ್ತಾ, ಜೀವನ ನಡೆಸುತ್ತಿದ್ದರು. ಆದರೆ ಎರಡು ತಿಂಗಳುಗಳ ಕಾಲ ಅನಾರೋಗ್ಯದ ಕಾರಣದಿಂದ ಬಾಡಿಗೆ ಕಟ್ಟಲು ಆಗಿರಲಿಲ್ಲ.
ಆಗ ಮನೆಯ ಮಾಲೀಕ ಬಂದು, ಬಾಡಿಗೆ ಕೊಡಲೇಬೇಕು ಎಂದು ಒತ್ತಾಯ ಮಾಡಿ, ಮುದುಕನ ಬಳಿ ಇಲ್ಲದೆ ಇದ್ದಾಗ, ಕೊನೆಗೆ ಮುದುಕನ, ಬಳಿ ಇದ್ದ ವಸ್ತುಗಳನ್ನೆಲ್ಲ ಮನೆಯಿಂದ ಹೊರಹಾಕಿ, ಮುದುಕನನ್ನು ಕೂಡ ಮನೆಯಿಂದ ಆಚೆ ದಬ್ಬುತ್ತಾನೆ. ಮನೆಯ ಹೊರಗೆ ಇದೆಲ್ಲವನ್ನು ನೋಡುತ್ತಿದ್ದ ರಿಪೋರ್ಟರ್, ಫೋಟೋ ತೆಗೆದಿರುತ್ತಾನೆ. ಆ ಫೋಟೋವನ್ನು ತಮ್ಮ ಆಫೀಸ್ ನ ಹಿರಿಯ ಅಧಿಕಾರಿಗೆ ತೋರಿಸಿದಾಗ, ಈ ಸುದ್ದಿಯನ್ನು ನಾಳೆಯೇ ಮೊದಲ ಪೇಜ್ ನಲ್ಲಿ ಹಾಕಿ ಎನ್ನುತ್ತಾರೆ.. ಮರುದಿನ ನ್ಯೂಸ್ ಪೇಪರ್ ನೋಡಿದ ಮನೆಯ ಮಾಲೀಕನಿಗೆ ಶಾಕ್ ಆಗುತ್ತದೆ, ಏಕೆಂದರೆ ಅಲ್ಲಿ ಮನೆಯಿಂದ ಹೊರಹಾಕಿದ ಮಾಲೀಕ ಎಂದು ಮಾತ್ರ ಇರಲಿಲ್ಲ, ಪ್ರಧಾನಿಯನ್ನ ಮನೆಯಿಂದ ಹೊರಹಾಕಿದ ಮಾಲೀಕ ಎಂದು ಬರೆದಿದ್ದರು. ಇದನ್ನು ಓದಿ..Kannada News: ಇಷ್ಟು ವಯಸ್ಸಾದ್ರೂ ಹನಿ ರೋಜ್ ಗೆ ಇಲ್ಲ ಮದುವೆ, ಪ್ರೀತಿ: ಯಾಕೆ ಗೊತ್ತೇ? ಇರುವುದೆಲ್ಲವನ್ನು ಬಿಚ್ಚಿಟ್ಟ ಖ್ಯಾತ ನಟಿ ಹೇಳಿದ್ದೇನು ಗೊತ್ತೇ??

ಆ ಮನೆಗ ಓನರ್ ಗೆ ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದವರು ಪ್ರಧಾನಿ ಎಂದು ಗೊತ್ತಿರಲಿಲ್ಲ. ತಕ್ಷಣವೇ ಅವರ ಬಳಿ ಹೋಗಿ ಕ್ಷಮೆ ಕೇಳಿದಾಗ, ಅವರು ಪರವಾಗಿಲ್ಲ, ನೀವು ಮಾಡಿದ್ದರಲ್ಲಿ ಏನು ತಪ್ಪಿಲ್ಲ, ನಿಮಗೆ ನಾನು ಬಾಡಿಗೆ ಹಣವನ್ನು ಕೊಟ್ಟಿರಲಿಲ್ಲ ಎನ್ನುತ್ತಾರೆ. ಅಷ್ಟಕ್ಕೂ ಆ ಮನೆಯಲ್ಲಿದ್ದವರು, ಮಾಜಿ ಪ್ರಧಾನಿ ಗುಲ್ಜಾರಿ ಲಾಲ್ ನಂದಾ. ಇವರು ಎರಡು ಸಾರಿ ಭಾರತದ ಪ್ರಧಾನಿ ಆಗಿದ್ದವರು. ಗುಲ್ಜಾರಿ ಲಾಲ್ ನಂದಾ ಅವರಿಗೆ 1997ರಲ್ಲಿ ಭಾರತ ರತ್ನ ಅವಾರ್ಡ್ ಕೊಡಲಾಗಿದೆ. ಇವರನ್ನು ಅತ್ಯಂತ ಶ್ರೇಷ್ಠ ರಾಜಕಾರಣಿ ಎಂದು ಕರೆಯುತ್ತಾರೆ. ಏಕೆಂದರೆ ಇವರು ರಾಜಕೀಯದಲ್ಲಿ ಇದ್ದರು ಸಹ, ಒಂದು ದಿನವು ಯಾರಿಂದಲು ಲಂಚ ಪಡೆದಿಲ್ಲ. ಬರುತ್ತಿದ್ದ ಪೆನ್ಶನ್ ಹಣದಿಂದಲೇ ಜೀವನ ನಡೆಸುತ್ತಿದ್ದರು. ಇದನ್ನು ಓದಿ..Kannada Story: ಟೀಚರ್ ಗೆ ಯುವ ವಿದ್ಯಾರ್ಥಿನಿ ಮೇಲೆ ಆಯಿತು ಪ್ರೀತಿ: ವಯಸ್ಸು ಮುಪ್ಪಾದರೂ ಆಸೆ ಹೆಚ್ಚಾಗಿದ್ದಾಗ ಚಿಕ್ಕ ಯುವತಿ ಎನ್ನದೆ ಮಾಡಿದ್ದೇನು ಗೊತ್ತೇ? ಕೊನೆಯ ಏನಾಯ್ತು ಗೊತ್ತೆ?
Comments are closed.