Kannada News: ರಾಹುಲ್ ಗಾಂಧಿ ನನಗೆ ಎಷ್ಟು ಮುಖ್ಯ ಎಂದು ವಿವರಿಸಿದ ರಮ್ಯಾ: ಜೀವನದಲ್ಲಿ ರಾಹುಲ್ ಸ್ಥಾನ ಕೇಳಿದರೆ, ಅಂಗೇ ಊಟ ಮಾಡೋದು ಬಿಡ್ತೀರಾ. ಅಬ್ಬಬ್ಬಾ ಲಾಟರಿ ಪಡೆದ ರಾಹುಲ್.
Kannada News: ನಮ್ಮ ದೇಶದಲ್ಲಿ ಈಗ ಕಾಂಗ್ರೆಸ್ ಪಕ್ಷ ಮೊದಲಿನ ಹಾಗೆ ಪ್ರಭಾವ ಬೀರುತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಜನರ ವಿಶ್ವಾಸ ಗಳಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಅಂತಹ ಹಲವು ಕಾರ್ಯಕ್ರಗಳನ್ನು ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈ ಹಾದಿಯಲ್ಲಿ ಸಾಗುತ್ತಿರುವಾಗ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರು ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿದ್ದಾರೆ . ರಾಹುಲ್ ಅವರು ತಮಗೆ ಎಷ್ಟು ಮುಖ್ಯ ಎನ್ನುವುದನ್ನು ಕೂಡ ತಿಳಿಸಿದ್ದಾರೆ. ಹಾಗಿದ್ದರೆ ರಮ್ಯಾ ಅವರು ಹೇಳಿದ್ದೇನು ಗೊತ್ತಾ?
ರಮ್ಯಾ ಅವರ ಬಗ್ಗೆ ಹೆಚ್ಚಾಗಿ ಹೇಳುವುದೇ ಬೇಡ, ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ಅಭಿ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟ ರಮ್ಯಾ ಅವರು ತಮಿಳು ಭಾಷೆಯಲ್ಲಿ ಸಹ ನಟಿಸಿ ಒಳ್ಳೆಯ ಹೆಸರು ಮಾಡಿದರು. 2012ರಲ್ಲಿ ರಾಜಕೀಯಕ್ಕೂ ಬಂದು, ಮಂಡ್ಯ ಕ್ಷೇತ್ರದ ಮೂಲಕ ಎಂಪಿ ಎಲೆಕ್ಷನ್ ಸಹ ಗೆದ್ದರು. ಆದರೆ 2014ರಲ್ಲಿ ಮತ್ತೊಮ್ಮೆ ಎಲೆಕ್ಷನ್ ಗೆ ನಿಂತು ಸೋತರು ರಮ್ಯಾ. ಕಳೆದ ವಾರ ವೀಕೆಂಡ್ ವಿತ್ ರಮೇಶ್ ಸೀಸನ್5ನ ಮೊದಲ ಎಪಿಸೋಡ್ ಗೆ ಅತಿಥಿಯಾಗಿ ಬಂದಿದ್ದ ರಮ್ಯಾ ಅವರು ತಮ್ಮ ಜೀವನದ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Kannada News: ಏನು ಇಲ್ಲ ಏನು ಇಲ್ಲ ಅಂತಾನೆ, ಮತ್ತೊಬ್ಬಳು ನಟಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೋಟೆಲ್ ನಲ್ಲಿ ಸಿಕ್ಕಿ ಬಿಟ್ಟ ನಾಗ: ಈತನ ಮತ್ತೊಂದು ಮುಖ, ಹೇಗಿದೆ ಗೊತ್ತೇ?

“ತಂದೆ ತಾಯಿ ಅಂದ್ರೆ ನನಗೆ ಪ್ರಾಣ. ನನ್ನ ತಂದೆ ತೀರಿಹೋದ ಎರಡು ವಾರಕ್ಕೆ ನಾನು ಸಂಸತ್ತಿಗೆ ಹೋಗಬೇಕಿತ್ತು, ಅದೆಲ್ಲವೂ ನನಗೆ ತುಂಬಾ ಹೊಸದು, ನನಗೆ ಏನು ಗೊತ್ತಿರಲಿಲ್ಲ. ಆದರೆ ಎಲ್ಲವನ್ನು ಕಳಿತುಕೊಂಡೆ. ದುಃಖ ಇದ್ದರು ಕೆಲಸದಲ್ಲಿ ತೊಡಗಿಸಿಕೊಂಡೆ. ಮಂಡ್ಯ ಜನ ನನಗೆ ಆ ಶಕ್ತಿ ಕೊಟ್ರು, ಆ ಸಮಯದಲ್ಲಿ ನನ್ನ ಜೀವನದಲ್ಲಿ ಬಹಳ ಪ್ರಭಾವ ಬೀರಿದ ವ್ಯಕ್ತಿ ಅಂದ್ರೆ ನನ್ನ ಅಜ್ಜಿ ನಂತರ ರಾಹುಲ್ ಗಾಂಧಿ ಅವರು.. ತಂದೆ ವಿಧಿವಶರಾದಾಹ ನಂತರ ನಾನು ತುಂಬಾ ದುಃಖದಲ್ಲಿದ್ದೆ, ಪ್ರಾಣ ಕಳೆದುಕೊಳ್ಳಬೇಕು ಎಂದುಕೊಂಡಿದ್ದೆ. ಹಾಗೆಯೇ ಎಲೆಕ್ಷನ್ ನಲ್ಲೂ ಸೋತಿದ್ದೆ, ಆಗ ನನಗೆ ಸಪೋರ್ಟ್ ಮಾಡಿದ್ದು ರಾಹುಲ್ ಗಾಂಧಿ ಅವರು. ಮಾನಸಿಕವಾಗಿ ನನಗೆ ಧೈರ್ಯ ಕೊಟ್ಟು ಬೆಂಬಲ ಕೊಟ್ಟರು..”ಎಂದು ರಾಹುಲ್ ಗಾಂಧಿ ಅವರ ಬಗ್ಗೆ ಹೇಳಿದ್ದಾರೆ. ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಹೆಡ್ ಆಗಿ ಕೆಲಸ ಮಾಡಿದ್ದರು. ಇದನ್ನು ಓದಿ..Kannada News: ದೇಶವೇ ಆತನ ವಿರುದ್ಧ ನಿಂತಿರುವ ನಟನ ಜೊತೆ ಡೇಟಿಂಗ್ ಮಾಡಬೇಕು ಎಂದ ಕೀರ್ತಿ: ಇವಮ್ಮನಿಗೆ ಇದೆಲ್ಲ ಬೇಕಿತ್ತಾ? ಆತನಿಗೆ ಎಷ್ಟು ವಯಸ್ಸಾಗಿದೆ ಗೊತ್ತೇ?
Comments are closed.