Kannada News: ಮಗ ಐಎಎಸ್ ಅಧಿಕಾರಿಗಯಾಗಿದ್ದರೂ ಕೂಡ ಈಗಲೂ ಬೀದಿಯಲ್ಲಿ ಬಳೆ ಮಾರುತ್ತಿರುವ ತಾಯಿ: ಕಾರಣ ಕೇಳಿದರೆ, ಮೈಯೆಲ್ಲಾ ಬೆವರುತ್ತದೆ. ಯಾಕೆ ಗೊತ್ತೇ??

Kannada News: ಇಂದು ನಾವು ನಿಮಗೆ ಒಬ್ಬ ತಾಯಿಯ ಕಥೆಯನ್ನು ಹೇಳುತ್ತೇವೆ. ಈ ತಾಯಿ ಹಳ್ಳಿ ಹಳ್ಳಿಗಳಿಗೆ ಹೋಗಿ ಬಳೆಗಳನ್ನು ಮಾರಿ, ಮಗನನ್ನು ಚೆನ್ನಾಗಿ ಓದಿಸಿ ಇಂದು ಅವರ ಮಗ ಎಲ್ಲರೂ ಮಗ ಎಲ್ಲರೂ ಮೆಚ್ಚುವ ಐಎಎಸ್ ಅಧಿಕಾರಿ ಆಗಿದ್ದಾರೆ. ಆದರೆ ಇಂದಿಗೂ ಆ ತಾಯಿ ಊರೂರಿಗೆ ಓಡಾಡಿ ಬಳೆ ಮಾರಿಕೊಂಡು ಜೀವನ ಮಾಡುತ್ತಿದ್ದಾರೆ. ಈ ತಾಯಿ ಮತ್ತು ಇವರ ಮಗನ ಕಥೆ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ, ಇಂದು ಇವರ ಬಗ್ಗೆ ನಿಮಗೆ ತಿಳಿಸುತ್ತೇವೆ..

ಝಾರ್ಖಂಡ್ ನಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವವರು ರಮೇಶ್ ಘೋಲಾಪ್. ಇವರು ಮೂಲತಃ ಮಹಾರಾಷ್ಟ್ರದ ಪುಣೆಯವರು. ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರ ತಾಯಿ ಊರು ಊರುಗಳಿಗೆ ಹೋಗಿ ಕಷ್ಟಪಟ್ಟು ಬಳೆ ವ್ಯಾಪಾರ ಮಾಡಿಕೊಂಡು ಹಣ ಸಂಪಾದನೆ ಮಾಡಿ ಬರುತ್ತಿದ್ದರು. ಆದರೆ ಕುಡುಕನಾಗಿದ್ದ ಇವರ ತಂದೆ, ಆ ಹಣವನ್ನೆಲ್ಲಾ ಕುಡಿತಕ್ಕೆ ಸುರಿಯುತ್ತಿದ್ದರು. ಎರಡು ವರ್ಷವಿದ್ದಾಗ ರಮೇಶ್ ಅವರಿಗೆ ಪೋಲಿಯೋ ಆಗಿ ಎಡಗಾಲಿಗೆ ತೊಂದರೆ ಆಯಿತು. ಮನೆಯ ಪರಿಸ್ಥಿತಿ ನೋಡಿ, ತಾನು ಒಂದು ಹಂತಕ್ಕೆ ಬೆಳೆಯಬೇಕು ಎಂದುಕೊಂಡಿದ್ದರು. ಹಾಗೆ ಚೆನ್ನಾಗಿ ಓದಿ 10ನೇ ತರಗತಿಯಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆದು ಪಾಸ್ ಮಾಡಿದರು. ಆ ಸಮಯಕ್ಕೆ ಅವರ ತಂದೆ ಸಹ ತೀರಿಹೋದರು. ಆಗ ಎಲ್ಲಾ ಜವಾಬ್ದಾರಿ ಅವರ ತಾಯಿ ಮೇಲೆ ಬಿತ್ತು. ಆ ಸಮಯದಲ್ಲಿ ರಮೇಶ್ ಅವರು ಚೆನ್ನಾಗಿ ಓದಬೇಕು ಎಂದು ತಮ್ಮ ಸಂಬಂಧಿಯ ಜೊತೆಗೆ ಮುಂಬೈಗೆ ಹೋಗಿ ಅಲ್ಲಿ ಕೆಲಸಕ್ಕೆ ಸೇರಿಕೊಂಡು, ಅದರ ಜೊತೆಗೆ ಕಷ್ಟಪಟ್ಟು ಓದಿದರು. ಇದನ್ನು ಓದಿ..Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಡಬಲ್ ಬಿಗ್ ಶಾಕ್; ನಡುಗಿದ ಬೆಂಗಳೂರು. ಶೇಕ್ ಆಗುತ್ತಿರುವ ತಂಡ ಕಪ್ ಗೆಲ್ಲಲು ಸಾಧ್ಯನಾ??

adhikaariya ammana kathe kannada news Kannada News:

ರಮೇಶ್ ಅವರ ತಾಯಿ ಬಹಳ ಕಷ್ಟಪಟ್ಟು ಬಳೆ ಮಾರಿ ಮಗನ ವಿದ್ಯಾಭ್ಯಾಸಕ್ಕೆ ಕಳಿಸುತ್ತಿದ್ದರು. ಹೀಗೆ ಚೆನ್ನಾಗಿ ಓದಿ ರಮೇಶ್ ಅವರು ಟೀಚರ್ ಆದರು, ಆದರೆ ನಾನು ಬರೀ ಟೀಚರ್ ಆಗಿ ಇರಬಾರದು, ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎನ್ನಿಸಿತು. ಅದಕ್ಕೆ ಕಾರಣ, ರಮೇಶ್ ಅವರ ತಾಯಿ ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆಪಟ್ಟಿದ್ದರು, ಅದಕ್ಕಾಗಿ ಸರ್ಕಾರಿ ಆಫೀಸ್ ಗಳಿಗೆ ಎಷ್ಟೇ ಅಲೆದಾಡಿದರು ಕೂಡ ಸಾಧ್ಯವಾಗಿರಲಿಲ್ಲ. ಹಾಗಾಗಿ ತಾವು ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡಿ, ಐಎಎಸ್ ಅಧಿಕಾರಿಯಾಗಿ ಜನರಿಗೆ ಈ ವ್ಯವಸ್ಥೆಗಳು ಸರಿಯಾಗಿ ಸಿಗಬೇಕು ಎಂದು ಪರೀಕ್ಷೆಗೆ ತಯಾರಿ ಶುರು ಮಾಡಿದರು.
ಹಗಲು ರಾತ್ರಿ ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿಯಾದರು. ರಮೇಶ್ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು ಕೂಡ ಅವರ ತಾಯಿ ಊರುಗಳಿಗೆ ಹೋಗಿ ಬಳೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದಾರೆ.

ಈ ವಿಚಾರದ ಬಗ್ಗೆ ಎಲ್ಲೆಡೆ ನೆಗಟಿವ್ ಆಗಿ ಮಾತುಗಳು ಬಂದವು. ಐಎಎಸ್ ಅಧಿಕಾರಿ ತಮ್ಮ ತಾಯಿಯನ್ನು ನೋಡಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಈ ಮಾತೆಲ್ಲಾ ಬರೋಕ್ಕಿಂತ ಮೊದಲೇ ರಮೇಶ್ ಅವರು ತಮ್ಮ ತಾಯಿಗೆ ಈ ಕೆಲಸ ಬಿಟ್ಟುಬಿಡು ಎಂದಿದ್ದರು, ಆದರೆ ರಮೇಶ್ ಅವರ ತಾಯಿ.. ನಿನ್ನನ್ನ ಓದಿಸೋಕೆ ಆಗಿದ್ದು ಈ ಬಳೆ ಇಂದ, ನಮ್ಮ ಜೀವನ ಕಟ್ಟಿಕೊಳ್ಳೋಕೆ ಆಗಿದ್ದು ಬಳೆ ಇಂದ, ನನ್ನ ಕಾಲು ಚೆನ್ನಾಗಿ ಓಡಾಡುವ ವರೆಗು ಈ ಬಳೆ ಮಾರುವ ಕೆಲಸವನ್ನ ನಾನು ನಿಲ್ಲಿಸುವುದಿಲ್ಲ.. ಎಂದು ಹೇಳುತ್ತಾರೆ. ತಮ್ಮ ತಾಯಿ ವಿಚಾರದ ಬಗ್ಗೆ ಅಂತಹ ಮಾತುಗಳು ಕೇಳಿಬಂದಾಗ, ತಾಯಿ ಹೇಳಿದ ಮಾತನ್ನು ರಮೇಶ್ ಅವರು ಟ್ವೀಟ್ ಮಾಡಬೇಕಾಯಿತು, ಆಗ ಎಲ್ಲರೂ ಬಾಯಿಮುಚ್ಚಿಕೊಂಡರು. ಈ ಅಮ್ಮ ಮತ್ತು ಮಗ ಇಬ್ಬರು ಕೂಡ ತಮ್ಮ ಜೀವನದಲ್ಲಿ ಅನುಸರಿಸುತ್ತಿರುವ ಮೌಲ್ಯಗಳು ನಿಜಕ್ಕೂ ಸ್ಪೂರ್ತಿ. ಇದನ್ನು ಓದಿ..Kannada News: ಸದಾ ಕನ್ನಡಿಗರಿಗೆ ಟೋಪಿ ಹಾಕುವ ರಶ್ಮಿಕಾ, ಧರಿಸಿದ ಈ ಬಟ್ಟೆ ಕೇಳಿದರೆ, ಎದ್ದು ನಿಂತು ಬಗ್ಗಿ ಸಲ್ಯೂಟ್ ಮಾಡ್ತೀರಾ. ಎಷ್ಟು ಲಕ್ಷ ಗೊತ್ತೇ??

Comments are closed.