Cricket News: ಈ ಬಾರಿಯ ಐಪಿಎಲ್ ನಲ್ಲಿ ಬಂದಿದೆ ಬಾರಿ ಹೊಸ ನಿಯಮಗಳು, ಟಾಪ್ 5 ಹೊಸ ನಿಯಮಗಳನ್ನು ಕೇಳಿದರೆ, ಶೇಕ್ ಆಗ್ತೀರಾ. ಏನು ಗೊತ್ತೇ??

Cricket News: 2023ರ ಐಪಿಎಲ್ ಆವೃತ್ತಿ ನಿನ್ನೆಯಷ್ಟೇ ಶುರುವಾಗಿದೆ. ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ಐಪಿಎಲ್ ಗೆ ಚಾಲನೆ ಸಿಕ್ಕಿದ್ದು, ಮೊದಲ ಪಂದ್ಯ ಗುಜರಾತ್ ಟೈಟನ್ಸ್ ವರ್ಸಸ್ ಸಿ.ಎಸ್.ಕೆ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ಪಂದ್ಯದಲ್ಲಿ ಗೆದ್ದಿದೆ. ಇನ್ನು ಈ ಸಾರಿ ಐಪಿಎಲ್ ನಲ್ಲಿ ನಿಯಮಗಳ ಬದಲಾವಣೆ ಆಗಿದ್ದು, ಈ ಸಾರಿ ಐಪಿಎಲ್ ಈ ಹಿಂದಿನ ಹಾಗೆ ಇರುವುದಿಲ್ಲ ಎಂದು ನಿಯಮಗಳನ್ನು ನೋಡಿದರೆ ಗೊತ್ತಾಗುತ್ತಿದೆ. ಹಾಗಿದ್ದರೆ ಹೊಸ ನಿಯಮಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ipl 2023 new rules cricket news kannada Cricket News:

ಟಾಸ್ ನಂತರ ಆಡುವ ಬಳಗದ ಬದಲಾವಣೆ :- ಮೊದಲೆಲ್ಲಾ ಐಪಿಎಲ್ ನಲ್ಲಿ ಟಾಸ್ ನಡೆಯುವ ಮೊದಲೇ ಕ್ಯಾಪ್ಟನ್ ಗಳು ಪ್ಲೇಯಿಂಗ್ 11ಅನ್ನು ಅಂತಿಮಗೊಳಿಸಿ ಪ್ರಕಟಿಸಬೇಕಿತ್ತು. ಆದರೆ ಈಗ ನಿಯಮ ಬದಲಾಗಿದ್ದು, ಟಾಸ್ ಬಳಿಕ ಕೂಡ ಬದಲಾವಣೆ ಮಾಡಬಹುದು. ಟಾಸ್ ಗೆಲುವು ನೋಡಿ ಕೂಡ, ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಇದನ್ನು ಓದಿ..Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ.

ಇಂಪ್ಯಾಕ್ಟ್ ಪ್ಲೇಯರ್ :- ಇನ್ನುಮುಂದೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಕರೆತರಬಹುದು. ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಬೌಲರ್ ಅನ್ನು ಬದಲಾಯಿಸಿ ಒಬ್ಬ ಬ್ಯಾಟ್ಸ್ಮನ್ ಅಥವಾ ಒಬ್ಬ ಬ್ಯಾಟ್ಸ್ಮನ್ ಅನ್ನು ಬದಲಾಯಿಸಿ ಒಬ್ಬ ಬೌಲರ್ ಅನ್ನು ತಂಡಕ್ಕೆ ಕರೆತರಬಹುದು. ಇಂಪ್ಯಾಕ್ಟ್ ಪ್ಲೇಯರ್ ಗಾಗಿ, ಪಂದ್ಯ ಶುರುವಾಗುವುದಕ್ಕಿಂತ ಮೊದಲು, 4 ಹೆಚ್ಚು ಆಟಗಾರರ ಹೆಸರನ್ನು ಕೂಡ ತಿಳಿಸಿರಬೇಕು. 14ನೇ ಓವರ್ ಗಿಂತ ಮೊದಲು, ಇಂಪ್ಯಾಕ್ಟ್ ಪ್ಲೇಯರ್ ಅನ್ನು ಪ್ಲೇಯಿಂಗ್ 11ಗೆ ಸೇರಿಸಿಕೊಳ್ಳಬಹುದು.

ವೈಡ್ ಬಾಲ್ ಹಾಗೂ ನೋ ಬಾಲ್ ಗೆ DRS ಅವಕಾಶ :- ಮೊದಲೆಲ್ಲಾ ಅಂಪೈರ್ ಔಟ್ ನೀಡಿದರೆ, ಆ ಡಿಸಿಶನ್ ಅನ್ನು ಡಿ.ಆರ್.ಎಸ್ ಮೂಲಕ ಪರೀಕ್ಷಿಸಬಹುದಿತ್ತು. ಆದರೆ ಈಗ ವೈಡ್ ಮತ್ತು ನೋ ಬಾಲ್ ಎಂದು ಅಂಪೈರ್ ತೀರ್ಪು ಕೊಟ್ಟಾಗಲು ಕೂಡ, ಪ್ಲೇಯರ್ ಗಳಿಗೆ ಸಮಾಧಾನ ಇಲ್ಲದೆ ಹೋದರೆ, ಡಿ.ಆರ್.ಎಸ್ ಪಡೆಯಬಹುದು. ಇದನ್ನು ಓದಿ..Cricket News: ಆತ ಆಡಿದ್ದು ಅದೊಂದು ದಿನ ಮಾತ್ರ; ಮೊದಲು ಈತನನ್ನು ತೆಗೆದು ಹಾಕಿ. ಮೂರನೇ ಪಂದ್ಯಕ್ಕೆ ಬೇಕೇ ಬೇಕು ಈ ಬದಲಾವಣೆ: ಯಾರು ಹೋಗಬೇಕು ಗೊತ್ತೇ?

ಬೌಲಿಂಗ್ ಮಾಡುವ ಸಮಯಕ್ಕೆ ಒಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಅದೇನು ಎಂದರೆ, ಇನ್ನುಮುಂದೆ ಬೌಲಿಂಗ್ ಮಾಡುವ ಸಮಯದಲ್ಲಿ ವಿಕೆಟ್ ಕೀಪರ್ ಅಥವಾ ಫೀಲ್ಡರ್ ಗಳು ತಮ್ಮ ಸ್ಥಾನವನ್ನು ಬದಲಾವಣೆ ಮಾಡಿದರೆ, ಆ ಎಸೆತವನ್ನು ಡೆಡ್ ಬಾಲ್ ಎಂದು ಹೇಳಲಾಗುತ್ತದೆ. ಜೊತೆಗೆ ಬೌಲಿಂಗ್ ಮಾಡುತ್ತಿರುವ ತಂಡಕ್ಕೆ ಐದು ರನ್ ಗಳ ಪೆನಾಲ್ಟಿ ಕೂಡ ಹಾಕಲಾಗುತ್ತದೆ.

rcb s strongest playing 11 ipl 2023 Cricket News:

ಈಗ ಒಂದು ಓವರ್ ಪೂರ್ತಿಗೊಳಿಸಲು ಇಷ್ಟು ಸಮಯ ಎಂದು ನಿಗದಿ ಮಾಡಲಾಗಿದೆ. ಅಷ್ಟು ಸಮಯದ ಒಳಗೆ ಓವರ್ ಅನ್ನು ಮುಗಿಸದೆ ಹೋದರೆ, 30 ಯಾರ್ಡ್ ಸರ್ಕಲ್ ನ ಹೊರಗೆ 4 ಫೀಲ್ಡರ್ ಗಳು ಮಾತ್ರ ನಿಲ್ಲಬೇಕಾಗುತ್ತದೆ. 90 ನಿಮಿಷಗಳ ಒಳಗೆ ಪೂರ್ತಿ 20 ಓವರ್ ಮುಗಿಸಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.. ಇದನ್ನು ಓದಿ..Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಡಬಲ್ ಬಿಗ್ ಶಾಕ್; ನಡುಗಿದ ಬೆಂಗಳೂರು. ಶೇಕ್ ಆಗುತ್ತಿರುವ ತಂಡ ಕಪ್ ಗೆಲ್ಲಲು ಸಾಧ್ಯನಾ??

Comments are closed.