Kannada News: ಕನ್ನಡ ಮರೆತು ಇಂಗ್ಲಿಷ್ ಮಾತನಾಡಿದ ಎಪಿಸೋಡ್ ನಲ್ಲಿ, ಸಿಕ್ಕ ಟಿಆರ್ಪಿ ಎಷ್ಟು ಗೊತ್ತೇ? ತಿಳಿದರೆ, ಹಂಗೆ ಊಟ ಮಾಡೋದು ಬಿಡ್ತೀರಾ.
Kannada News: ವೀಕೆಂಡ್ ವಿತ್ ರಮೇಶ್ (Weekend With Ramesh) ಈ ಶೋ ಎಲ್ಲರಿಗೂ ಎಷ್ಟು ಇಷ್ಟ ಎಂದು ಈಗಾಗಲೇ ಗೊತ್ತಿದೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಈಗಷ್ಟೇ ಶುರುವಾಗಿದ್ದು, ಇಬ್ಬರು ಗೆಸ್ಟ್ ಗಳ ಎಪಿಸೋಡ್ ಗಳು ಮುಗಿದಿದ್ದು, ಮೊದಲ ಅತಿಥಿಯಾಗಿ ನಟಿ ರಮ್ಯಾ (Ramya) ಬಂದಿದ್ದರು, ಎರಡನೆಯ ವಾರ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಅವರು ಬಂದಿದ್ದರು. ರಮ್ಯಾ ಅವರ ಎಪಿಸೋಡ್ ಚೆನ್ನಾಗಿತ್ತಾದರು ಅವರು ಹೆಚ್ಚಾಗಿ ಕನ್ನಡ ಮಾತನಾಡಲಿಲ್ಲ ಎಂದು ಟ್ರೋಲ್ ಆಗಿತ್ತು.

ಇದೇ ಮೊದಲ ಸಾರಿ ವೀಕೆಂಡ್ ವಿತ್ ರಮೇಶ್ ಶೋ ಇಷ್ಟರ ಮಟ್ಟಕ್ಕೆ ಟ್ರೋಲ್ ಆಗಿತ್ತು ಎಂದರೆ ತಪ್ಪಲ್ಲ. ರಮ್ಯಾ ಅವರ ಬಾಲ್ಯ, ಅವರು ಹೀರೋಯಿನ್ ಆಗಿದ್ದು ಹೇಗೆ, ಅವರ ಸಕ್ಸಸ್ ಜರ್ನಿ, ರಾಜಕೀಯ ಪ್ರವೇಶ, ರಾಜಕೀಯದ ಜರ್ನಿ ಇದೆಲ್ಲವನ್ನು ಸಹ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ತೋರಿಸಲಾಯಿತು. ಶೋನಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಮಾಡದೆ ಇದ್ದಿದ್ದಕ್ಕೆ ರಮ್ಯಾ ಅವರು ಕಾರಣವನ್ನು ಸಹ ತಿಳಿಸಿದ್ದರು. ಬಂದಿದ್ದ ಅತಿಥಿಗಳಿಗೆ ಕನ್ನಡ ಬರೋದಿಲ್ಲ. ಇದನ್ನು ಓದಿ..Film News: ಭಾಗ್ಯಲಕ್ಷ್ಮಿ ಧಾರಾವಾಹಿಗೆ ಮೊದಲ ಎಂಟ್ರಿ ಯಲ್ಲಿಯೇ ಮನಗೆದ್ದಿರುವ ಕಾವ್ಯ ಗೌಡ ನಿಜಕ್ಕೂ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
ಅದೇ ಕಾರಣಕ್ಕೆ ತಾವು ಇಂಗ್ಲಿಷ್ ನಲ್ಲಿ ಹೆಚ್ಚು ಮಾತನಾಡಿದ್ದಾಗಿ ಹೇಳಿದರು ರಮ್ಯಾ. ಆದರೆ ಜನರು ಟ್ರೋಲ್ ಮಾಡುವುದನ್ನಂತೂ ಬಿಡಲಿಲ್ಲ. ಇನ್ನು ಎರಡನೇ ಸಂಚಿಕೆಯಲ್ಲಿ ಪ್ರಭುದೇವ ಅವರು ಬಂದಿದ್ದರು, ಅವರು ಅಪ್ಪಟ ಚಾಮರಾಜನಗರ ಶೈಲಿಯ ಕನ್ನಡ ಮಾತನಾಡಿದ್ದು, ವೀಕ್ಷಕರಿಗೆಲ್ಲ ಬಹಳ ಮೆಚ್ಚುಗೆ ಆಯಿತು, ಪ್ರಭುದೇವ ಅವರನ್ನು ಸಪೋರ್ಟ್ ಮಾಡಿ, ಅವರ ಎಪಿಸೋಡ್ ಮೆಚ್ಚಿದ್ದರು. ರಮ್ಯಾ ಅವರ ಎಪಿಸೋಡ್ ಗಿಂತ ಇದೇ ಚೆನ್ನಾಗಿದೆ ಎಂದಿದ್ದರು.
ಇನ್ನು ರಮ್ಯಾ ಅವರ ಎಪಿಸೋಡ್ ಗೆ ಟಿಆರ್ಪಿ ರೇಟಿಂಗ್ ಎಷ್ಟು ಬರಬಹುದು ಎನ್ನುವ ಕುತೂಹಲ ಕೂಡ ಎಲ್ಲರಲ್ಲೂ ಇತ್ತು, ಅದಕ್ಕೀಗ ಉತ್ತರ ಸಿಕ್ಕಿದೆ, ರಮ್ಯಾ ಅವರ ಎಪಿಸೋಡ್ ಗೆ 5.8ರೇಟಿಂಗ್ ಬಂದಿದೆ. ಆದರೆ 8 ಗಿಂತ ಹೆಚ್ಚು ರೇಟಿಂಗ್ ಬರಬಹುದು ಎಂದು ನಿರೀಕ್ಷೆ ಮಾಡಿದ್ದರು, ಆದರೆ 5.8 ನಿರೀಕ್ಷೆಗೆ ಕಡಿಮೆ ಆಗಿದೆ..ಹಾಗಾಗಿ ಇದು ಸ್ವಲ್ಪ ನಿರಾಸೆ ಮೂಡಿಸಿದ್ದು, ಮುಂದಿನ ಎಪಿಸೋಡ್, ಪ್ರಭುದೇವ ಅವರ ಎಪಿಸೋಡ್ ಗೆ ಎಷ್ಟು ರೇಟಿಂಗ್ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Bhagyalakshmi: ಕೊನೆಗೂ ಸಿಕ್ತು ಕಾರಣ: ನಟಿ ಗೌತಮಿ ಭಾಗ್ಯಲಕ್ಷ್ಮಿ ಧಾರವಾಹಿ ಬಿಟ್ಟು ಹೋಗಲು ಕಾರಣವೇನು ಗೊತ್ತೇ?? ತಾನೇ ಎಲ್ಲವನ್ನು ಹೇಳಿದ ನಟಿ.
Comments are closed.