Kannada News: ಅನಿರುಧ್ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ: ಇರುವ ಒಂದು ಅವಕಾಶವನ್ನು ಕಳೆದುಕೊಂಡರೆ ಅನಿರುಧ್: ತೆರೆ ಹಿಂದೆ ಏನಾಗಿದೆ ಗೊತ್ತೇ?
Kannada News: ಚಂದನವನದ ನಟ ಹಾಗೂ ಕಿರುತೆರೆಯಲ್ಲಿ ಒಂದೇ ರಾತ್ರಿಯಲ್ಲಿ ಸ್ಟಾರ್ ಆದ ನಟ ಅನಿರುದ್ಧ್ (Anirudh) ಅವರ ಅದೃಷ್ಟ ಯಾಕೋ ಕೈಕೊಟ್ಟ ಹಾಗೆ ತೋರುತ್ತಿದೆ. ನಟ ಅನಿರುದ್ಧ್ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಇಲ್ಲದೆ ಇದ್ದಾಗ, ಅವರನ್ನು ಸ್ಟಾರ್ ಆಗಿ ಮಾಡಿದ್ದು ಜೊತೆ ಜೊತೆಯಲಿ (Jothe Jotheyali) ಧಾರವಾಹಿ. ಈ ಧಾರವಾಹಿಯ ಮೂಲಕ ಅನಿರುದ್ಧ ಅವರು ರಾತ್ರೋರಾತ್ರಿ ಕಿರುತೆರೆ ಸ್ಟಾರ್ ಆಗಿದ್ದರು. ಜೊತೆಜೊತೆಯಲಿ ಧಾರವಾಹಿಯನ್ನು ಹಲವು ಜನರು ಅನಿರುದ್ಧ್ ಅವರಿಗಾಗಿಯೇ ನೋಡುತ್ತಿದ್ದರು.

ಜೊತೆ ಜೊತೆಯಲಿ ಧಾರಾವಾಹಿ ಅಷ್ಟರ ಮಟ್ಟಿಗೆ ಸಕ್ಸಸ್ ಕಾಣೋದಕ್ಕೆ ಅನಿರುದ್ಧ್ ಅವರ ಪಾತ್ರ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ. ಆದರೆ ಧಾರವಾಹಿ ತಂಡದ ಜೊತೆಗೆ ಆದ ಜಗಳ ವೈಮನಸ್ಸಿನಿಂದ ಅನಿರುದ್ಧ್ ಅವರನ್ನು ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಹಾಕಲಾಯಿತು. ಬಳಿಕ ಅವರನ್ನು ಕನ್ನಡ ಕಿರುತೆರೆಯಿಂದ ಬ್ಯಾನ್ ಮಾಡಬೇಕು ಎಂದು ಕೂಡ ಚರ್ಚೆಗಳು ನಡೆದಿದ್ದವು. ಹಾಗಾಗಿ ಅನಿರುದ್ಧ್ ಅವರು ಕಿರುತೆರೆಯಿಂದ ದೂರವೇ ಉಳಿದಿದ್ದರು.. ಇದನ್ನು ಓದಿ..Kannada News: ಐಪಿಎಲ್ ನಲ್ಲಿ ಕೋಟಿ ಕೋಟಿ ಖರ್ಚು ಮಾಡುವ ಪ್ರೀತಿ ಜಿಂತಾ: ಕಾರಿನ ಬಳಿ ಬಂದ ಬಿಕ್ಷುಕನಿಗೆ ಮಾಡಿದ್ದೇನು ಗೊತ್ತೇ?? ದುಡ್ಡಿದ್ರೆ ಏನು, ಮನಸ್ಸು ಮುಖ್ಯ. ಏನಾಗಿದೆ ಗೊತ್ತೇ?
ಆದರೆ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಆಪ್ತ ಸ್ನೇಹಿತ ಆಗಿರುವ ಖ್ಯಾತ ನಿರ್ದೇಶಕ ಎಸ್.ನಾರಾಯಣ್ (S Narayan) ಅವರು ಅನಿರುದ್ಧ್ ಅವರಿಗಾಗಿ ಸೂರ್ಯವಂಶ ಟೈಟಲ್ ನಲ್ಲಿ ಒಂದು ಧಾರವಾಹಿ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸುದ್ದಿ ವೈರಲ್ ಆಗಿತ್ತು, ಉದಯ ಟಿವಿಯಲ್ಲಿ ಈ ಧಾರವಾಹಿ ಪ್ರಸಾರವಾಗುತ್ತದೆ ಎನ್ನಲಾಗಿತ್ತು. ಅನಿರುದ್ಧ್ ಅವರು ಮತ್ತು ಎಸ್.ನಾರಾಯಣ್ ಅವರು ಇಬ್ಬರು ಕೂಡ ಈ ಸುದ್ದಿಯನ್ನು ಸ್ಪಷ್ಟಪಡಿಸಿದ್ದರು. ಆದರೆ ಈಗ ಈ ಪ್ರಾಜೆಕ್ಟ್ ನಿಂತು ಹೋಗಿದೆ ಎಂದು ಮತ್ತೊಂದು ಹೊಸ ವಿಚಾರ ಕೇಳಿಬರುತ್ತಿದೆ.
ಸೂರ್ಯವಂಶ (Suryavamsha) ಧಾರವಾಹಿ ಶುರುವಾಗಿ, 20 ಎಪಿಸೋಡ್ ಚಿತ್ರೀಕರಣ ಕೂಡ ಆಗಿ, ಈಗ ಧಾರವಾಹಿ ನಿಂತು ಹೋಗಿದೆ. ಎಸ್. ನಾರಾಯಣ್ ಅವರು ಓ ಪ್ರಾಜೆಕ್ಟ್ ಇಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಾರಾಯಣ್ ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂದು ಇನ್ನು ಗೊತ್ತಾಗಿಲ್ಲ. ಎಸ್.ನಾರಾಯಣ್ ಅವರು ಸೂಪರ್ ಹಿಟ್ ಸಿನಿಮಾಗಳು ಹಾಗೂ ಧಾರಾವಾಹಿಗಳನ್ನು ನೀಡಿರುವ ಎಸ್.ನಾರಾಯಣ್ ಅವರು ಅನಿರುದ್ಧ್ ಅವರಿಗೆ ದೊಡ್ಡ ಬ್ರೇಕ್ ಕೊಡುತ್ತಾರೆ ಎನ್ನಲಾಗಿತ್ತು, ಆದರೆ ಈಗ ಅದೆಲ್ಲವೂ ನಿಂತು ಹೋಗುವುದು ಅನಿರುದ್ಧ್ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇದನ್ನು ಓದಿ..Savings Scheme:ನಿಮಗೆ ಮದುವೆ ಆಗಿದ್ಯಾ?? ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು 10 ಸಾವಿರ ಪೋಸ್ಟ್ ಆಫೀಸ್ ನಿಂದ ಪಡೆಯಬೇಕು ಎಂದರೆ, ಜಸ್ಟ್ ಹೀಗೆ ಮಾಡಿ ಸಾಕು.
Comments are closed.