Kannada News: ಯುವನಟಿಯರಿಗೆ ತಪ್ಪಾದ ಡೈರೆಕ್ಟರ್, ಪ್ರೊಡ್ಯೂಸರ್ ಗಳ ಕಾಟ: ಅವಕಾಶ ಸಿಗಬೇಕು ಎಂದರೆ, ಅದು ಕೊಡಲೇಬೇಕು. ನಟಿ ಮಾಳವಿಕಾ ಶ್ರೀನಾಥ್ ಹೇಳಿದ್ದೇನು ಗೊತ್ತೆ?

Kannada News: ಚಿತ್ರರಂಗದಲ್ಲಿ ಮಿಂಚಬೇಕು ಎಂದು ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು, ಬಹಳಷ್ಟು ಜನರು ಬರುತ್ತಾರೆ. ಆದರೆ ಎಲ್ಲರ ಕನಸು ಇಲ್ಲಿ ನನಸಾಗುವುದಿಲ್ಲ. ಇಲ್ಲಿ ಗೆದ್ದು ಒಳ್ಳೆಯ ಸ್ಥಾನಕ್ಕೆ ಏರಿದವರಿಗಿಂತ, ಸೋತು ಕಷ್ಟ ಅನುಭವಿಸಿದವರೆ ಹೆಚ್ಚು. ಇಲ್ಲಿನ ಕೆಲವು ಸಂಸ್ಕೃತಿಗಳನ್ನು ಸ್ವೀಕರಿಸಲಾಗದೆ, ಹೊರಗೆ ಓಡಿ ಹೋದವರೇ ಹೆಚ್ಚು. ಅದರಲ್ಲೂ ಸಮಸ್ಯೆಗಳು ಹೆಚ್ಚಾಗಿ ಕಾಡುವುದು ನಾಯಕಿಯರಿಗೆ. ನಾಯಕಿಯರನ್ನು ಕ್ಯಾಸ್ಟಿಂಗ್ ಕೌಚ್ ಎನ್ನುವ ಭೂತ ಬೆಂಬಿಡದೆ ಕಾಡುತ್ತಿದೆ ಎಂದರೆ ತಪ್ಪಲ್ಲ..

malavika srinath interesting comments Kannada news Kannada News:
Kannada News: ಯುವನಟಿಯರಿಗೆ ತಪ್ಪಾದ ಡೈರೆಕ್ಟರ್, ಪ್ರೊಡ್ಯೂಸರ್ ಗಳ ಕಾಟ: ಅವಕಾಶ ಸಿಗಬೇಕು ಎಂದರೆ, ಅದು ಕೊಡಲೇಬೇಕು. ನಟಿ ಮಾಳವಿಕಾ ಶ್ರೀನಾಥ್ ಹೇಳಿದ್ದೇನು ಗೊತ್ತೆ? 2

ಕೆಲವು ನಿರ್ದೇಶಕರು, ನಿರ್ಮಾಪಕರು ಹಾಗೂ ಕೆಲವೊಮ್ಮೆ ನಾಯಕರು ಕೂಡ ನಾಯಕಿಯರಿಗೆ ತೊಂದರೆ ಕೊಡುವುದು, ಅವರಿಗೆ ಬೇಕಾದ ಹಾಗೆ ಬಳಸಿಕೊಳ್ಳುವುದು, ಹೀಗೆಲ್ಲಾ ಮಾಡುತ್ತಾರೆ. ಇಂಥ ಹಲವು ಘಟನೆಗಳ ಬಗ್ಗೆ ಚಿತ್ರರಂಗದಲ್ಲಿ ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಮೊದಲಿಗೆ ಇದನ್ನೆಲ್ಲ ಹಂಚಿಕೊಳ್ಳಲು ಹೆದರುತ್ತಿದ್ದ ನಾಯಕಿಯರು ಈಗ ಓಪನ್ ಆಗಿ ಹೇಳಿಕೊಳ್ಳುತ್ತಿದ್ದಾರೆ.ಮೀ ಟು ಶುರು ಆದಾಗಿನಿಂದ ನಾಯಕಿಯರು ಧೈರ್ಯವಾಗಿ ಈ ವಿಚಾರವಾಗಿ ಮಾತನಾಡುತ್ತಿದ್ದು.. ಇದನ್ನು ಓದಿ..Jayalalitha: 7 ವರ್ಷ ಪ್ರೀತಿಸಿದ್ದ ಹಿರಿಯ ನಟಿ: ಆಕೆಗೆ ಭೂಮಿ ಮೇಲೆ ನರಕ ತೋರಿಸಿದ ಡೈರೆಕ್ಟರ್. ಕೊನೆಗೆ ಆಕೆಯ ಬಾಳಲ್ಲಿ ಏನಾಗಿದೆ ಗೊತ್ತೇ?

ಇದೀಗ ಮಲಯಾಳಂ ನಟಿ ಮಾಳವಿಕಾ ಶ್ರೀನಾಥ್ ಅವರು ತಮಗೆ ಆಗಿದ್ದ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಮಂಜು ವಾರಿಯರ್ ಅವರ ಮಗಳ ಪಾತ್ರದ ಆಡಿಷನ್ ಗಾಗಿ ಹೋದಾಗ ಆದ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. “ಕ್ಯಾಸ್ಟಿಂಗ್ ಕೌಚ್ ಎನ್ನುವುದು ನಿಜ, ಅದರ ಅನುಭವ ನನಗೂ ಆಗಿದೆ. ಆದರೆ ಆ ಘಟನೆ ಬಗ್ಗೆ ನಾನು ಎಲ್ಲಿಯೂ ಹೇಳಿರಲಿಲ್ಲ, ನನಗೆ ಒಳ್ಳೆಯ ಸ್ಥಾನ ಇರುವುದರಿಂದ ಹೇಳೋ ಧೈರ್ಯ ಇದೆ. ಒಂದು ಸಿನಿಮಾದಲ್ಲಿ ಮಂಜು ವಾರಿಗಯರ್ ಅವರ ಮಗಳ ಪಾತ್ರ ಅಂದ್ರೆ ಎಲ್ಲರಿಗು ಆಕರ್ಷಣೆ ಇರುತ್ತದೆ..

ಆ ಸಮಯದಲ್ಲಿ ನನಗೆ ಚಿತ್ರರಂಗದಲ್ಲಿ ಯಾರ ಪರಿಚಯ ಕೂಡ ಇಲ್ಲದ ಕಾರಣ ನಾನು ನನ್ನ ಅಮ್ಮ ಮತ್ತು ಸಿಸ್ಟರ್ ಜೊತೆಗೆ ಆಡಿಷನ್ ಗೆ ಹೋದೆ, ತ್ರಿಶೂರ್ ನಲ್ಲಿ ಆಡಿಷನ್ ಇತ್ತು, ಅದು ನಿಜವಾದ ಆಡಿಷನ್ ಅಥವಾ ಅಲ್ಲಾ ಎನ್ನುವುದು ಕೂಡ ನನಗೆ ಗೊತ್ತಿರಲಿಲ್ಲ. ಆಡಿಷನ್ ಎಲ್ಲ ಆದಮೇಲೆ ಕೂದಲು ಸರಿ ಮಾಡಿಕೊಳ್ಳೋಕೆ ಡ್ರೆಸ್ಸಿಂಗ್ ರೂಮ್ ಗೆ ಹೋದರೆ, ಆ ವ್ಯಕ್ತಿ ಹಿಂದೆ ಇಂದ ಬಂದು ಅಪ್ಪಿಕೊಂಡ, ನನಗೆ ಆಗ ಇನ್ನು ಚಿಕ್ಕ ವಯಸ್ಸು, ಭಯದಲ್ಲಿ ನಡುಗುವ ಹಾಗೆ ಆಯಿತು. ಅವರನ್ನು ದೂರ ತಳ್ಳುವ ಪ್ರಯತ್ನ ಮಾಡಿದರು ಅದು ಸಾಧ್ಯವಾಗಲಿಲ್ಲ, ಅಳೋದಕ್ಕೆ ಶುರು ಮಾಡಿ, ಹೇಗೋ ಅವರ ಗಮನವನ್ನು ಬೇರೆ ಕಡೆ ಸೆಳೆದು, ಅಲ್ಲಿಂದ ಹೊರಗೆ ಬಂದೆ..” ಎಂದು ಹೇಳಿದ್ದಾರೆ ನಟಿ ಮಾಳವಿಕಾ ಶ್ರೀನಾಥ್. ಇದನ್ನು ಓದಿ..Business: ವಿದೇಶದಲ್ಲಿಯೂ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಈ ಬೆಳೆ ಬೆಳೆದು, ಕೋಟಿ ಕೋಟಿ ಗಳಿಸುವುದು ಹೇಗೆ ಗೊತ್ತೇ??

Comments are closed.