Savings: ಹೆಣ್ಣು ಮಕ್ಕಳ ಮದುವೆಗೆ, ಓದಿಗಾಗಿ ಕೇವಲ 250 ರೂಪಾಯಿ ಇಂದ ಉಳಿತಾಯ ಆರಂಭಿಸಿದರೆ, 65 ಲಕ್ಷ ಕೊಡುವ ಯೋಜನೆ ಯಾವುದು ಗೊತ್ತೇ??
Savings: ಜನರಿಗೆ ಅನುಕೂಲ ಆಗಲಿ ಎಂದು ಪೋಸ್ಟ್ ಆಫೀಸ್ (Post Office) ಒಳ್ಳೆಯ ಯೋಜನೆಗಳನ್ನು ತರುತ್ತಲೇ ಇದೆ, ಇಲ್ಲಿ ಹಣ ಹೂಡಿಕೆ ಮಾಡಿದರೆ, ನಿಮ್ಮ ಹಣ ಸುರಕ್ಷಿತವಾಗಿ ಇರುವುದರ ಜೊತೆಗೆ, ನಿಮಗೆ ಒಳ್ಳೆಯ ಆದಾಯ ಕೂಡ ಸಿಗುತ್ತದೆ.ಇದು ವಿಶೇಷವಾಗಿ ಹೆಣ್ಣುಮಕ್ಕಳಿಗೋಸ್ಕರ ಮಾಡಿರುವ ಯೋಜನೆ ಆಗಿದೆ, ಇದರ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddhi Yojane), ಹೆಣ್ಣುಮಕ್ಕಳ ಓದು ಮದುವೆ ಇದಕ್ಕಾಗಿ ಒಳ್ಳೆಯ ಯೋಜನೆ ಆಗಿದೆ. ಇಲ್ಲಿ ನೀವು ದಿನಕ್ಕೆ 250 ರೂಪಾಯಿ ಉಳಿತಾಯ ಮಾಡಿ, 65 ಲಕ್ಷ ಪಡೆಯಬಹುದು. ಈ ಯೋಜನೆ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ಇದು ಕೇಂದ್ರ ಸರ್ಕಾರದ ಯೋಜನೆ ಆಗಿದೆ. ಕಡಿಮೆ ಹಣದಲ್ಲಿ ಈ ಯೋಜನೆಯ ಖಾತೆ ತೆರೆಯಬಹುದು. ಇಲ್ಲಿ ನೀವು ಸ್ವಲ್ಪ ಸ್ವಲ್ಪ ಹಣವನ್ನು ನಿಮ್ಮ ಮಗುವಿನ ಹೆಸರಿನಲ್ಲಿ ಠೇವಣಿ ಇಡಬಹುದು, 10 ವರ್ಷದ ಒಳಗಿನ ಹೆಣ್ಣುಮಕ್ಕಳು ಇರುವ ತಂದೆ ಈ ಯೋಜನೆಯನ್ನು ಶುರು ಮಾಡಬಹುದು. 250 ರೂಪಾಯಿ ಇಂದ ಈ ಖಾತೆ ಶುರುವಾಗುತ್ತದೆ. ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಈ ಖಾತೆ ತೆರೆಯಬಹುದು. ಈ ಯೋಜನೆಗೆ 7.6% ಬಡ್ಡಿ ಸಿಗುತ್ತದೆ, ಒಂದು ಮನೆಯ ಇಬ್ಬರು ಹೆಣ್ಣುಮಕ್ಕಳು ಇದರ ಬೆನಿಫಿಟ್ಸ್ ಪಡೆಯಬಹುದು. ಇದನ್ನು ಓದಿ.. LIC: ದೇಶದ ಜನರು ಮುಗಿಬಿದ್ದು ತೆಗೆದುಕೊಳ್ಳುವ ಎಲ್ ಐ ಸಿ ಯೋಜನೆ ಯಾವುದು ಗೊತ್ತೇ?? 50 ಸಾವಿರ ಹಾಕಿದ್ರೆ, 9 ಲಕ್ಷ ಲಾಭ.
ಸುಕನ್ಯಾ ಸಮೃದ್ಧಿ ಯೋಜನೆಗೆ ಎಷ್ಟು ಬಡ್ಡಿ ಕೊಡಬೇಕು ಎನ್ನುವುದನ್ನು ನಮ್ಮ ಸರ್ಕಾರ ನಿರ್ಧಾರ ಮಾಡುತ್ತಾರೆ. ಈ ಯೋಜನೆಯ ಮೇಲೆ ಈಗ ನಿಮಗೆ 7.6% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ನೀವು ಮ್ಯಾಕ್ಸಿಮಮ್ 1.50 ಲಕ್ಷ ರೂಪಾಯಿಗಳನ್ನು ನಿಮ್ಮ ಮಗಳಿಗೆ 18 ವರ್ಷ ತುಂಬಿದ ನಂತರ ಅಥವಾ 10ನೇ ತರಗತಿ ಪಾಸ್ ಆದ ನಂತರ ನಿಮ್ಮ ಖಾತೆಯಿಂದ ಹಣವನ್ನು ಪಡೆದುಕೊಳ್ಳಬಹುದು.. ಇದರಲ್ಲಿ ನಿಮಗೆ ಆದಾಯ ತೆರಿಗೆ ವಿನಾಯಿತಿ ಸಹ ಸಿಗುತ್ತದೆ.
ಈ ಯೋಜನೆಯಲ್ಲಿ ಪ್ರತಿದಿನ 250 ರೂಪಾಯಿ ಹೂಡಿಕೆ ಮಾಡಿದರೆ, ಒಂದು ತಿಂಗಳಿಗೆ ₹12,500 ರೂಪಾಯಿ ಇನ್ವೆಸ್ಟ್ ಮಾಡಿರುತ್ತೀರಿ. ಹೀಗೆ 22.50 ಲಕ್ಷ ರೂಪಾಯಿ ಹೂಡಿಕೆ ಮಾಡುತ್ತೀರಿ. 15 ವರ್ಷಗಳ ನಂತರ ಅಂದರೆ ನಿಮ್ಮ ಮಗಳಿಗೆ 21 ವರ್ಷವಾದಾಗ ₹65 ಲಕ್ಷ ರೂಪಾಯಿ ಸಿಗುತ್ತಾರೆ. ಈ ಯೋಜನೆಯಲ್ಲಿ ನಿಮಗೆ ಸುಮಾರು ₹41.15 ಲಕ್ಷ ಬಡ್ಡಿ ಸಿಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಅಗತ್ಯವಿರುವ ದಾಖಲೆಗಳು ಹೀಗೆದೆ.. *ತಂದೆ ತಾಯಿಯ ಆಧಾರ್ ಕಾರ್ಡ್/ಐಡಿ * ಮಗಳ ಆಧಾರ್ ಕಾರ್ಡ್ *ಮಗಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್. *ಮಗಳ ಪಾಸ್ ಪೋರ್ಟ್ ಸೈಜ್ ಫೋಟೋ. *ಮೊಬೈಲ್ ನಂಬರ್. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
Comments are closed.