Petrol Bunk: ಕೋಟ್ಯಂತರ ರೂಪಾಯಿ ಲಾಭ ನೀಡುವ ಪೆಟ್ರೋಲ್ ಬಂಕ್ ಅನ್ನು ಆರಂಭಿಸಬೇಕು ಎಂದರೆ ಏನು ಮಾಡಬೇಕು ಗೊತ್ತೇ? ಇದಕ್ಕಿಂದ ಲಾಭ ಬೇಕೇ??

Petrol bunk: ಕೋಟ್ಯಂತರ ರೂಪಾಯಿ ಲಾಭ ನೀಡುವ ಪೆಟ್ರೋಲ್ ಬಂಕ್ ಅನ್ನು ಆರಂಭಿಸಬೇಕು ಎಂದರೆ ಏನು ಮಾಡಬೇಕು ಗೊತ್ತೇ? ಇದಕ್ಕಿಂದ ಲಾಭ ಬೇಕೇ??

Petrol bunk: ಇಂಧನ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡಬೇಕು ಎಂದು ಆಸಕ್ತಿ ಹೊಂದಿರುವವರಿಗೆ, ಪೆಟ್ರೋಲ್ ಪಂಪ್ ತೆರೆಯುವುದು ಒಂದು ಉತ್ತಮವಾಫಾ ಬ್ಯುಸಿನೆಸ್ ಆಪ್ಶನ್ ಆಗಿದೆ. ಈ ಬ್ಯುಸಿನೆಸ್ ನಲ್ಲಿ ಉತ್ತಮವಾದ ಲಾಭ ಪಡೆಯಬಹುದು. ಆದರೆ ಪೆಟ್ರೋಲ್ ಪಂಪ್ ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ನೀವು ಆ ಬ್ಯುಸಿನೆಸ್ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರಬೇಕು. ಪೆಟ್ರೋಲ್ ಪಂಪ್ ತೆರೆಯಲು ಅಗತ್ಯವಿರುವ ಅರ್ಹತೆ, ಭೂಮಿಯ ಬಗ್ಗೆ ಮಾಹಿತಿ ಎಲ್ಲವನ್ನು ತಿಳಿಸಿಕೊಡುತ್ತೇವೆ ನೋಡಿ.. ದಿನಕ್ಕೆ ಜುಜುಬಿ 323 ರೂಪಾಯಿ ಹಾಕಿ, 76 ಲಕ್ಷ ಪಡೆಯುವ ಅವಕಾಶ ನೀಡಿದ LIC, ಇದರ ಲಾಭ ತಿಳಿದರೆ, ಇಂದೇ ಪಾಲಿಸಿ ಹಾಕ್ತಿರಾ.

petrol bunk dealer ship in kannada Petrol Bunk

*ವಯಸ್ಸು :- ಪೆಟ್ರೋಲ್ ಪಂಪ್ ಬ್ಯುಸಿನೆಸ್ ಶುರು ಮಾಡಲು, ಮಿನಿಮಮ್ 21 ವರ್ಷ ಹಾಗೆಯೇ ಮ್ಯಾಕ್ಸಿಮಮ್ 55 ವರ್ಷ ಆಗಿರಬೇಕು.
*ವಿದ್ಯಾರ್ಹತೆ :- ಈ ಬ್ಯುಸಿನೆಸ್ ನೇ 10ನೇ ತರಗತಿ ಪೂರ್ಣಗೊಳಿಸಿರಬೇಕು.
*ಕೆಲಸದ ಅನುಭವ :- ರೀಟೇಲ್ ಅಥವಾ ಯಾವುದೇ ಬ್ಯುಸಿನೆಸ್ ಕ್ಷೇತ್ರದಲ್ಲಿ ಬ್ಯುಸಿನೆಸ್ ನಡೆಸಿ, 3 ವರ್ಷಗಳ ಅನುಭವ ಇರಬೇಕು.
*ಆರ್ಥಿಕ ಸಾಮರ್ಥ್ಯ :- ಅರ್ಜಿ ಹಾಕುವವರ ಹತ್ತಿರ 25ಲಕ್ಷ ರೂಪಾಯಿ ಇರಬೇಕು, ಹಾಗೆಯೇ ಅವರ ಕುಟುಂಬದ ಒಟ್ಟು ನಿವ್ವಳ 50ಲಕ್ಷಕ್ಕಿಂತ ಜಾಸ್ತಿ ಇರಬೇಕು. ಮತ್ತೊಮ್ಮೆ ಕಠಿಣ ನಿರ್ಧಾರಕ್ಕೂ ಮುಂದಾದ ಗಡ್ಕರಿ: ಟೋಲ್ ಗಳಲ್ಲಿ ಮತ್ತೊಂದು ಹೊಸ ಬದಲಾವಣೆ. ಏನು ಗೊತ್ತೇ?? ಇದಪ್ಪ ನಿರ್ಧಾರ ಅಂದ್ರೆ.

*ಅರ್ಜಿ ಹಾಕುವವರ ಮೇಲೆ ಯಾವುದೇ ರೀತಿಯ ಕ್ರಿಮಿನಲ್ ಕೇಸ್ ಗಳು ಇರಬಾರದು. ಹಾಗೂ ಯಾವುದೇ ಸಾಲಕ್ಕೆ ಡೀಫಾಲ್ಟರ್ ಆಗಿರಬಾರದು.
*ನಮ್ಮ ದೇಶದಲ್ಲಿ ಪೆಟ್ರೋಲ್ ಪಂಪ್ (Petrol Bunk) ಶುರು ಮಾಡಲು, ಜಾಗದ ಅಗತ್ಯ ಹೆಚ್ಚು, ಇದಕ್ಕಾಗಿ ಜಾಗ ಮತ್ತು ವಿತರಣಾ ಘಟಕದ ಮೇಲೆ ಯಾವುದೇ ಕಾನೂನಿನ ವಿವಾದ ಇರಬಾರದು ಹಾಗೂ ಅದರ ಓನರ್ ಅರ್ಜಿದಾರರೇ ಆಗಿರಬೇಕು.
*ಒಂದು ವೇಳೆ ಗ್ರಾಮೀಣ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ತೆರೆಯಬೇಕು ಎಂದರೆ, ಒಂದು ವಿತರಣಾ ಘಟಕಕ್ಕೆ 800 ಚದರ ಮೀಟರ್ ಹಾಗೂ 2 ವಿತರಣಾ ಘಟಕ ಸ್ಥಾಪಿಸಲು 1200 ಚದರ ಮೀಟರ್ ಸ್ಥಳದ ಅವಶ್ಯಕತೆ.

*ಸಿಟಿಗಳಲ್ಲಿ ಪೆಟ್ರೋಲ್ ಪಂಪ್ ಶುರು ಮಾಡಲು, 500 ಚದರ ಮೀಟರ್ ಹಾಗೂ ಎರಡು ವಿತರಣಾ ಘಟಕಕ್ಕೆ 800 ಚದರ ಮೀಟರ್ ಸ್ಥಳದ ಅವಶ್ಯಕತೆ ಇದೆ..
*ನ್ಯಾಷನಲ್ ಹೈವೇ ಗಳಲ್ಲಿ ಪೆಟ್ರೋಲ್ ಪಂಪ್ (Petrol Bunk) ತೆರೆಯಲು ಒಂದು ವಿತರಣಾ ಘಟಕಕ್ಕೆ 1200 ಮೀಟರ್ ಚದರ, ಎರಡು ವಿತರಣಾ ಘಟಕಕ್ಕೆ 2000 ಮೀಟರ್ ಚದರ ಇಷ್ಟು ಭೂಮಿಯ ಅವಶ್ಯಕತೆ ಇದೆ.
*ನಮ್ಮ ದೇಶದಲ್ಲಿ ಪೆಟ್ರೋಲ್ ಪಂಪ್ ತೆರೆಯುವ ಪ್ಲಾನ್ ಹೊಂದಿದ್ದರೆ, ಹೂಡಿಕೆ ಮಾಡುವ ಸ್ಥಳದ ಬೆಲೆ, ನಿರ್ಮಿಸುವ ಖರ್ಚು, ಸಲಕರಣೆಗಳ ಖರ್ಚು, ಪರವಾನಗಿ ಶುಲ್ಕ ಸೇರಿದಂತೆ ಭಹಳಷ್ಟು ಖರ್ಚುಗಳು ಇರುತ್ತದೆ.

*ಸ್ಥಳದ ಮೊತ್ತವು ಆಯಾ ಜಾಗ ಮತ್ತು ಭೂಮಿಯ ವಿಸ್ತೀರ್ಣ ಎಷ್ಟಿದೆ ಎನ್ನುವುದನ್ನು ಅವಲಂಬಿಸಿರುತ್ತದೆ, ನೆಲದ ಬೆಲೆ ಈಗ 20 ಲಕ್ಷದಿಂದ 1 ಕೋಟಿವರೆಗು ಇರುತ್ತದೆ. (Petrol Bunk)
*ಇದರ ನಿರ್ಮಾಣ ಹಣವು, ಅಲ್ಲಿನ ವಿನ್ಯಾಸ, ಬಳಕೆ ಮಾಡುವ ವಸ್ತುಗಳು, ಪೆಟ್ರೋಲ್ ಪಂಪ್ ನ ಸೈಜ್ ಇದೆಲ್ಲದರ ಮೇಲೆ ಅವಲಂಬಿಸಿರುತ್ತದೆ. ಇದರ ವೆಚ್ಚ ಸುಮಾರು 30 ಲಕ್ಷ ರೂಪಾಯಿ ಇಂದ 1ಕೋಟಿ ವರೆಗು ಆಗುತ್ತದೆ.

*ಅಗತ್ಯವಿರುವ ಸಲಕರಣೆಗಳ ವೆಚ್ಚ, ಇಂಧನವನ್ನು ವಿತರಿಸುವ ಘಟಕಗಳು, ಶೇಖರಿಸುವ ಟ್ಯಾಂಕರ್ ಗಳು, ಪೆಟ್ರೋಲ್ ಪಂಪ್ ನಡೆಸಲು ಬೇಕಿರುವ ಸಲಕರಣೆಗಳ ಹಣ ಎಲ್ಲವನ್ನು ಒಳಗೊಂಡಿರುತ್ತದೆ. ಇದರ ಬೆಲೆ 20 ರಿಂದ 50 ಲಕ್ಷದ ವರೆಗು ಇರುತ್ತದೆ.
*ಸರ್ಕಾರಿ ಅಧಿಕಾರಿಗಳಿಂದ ಅನುಮತಿ, ಪರವಾನಗಿ ಪಡೆಯಲು ಒಂದಷ್ಟು ಖರ್ಚು ಇರುತ್ತದೆ, ಇದಕ್ಕಾಗಿ ನಿಮಗೆ 2 ರಿಂದ 5 ಲಕ್ಷ ಖರ್ಚಾಗಬಹುದು.
*ಪೆಟ್ರೋಲ್ ಪಂಪ್ ಶುರು ಮಾಡಲು ಬಯಸುವವರು, ಇಂಧನ ಮಾರುಕಟ್ಟೆ ಕಂಪನಿಗಳು ಬಿಡುವ ಜಾಹೀರಾತುಗಳನ್ನು ನೋಡಿಕೊಳ್ಳಬೇಕು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://www.petrolpumpdealerchayan.in

Comments are closed.