Dhoni: ಆರ್ಸಿಬಿ 18 ನೇ ಓವರ್ ನಲ್ಲಿಯೇ ಗೆಲ್ಲಬಹುದಿತ್ತು, ಆದರೆ ನಡೆದದ್ದು ಏನು ಅಂತೇ ಗೊತ್ತೇ? ಧೋನಿನೆ ಸತ್ಯ ಒಪ್ಪಿಕೊಂಡು ಹೇಳಿದ್ದೇನು ಗೊತ್ತೇ??

Dhoni: ಮೊನ್ನೆ ಏಪ್ರಿಲ್ 17ರಂದು ಬೆಂಗಳೂರಿನ (Bangalore) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿ.ಎಸ್.ಕೆ ವರ್ಸಸ್ ಆರ್.ಸಿ.ಬಿ (CSK vs RCB) ಪಂದ್ಯ ಅತ್ಯಂತ ರೋಚಕವಾಗಿತ್ತು. ಮೊದಲು ಸಿ.ಎಸ್.ಕೆ (CSK) ತಂಡ ಬ್ಯಾಟಿಂಗ್ ಮಾಡಿ, ಆರ್ಸಿಬಿ (RCB) ತಂಡದ ಬೌಲಿಂಗ್ ಪ್ರದರ್ಶನ ನಿರೀಕ್ಷೆಯ ಮಟ್ಟದಲ್ಲಿ ಇರದ ಕಾರಣ, ಅಬ್ಬರಿಸಿದ ಸಿ.ಎಸ್.ಕೆ ಬರೋಬ್ಬರಿ 226 ರನ್ಸ್ ಸ್ಕೋರ್ ಮಾಡಿ, 227 ರನ್ ಗಳ ಟಾರ್ಗೆಟ್ ಅನ್ನು ಆರ್ಸಿಬಿ ತಂಡಕ್ಕೆ ನೀಡಿತು. ಈ ಸ್ಕೋರ್ ಚೇಸ್ ಮಾಡಿದ ಆರ್ಸಿಬಿ ತಂಡ, ವಿರಾಟ್ ಅವರ ವಿಕೆಟ್ ಅನ್ನು ಬಹಳ ಬೇಗ ಕಳೆದುಕೊಂಡಿತು.

dhoni about maxwell faf kannada news Dhoni:
Dhoni: ಆರ್ಸಿಬಿ 18 ನೇ ಓವರ್ ನಲ್ಲಿಯೇ ಗೆಲ್ಲಬಹುದಿತ್ತು, ಆದರೆ ನಡೆದದ್ದು ಏನು ಅಂತೇ ಗೊತ್ತೇ? ಧೋನಿನೆ ಸತ್ಯ ಒಪ್ಪಿಕೊಂಡು ಹೇಳಿದ್ದೇನು ಗೊತ್ತೇ?? 2

ಆದರೆ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell)ಅವರ ಅದ್ಭುತ ಪ್ರದರ್ಶನದಿಂದ ಗೆಲುವು ಸಾಧಿಸುವ ಹಾದಿಯಲ್ಲಿತ್ತು, ಫಾಫ್ ಅವರು 62 ರನ್ಸ್ ಗಳಿಸಿ ಔಟ್ ಆದರೆ, ಮ್ಯಾಕ್ಸ್ವೆಲ್ ಅವರು 76ರನ್ಸ್ ಗಳಿಸಿ ಔಟ್ ಆದರೂ. ಕೊನೆಯ ಐದು ಓವರ್ ಗಳಲ್ಲೂ ಪಂದ್ಯ ಗೆಲ್ಲುವ ಸಾಮರ್ಥ್ಯ ಆರ್ಸಿಬಿ ತಂಡಕ್ಕೆ ಇತ್ತು, ಫಿನಿಷರ್ ಆಗಿರುವ ದಿನೇಶ್ ಕಾರ್ತಿಕ್ (Dinesh Karthik) ಅವರಿಂದ ಗೆಲುವು ತರಲು ಸಾಧ್ಯವಾದರು ಕೂಡ ಅದು ನಡೆಯಲಿಲ್ಲ. ಕೊನೆಗೆ ಆರ್ಸಿಬಿ ತಂಡವನ್ನು ಸೋಲಿಸಿದ ಸಿ.ಎಸ್.ಕೆ 8 ರನ್ ಗಳ ಜಯ ಸಾಧಿಸಿತು. ಈ ಸೋಲಿನ ನಂತರ ಎಂ.ಎಸ್.ಧೋನಿ (M S Dhoni) ಅವರು ಮಾತನಾಡಿದ್ದಾರೆ. ಇದನ್ನು ಓದಿ..RCB IPL 2023: ಆರ್ಸಿಬಿ ತಂಡ ಸೇರಿಕೊಂಡ ಬಲಾಢ್ಯ ಆಟಗಾರರು: ಈ ಬಾರಿ ಕಪ್ ನಮ್ಮದೇ ಬೇಕಿದ್ದರೆ, ಬರೆದು ಇಟ್ಕೊಳಿ. ಯಾರು ಗೊತ್ತೇ??

ಆರ್ಸಿಬಿ ತಂಡದ ಬಗ್ಗೆ ಮಾತನಾಡಿದ ಧೋನಿ ಅವರು, “ಟಾರ್ಗೆಟ್ 220 ರನ್ ಗಿಂತ ಹೆಚ್ಚಾಗಿದ್ದಾಗ, ಬ್ಯಾಟ್ಸ್ಮನ್ ಗಳು ಅಬ್ಬರದ ಪ್ರದರ್ಶನ ನೀಡುತ್ತಲೇ ಇರಬೇಕು, ಕ್ಯಾಪ್ಟನ್ ಫಾಫ್ ಮತ್ತು ಮ್ಯಾಕ್ಸ್ವೆಲ್ ಅದೇ ರೀತಿ ಆಡುತ್ತಾ ಹೋಗಿದ್ದರೆ, ಆರ್ಸಿಬಿ ತಂಡ 18ನೇ ಓವರ್ ನಲ್ಲೇ ಮ್ಯಾಚ್ ಗೆಲ್ಲುವ ಸಾಧ್ಯತೆ ಇತ್ತು. ಆದರೆ ವಿಕೆಟ್ ಹಿಂದೆ ನಿಲ್ಲುವ ನಾನು, ಪಿಚ್ ಹೇಗೆ ಕೆಲಸ ಮಾಡುತ್ತಿದೆ..ಈ ಪರಿಸ್ಥಿತಿಯಲ್ಲಿ ಯಾವ ಬೌಲರ್ ಯಶಸ್ವಿ ಪ್ರದರ್ಶನ ನೀಡಬಹುದು, ಯಾವ ಥರ ಫೀಲ್ಡಿಂಗ್ ಮಾಡಬೇಕು ಎನ್ನುವ ಯೋಚನೆ ನನ್ನದಾಗಿರುತ್ತದೆ.

ನಾನು ಗೆಲುವು ಸೋಲಿನ ಬಗ್ಗೆ ಯೋಚನೆ ಮಾಡುವುದಿಲ್ಲ..ಆ ಕ್ಷಣದಲ್ಲಿ ವಿಕೆಟ್ಸ್ ಪಡೆಯಲು ಏನು ಮಾಡಬೇಕು ಎನ್ನುವ ಬಗ್ಗೆ ಮಾತ್ರ ಯೋಚನೆ ಮಾಡುತ್ತೇನೆ..ಈ ಕಾರಣದಿಂದಲೇ ಮುಖ್ಯವಾದ ವಿಕೆಟ್ಸ್ ಗಳನ್ನು ಪಡೆಯಲು ಸಾಧ್ಯವಾಯಿತು..” ಎಂದು ಕ್ಯಾಪ್ಟನ್ ಕೂಲ್ ಧೋನಿ ಅವರು ಹೇಳಿದ್ದಾರೆ. ಆರ್ಸಿಬಿ ತಂಡ ಉತ್ತಮ ಪ್ರದರ್ಶನ ನೀಡಿತಾದರು, ಡೆತ್ ಓಬರ್ ಗಳಲ್ಲಿ ಸಿ.ಎಸ್.ಕೆ ತಂಡದ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿ ಖಾಲಿ ಇರುವ ಮೂಲೆಯಲ್ಲಿ ಈ ಗಿಡ ಬೆಳೆಸಿ, ತಿಂಗಳಿಗೆ 50 ಸಾವಿರ ಗಳಿಸಿ. ಹೇಗೆ ಬೆಳೆಸಬೇಕು ಗೊತ್ತೇ??

Comments are closed.