Anvitha Sagar: ಧಟ್ಟಿಮೇಳ ಆದ್ಯ ಪಾತ್ರಧಾರಿ ನಿಜಕ್ಕೂ ಯಾರು ಗೊತ್ತೇ?? ಇವರ ಅಣ್ಣ ಕೂಡ ಹೀರೋ. ಬಾರಿ ಪ್ರತಿಭೆ ಹೊಂದಿರುವ ಇವರ ಹಿನ್ನೆಲೆ ಏನು ಗೊತ್ತೇ??

Anvitha Sagar: ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಅಗ್ರಸ್ಥಾನದಲ್ಲಿ ಇರುವುದು ಜೀಕನ್ನಡ (Zee Kannada) ವಾಹಿನಿ. ಈ ಚಾನೆಲ್ ನಲ್ಲಿ ಬರುವ ಎಲ್ಲಾ ಧಾರವಾಹಿಗಳು ವೀಕ್ಷಕರಿಗೆ ಅಚ್ಚುಮೆಚ್ಚು, ಅದರಲ್ಲು ಗಟ್ಟಿಮೇಳ (Gattimela) ಧಾರವಾಹಿ ಅಂದ್ರೆ ಜನರಿಗೆ ಎಷ್ಟರ ಮಟ್ಟಿಗೆ ಇಷ್ಟ ಎಂದು ನಮಗೆಲ್ಲಾ ಗೊತ್ತೇ ಇದೆ. ಈ ಧಾರವಾಹಿ ಪ್ರತಿ ವಾರ ಹೈಯೆಸ್ಟ್ ಟಿಆರ್ಪಿ ರೇಟಿಂಗ್ ಪಡೆದುಕೊಂಡು, ಮೊದಲ ಅಥವಾ ಎರಡನೇ ಸ್ಥಾನದಲ್ಲಿದೆ. ಗಟ್ಟಿಮೇಳ ಧಾರವಾಹಿಯ ಎಲ್ಲಾ ಪಾತ್ರಗಳು ಕೂಡ ಜನರಿಗೆ ತುಂಬಾ ಇಷ್ಟ.

anvitha sagar kannada news updates Anvitha Sagar:
Anvitha Sagar: ಧಟ್ಟಿಮೇಳ ಆದ್ಯ ಪಾತ್ರಧಾರಿ ನಿಜಕ್ಕೂ ಯಾರು ಗೊತ್ತೇ?? ಇವರ ಅಣ್ಣ ಕೂಡ ಹೀರೋ. ಬಾರಿ ಪ್ರತಿಭೆ ಹೊಂದಿರುವ ಇವರ ಹಿನ್ನೆಲೆ ಏನು ಗೊತ್ತೇ?? 2

ಅವುಗಳಲ್ಲಿ ಜನರಿಗೆ ಇಷ್ಟ ಆಗಿರುವವರಲ್ಲಿ ವೇದಾಂತ್ ತಂಗಿ ಆದ್ಯ ಪಾತ್ರ ಕೂಡ ಒಂದು. ಮನೆಯ ಮುದ್ದಿನ ಮಗಳಾಗಿ, ಅಣ್ಣಂದಿರ ಪ್ರೀತಿಯ ತಂಗಿಯಾಗಿ, ಅಣ್ಣಂದಿರ ಜೊತೆಗೆ ತಮಾಷೆ ಮಾಡುತ್ತಾ, ಅವರ ಪ್ರೀತಿಗೆ ಸಪೋರ್ಟ್ ಮಾಡುತ್ತಾ, ಅವರ ಲವ್ ಮದುವೆ ವಿಷಯಕ್ಕೆ ಸಪೋರ್ಟ್ ಮಾಡಿ, ಅತ್ತಿಗೆಯರ ಜೊತೆಗೂ ಫ್ರೆಂಡ್ಲಿ ಆಗಿರುವ ಈ ಪಾತ್ರ ನೋಡಿ ಹುಡುಗರೆಲ್ಲಾ ಸಿಕ್ಕರೆ ಇಂಥ ತಂಗಿ ಸಿಗಬೇಕು ಎಂದುಕೊಂಡಿದ್ದಿದೆ. ಆದ್ಯ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಈ ನಟಿ ನಿಜಕ್ಕೂ ಯಾರು ಗೊತ್ತಾ? ಇಂದು ಇವರ ಬಗ್ಗೆ ತಿಳಿಸಿಕೊಡುತ್ತೇವೆ.. ಇದನ್ನು ಓದಿ..Shivaraj Kumar: ಆರ್ಸಿಬಿ ಮ್ಯಾಚ್ ನೋಡಲು ಶಿವಣ್ಣ ರವರು ಪಡೆದ ಸಂಭಾವನೆ ಎಷ್ಟು ಗೊತ್ತೇ?? ಕರೆತಂದದ್ದು ಯಾರು ಗೊತ್ತೇ? ಪ್ರಮೋಷನ್ ಮಾಡಿದ್ದೇನು ಗೊತ್ತೇ??

ಆದ್ಯ ಪಾತ್ರದಲ್ಲಿ ನಟಿಸಿರುವ ಇವರ ಹೆಸರು ಅನ್ವಿತಾ ಸಾಗರ್, ಇವರನ್ನು ಪಾರ್ವತಿ ಎಂದು ಕೂಡ ಕರೆಯುತ್ತಾರೆ. ಅಪ್ಪಟ ಮಂಗಳೂರಿನ ಹುಡುಗಿ ಆಗಿರುವ ಇವರು 1992ರ ಫೆಬ್ರವರಿ 20ರಂದು ಜನಿಸಿದರು. ಅನ್ವಿತಾ ಅವರು ಮಾಸ್ಟರ್ ಡಿಗ್ರಿ ಮಾಡುವ ಸಮಯದಿಂದಲೇ ನಮ್ಮ ಟಿವಿ ಎನ್ನುವ ಚಾನೆಲ್ ನಲ್ಲಿ 4 ವರ್ಷಗಳ ಕಾಲ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಕೂಡ ನಟಿಸಿದ್ದಾರೆ, ಅನ್ವಿತಾ ಅವರು ನಟನೆ ಶುರು ಮಾಡಿದ್ದು, 2015 ರಲ್ಲಿ ರಂಜಿತ್ ಬಜ್ಪೆ ಅವರು ನಿರ್ದೇಶನ ಮಾಡಿದ ತುಳು ಸಿನಿಮಾ ಇಂದ ಅನ್ವಿತಾ ಅವರು ಹೀರೊಯಿನ್ ಆಗಿ ನಟನೆ ಶುರು ಮಾಡಿದರು.

ಬಳಿಕ ಒಂದೆರಡು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅನ್ವಿತಾ ಅವರ ಕುಟುಂಬದಲ್ಲಿ ಇವರು ಮಾತ್ರವಲ್ಲ, ಅನ್ವಿತಾ ಅವರ ಅಣ್ಣ ಅನೂಪ್ ಸಾಗರ್ (Anup Sagar) ಅವರು ಕೂಡ ನಟನಾಗಿದ್ದು, ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅನ್ವಿತಾ ಅವರು ಕೂಡ ಬಹಳಷ್ಟು ತುಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ ನಂತರ ಅನ್ವಿತಾ ಅವರು ಕಿರುತೆರೆಗೆ ಬಂದರು, ಗಟ್ಟಿಮೇಳ ಧಾರವಾಹಿಯಿಂದ ಇವರಿಗೆ ಇದ್ದ ಜನಪ್ರಿಯತೆ ಹಾಗೂ ಬೇಡಿಕೆ ಎರಡು ಕೂಡ ಹೆಚ್ಚಾಗಿದೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿ ಖಾಲಿ ಇರುವ ಮೂಲೆಯಲ್ಲಿ ಈ ಗಿಡ ಬೆಳೆಸಿ, ತಿಂಗಳಿಗೆ 50 ಸಾವಿರ ಗಳಿಸಿ. ಹೇಗೆ ಬೆಳೆಸಬೇಕು ಗೊತ್ತೇ??

Comments are closed.