Crime News: ಪ್ರೀತಿ ಇಂದ ಮನೆಗೆ ಬಾ ಎಂದು ಕರೆದರು. ಈತ ಕೂಡ ಖುಷಿಯಲ್ಲಿಯೇ ಹೋದ. ಆದರೆ ಕೊನೆಗೆ ಏನಾಗಿ ಹೋಯ್ತು ಗೊತ್ತೇ?
Crime News: ಈಗಿನ ಕಾಲದಲ್ಲಿ ಎಲ್ಲಾ ಸಂಬಂಧಗಳು ಕೂಡ ಹಣದ ಮೇಲೆಯೇ ಅವಲಂಬಿಸಿದೆ. ಆರ್ಥಿಕವಾಗಿ ಚೆನ್ನಾಗಿದ್ದರೆ ಎಲ್ಲಾ ಸಂಬಂಧಗಳು ಕೂಡ ಚೆನ್ನಾಗಿ ಸಾಗುತ್ತಿದೆ. ಹಣಕ್ಕಾಗಿ, ಒಡಹುಟ್ಟಿದ್ದವರು, ಕುಟುಂಬದವರು ಎಂದು ಕೂಡ ನೋಡದೆ ತೊಂದರೆ ಕೊಡುವ ಜನರೇ ಎಲ್ಲಾ ಕಡೆ ಇದ್ದಾರೆ. ಇಂಥ ಜನರನ್ನು ಇಂದು ನಾವು ಎಲ್ಲಾ ಕಡೆ ನೋಡುತ್ತಿದ್ದೇವೆ, ಇತ್ತೀಚೆಗೆ ಇಂಥದ್ದೊಂದು ಘಟನೆ ವಾರಂಗಲ್ (Warangal) ನಲ್ಲಿ ನಡೆದಿದೆ. ಆಸ್ತಿ ವಿಷಯಕ್ಕಾಗಿ ಅಣ್ಣನೆ ತನ್ನ ತಮ್ಮನಿಗೆ ಎಂಥ ಕೆಲಸ ಮಾಡಿದ್ದಾರೆ ಗೊತ್ತಾ?

ಈ ಘಟನೆ ನಡೆದಿರುವುದು ವಾರಂಗಲ್ ನ ಕರೀಮಾಬಾದ್ ನ ಉರ್ಸು ಎನ್ನುವ ಊರಿನಲ್ಲಿ.. ಈ ಊರಿನಲ್ಲಿ ತಲ್ಲಮಂಡುವೆಯ ಗೋವಿಂದುಲ ಶ್ರೀನಿವಾಸ್, ಶ್ರೀಧರ್ ಹಾಗೂ ಶ್ರೀಕಾಂತ್ ಎನ್ನುವ ಮೂವರು ಸಹೋದರರಿದ್ದರು, ಇವರಿಗೆ ತಮ್ಮ ತಂದೆಯಿಂದ 94.16 ಗಜ ಇಷ್ಟು ಜಾಗ ಮೂವರಿಗೂ ಸಿಕ್ಕಿತ್ತು. ಇದರಲ್ಲಿ ದೊಡ್ಡ ಅಣ್ಣ ಶ್ರೀನಿವಾಸ್ ಇತ್ತೀಚೆಗೆ ಇಹಲೋಕ ತ್ತಜಿಸಿದರು. ಅಣ್ಣನ ಜಾಗವನ್ನು ಹಂಚಿಕೊಳ್ಳುವ ಬಗ್ಗೆ ತಮ್ಮಂದಿರ ನಡುವೆ ಜಗಳ ನಡೆದಿತ್ತು, ಶ್ರೀಕಾಂತ್ ಅಣ್ಣ ಶ್ರೀಧರ್ ಮನೆಯಲ್ಲಿ ಪಾಲು ಕೊಡುವುದಿಲ್ಲ, ಇಲ್ಲೇ ಇದ್ದರೆ ಮುಗಿಸಿಬಿಡುತ್ತೇನೆ ಎಂದು ಧಮ್ಕಿ ಹಾಕಿದ್ದರು. ಇದನ್ನು ಓದಿ..Women: ಮಗನಿಗೆ ಏಳು ವರ್ಷವಾಗಿದ್ದಾಗ ಮತ್ತೊಂದು ಮದೆವೆಯಾದ ಅಪ್ಪ. ಆದರೆ ಆ ಬಾಲಕ ಬೆಳೆದು ದೊಡ್ಡವಾದ ಮೇಲೆ ಮಾಡಿದ್ದೇನು ಗೊತ್ತೇ? ಎರಡನೇ ಹೆಂಡತಿಗೆ ಸುಖವೇ ಮುಖ್ಯ ಆಯ್ತಾ??
ಈ ಕಾರಣಕ್ಕೆ ಶ್ರೀಕಾಂತ್ ಮನೆ ಬಿಟ್ಟು, ನಿಜಾಮಾಬಾದ್ (Nizamabad) ಗೆ ಹೋಗಿ, ತಾಯಿ ಜೊತೆಗಿದ್ದು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು, 2019ರಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಶ್ರೀಕಾಂತ್, ಕೋವಿಡ್ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ತಮ್ಮ ಚಿಕಿತ್ಸೆಗಾಗಿ ವಾರಂಗಲ್ ನಲ್ಲಿರುವ ಮನೆ ಮಾಡಿ ಬಂದ ಹಣವನ್ನು ಚಿಕಿತ್ಸೆಗೆ ಉಪಯೋಗಿಸಿಕೊಳ್ಳಬೇಕು ಎಂದು ಬಂದಾಗ ಅಣ್ಣ ಶ್ರೀಧರ್ ಬೆದರಿಕೆ ಹಾಕಿದ್ದಾರೆ.. ಆಗ ಶ್ರೀಕಾಂತ್ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಶ್ರೀಧರ್ ಪೊಲೀಸರ ಎದುರು ತಮ್ಮ ಜಮೀನು ಮಾರುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದು, ಶ್ರೀಕಾಂತ್ ಮನೆ ಮಾರಲು ಸಿದ್ಧತೆ ಮಾಡಿಕೊಂಡು, ಇಬ್ಬರು ಮಾರಾಟಗಾರರನ್ನು ಕರೆದುಕೊಂಡು ಬಂದಿದ್ದಾರೆ..
ಆಗ ಶ್ರೀಧರ್ ಪ್ರೀತಿಯಿಂದ ತಮ್ಮನನ್ನು ಮನೆ ಒಳಗೆ ಬಾ ಎಂದು ಕರೆದಿದ್ದಾರೆ, ಅಣ್ಣನ ಮಾತು ನಂಬಿ ಶ್ರೀಕಾಂತ್ ಮನೆಯೊಳಗೆ ಹೋದಾಗ, ಅವರನ್ನು ರೂಮ್ ಒಳಗೆ ಹಾಕಿ ಚೆನ್ನಾಗಿ ಹೊಡೆದಿದ್ದಾರೆ, ಅಷ್ಟೇ ಅಲ್ಲದೆ ಪೆಟ್ರೋಲ್ ಹಾಕಿ ದಾರುಣವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ. ಆ ಸ್ಥಿತಿಯಲ್ಲೇ ಶ್ರೀಕಾಂತ್ ಹೊರಬಂದಾಗ, ಜನರಿದ್ದರು ಕೂಡ ಅವರ ಎದುರಲ್ಲೇ ಹೊಡೆದು ತಮ್ಮನನ್ನು ಮುಗಿಸಿಬಿಟ್ಟಿದ್ದಾನೆ. ಈ ವಿಷಯ ಪೊಲೀಸರಿಗೆ ಗೊತ್ತಾಗಿ, ಮನೆ ಹತ್ತಿರ ಬಂದಿದ್ದು, ಮೃತ ಶ್ರೀಕಾಂತ್ ಅವರ ಪತ್ನಿ ನೀಡಿದ ದೂರಿನ ಅನುಸಾರ ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಆಸ್ತಿಯಾಗಿ ಸ್ವಂತ ತಮ್ಮನಿಗೆ ಈ ರೀತಿ ಮಾಡುವ ಅಣ್ಣನನ್ನು ಏನು ಮಾಡಬೇಕು? ಇದನ್ನು ಓದಿ..Business: ಆಧಾರ್ ಕಾರ್ಡ್ ಅನ್ನೇ ಬಂಡವಾಳ ಮಾಡಿಕೊಂಡು ಬಿಸಿನೆಸ್ ಆರಂಭಿಸಿ: ಸ್ವಂತ ಊರಿನಲ್ಲಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??
Comments are closed.