Kannada Story: ಡಾಕ್ಟರ್ ಎಂದು ಹೇಳಿ ಒಂದೇ ಕಡೆ 4 ವರ್ಷ ಇದ್ದ ಡಾಕ್ಟರ್. ಕೊನೆಗೆ ಚಿಕಿತ್ಸೆಗೆ ಹೋದವರಿಗೆ ಏನು ಮಾಡಿದ್ದಾನೆ ಗೊತ್ತೆ? ಶಾಕ್ ಆಗಿ ಶೇಕ್ ಆದ ಗ್ರಾಮಸ್ಥರು.

Kannada Story: ಈ ಪ್ರಪಂಚದಲ್ಲಿ ಮೋಸ ಹೋಗುವ ಜನರು ಇರುವವರೆಗೂ ಮೋಸ ಮಾಡುವವರು ಖಂಡಿತವಾಗಿಯೂ ಇದ್ದೇ ಇರುತ್ತಾರೆ. ಈಗ ಯಾರನ್ನು ಕೂಡ ನಂಬಲು ಆಗುವುದಿಲ್ಲ, ಒಳ್ಳೆಯವರು ಎಂದು ನಂಬಿದ ಎಲ್ಲರೂ ಒಳ್ಳೆಯವರಾಗಲು ಸಾಧ್ಯವಿಲ್ಲ. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದ್ದು, ಸಿರಿಸಿಲ್ಲಾ ಜಿಲ್ಲೆಯಲ್ಲಿ ಆರ್.ಎಂ.ಪಿ ಡಾಕ್ಟರ್ ಒಬ್ಬರು ಜನರನ್ನು ನಂಬಿಸಿ ಏನು ಮಾಡಿದ್ದಾರೆ ಗೊತ್ತಾ?

coup wom Kannada Story 3 Kannada Story:
Kannada Story: ಡಾಕ್ಟರ್ ಎಂದು ಹೇಳಿ ಒಂದೇ ಕಡೆ 4 ವರ್ಷ ಇದ್ದ ಡಾಕ್ಟರ್. ಕೊನೆಗೆ ಚಿಕಿತ್ಸೆಗೆ ಹೋದವರಿಗೆ ಏನು ಮಾಡಿದ್ದಾನೆ ಗೊತ್ತೆ? ಶಾಕ್ ಆಗಿ ಶೇಕ್ ಆದ ಗ್ರಾಮಸ್ಥರು. 2

ಈ ಡಾಕ್ಟರ್ ಬದುಕು ಕಟ್ಟಿಕೊಳ್ಳುವ ಸಲುವಾಗಿ ಸಿರಿಸಿಲ್ಲಾ ಜಿಲ್ಲೆಗೆ ಬಂದರು, ಈ ಡಾಕ್ಟರ್ ಕೊಲ್ಕತ್ತಾ ಮೂಲದವರಾಗಿದ್ದು, ಸಿರಿಸಿಲ್ಲಾ ಜಿಲ್ಲೆಯ ವೇಮುಲವಾಡ ಎನ್ನುವ ಊರಿಗೆ ಬಂದು, ತಮ್ಮದೇ ಆದ ಸ್ಥಳದಲ್ಲಿ ಸಣ್ಣದಾಗಿ ಆಸ್ಪತ್ರೆ ನಿರ್ಮಿಸಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ವ್ಯಕ್ತಿ ಎಲ್ಲರಿಗೂ ಗುಣ ಆಗುವ ಹಾಗೆ ಔಷಧಿ ನೀಡುವ ಮೂಲಕ ಸ್ಥಳೀಯ ಜನರ ನಂಬಿಕೆಯನ್ನು ಗಳಿಸಿಕೊಂಡಿದ್ದನು. ಇದನ್ನು ಓದಿ..Crime News: ಪ್ರೀತಿ ಇಂದ ಮನೆಗೆ ಬಾ ಎಂದು ಕರೆದರು. ಈತ ಕೂಡ ಖುಷಿಯಲ್ಲಿಯೇ ಹೋದ. ಆದರೆ ಕೊನೆಗೆ ಏನಾಗಿ ಹೋಯ್ತು ಗೊತ್ತೇ?

ಆ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು, ತಾನು ಸ್ವಂತ ಮನೆ ಕಟ್ಟುತ್ತಿರುವುದಾಗಿ ಹೇಳಿ ಒಂದು ನಾಲ್ಕೈದು ತಿಂಗಳುಗಳಿಂದ ಜನರ ಹತ್ತಿರ ಹಣ ಪಡೆದಿದ್ದಾನೆ. ತನ್ನ ಮನೆ ಪೂರ್ತಿಯಾದ ನಂತರ ಎಲ್ಲರಿಂದ ಪಡೆದಿರುವ ಹಣವನ್ನು ವಾಪಸ್ ಕೊಡುವುದಾಗಿ ತಿಳಿಸಿದ್ದಾನೆ. ಒಟ್ಟು 12 ಜನರಿಂದ ಹಣ ಪಡೆದಿದ್ದು, ಒಬ್ಬೊಬ್ಬರಿಂದ 5 ರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾನೆ. ಕೆಲವರು ಇನ್ನು ಹೆಚ್ಚಿನ ಹಣ ನೀಡಿದ್ದಾರೆ..

ಕೆಲ ಜನರು ಆತನ ಹತ್ತಿರ ಹೋಗಿ, ಹಣ ವಾಪಸ್ ಕೊಡಬೇಕು ಎಂದು ಕೇಳಿದ್ದಕ್ಕೆ, ತನ್ನ ಹೆಂಡತಿ ಹಾಗೂ ಮಕ್ಕಳು ಕೋಲ್ಕತ್ತಾಗೆ ಹೋಗಿ ಅಲ್ಲಿ ಜೀವನ ನಡೆಸುತ್ತಾರೆ, ನಾನು ಇಲ್ಲೇ ಇರುತ್ತೇನೆ ನಿಮ್ಮ ಹಣವನ್ನೆಲ್ಲಾ ವಾಪಸ್ ಕೊಡುತ್ತೇನೆ ಎಂದು ಜನರ ಹತ್ತಿರ ನಂಬಿಸಿದನು. ಆದರೆ ಇದ್ದಕ್ಕಿದ್ದ ಹಾಗೆ ಹೆಂಡತಿ ಮಕ್ಕಳ ಜೊತೆಗೆ ತಾನು ಕೂಡ ಕೋಲ್ಕತ್ತಾಗೆ ಓಡಿ ಹೋಗಿದ್ದಾನೆ, ಡಾಕ್ಟರ್ ಬಗ್ಗೆ ಯಾವ ಸುಳಿವು ಸಿಗದೆ ಕಂಗಾಲಾದ ಜನರು ಪೊಲೀಸರ ಮೊರೆ ಹೋಗಿ, ಆತನ ವಿರುದ್ಧ ದೂರು ನೀಡಿದ್ದು, ಪೊಲೀಸರು ಈಗ ತನಿಖೆ ಶುರು ಮಾಡಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.