KGF3: KGF 3 ನೇ ಚಿತ್ರಕ್ಕೆ ದಿಡೀರ್ ಎಂದು ಟಾಪ್ ನಟಿಗೆ ಕರೆ ಮಾಡಿದ ತಂಡ: ಹೇಳಿದ್ದೇನು ಗೊತ್ತೇ?? ರವೀನಾ ಟಂಡನ್ ಗೆ ಕರೆ ಮಾಡಿ ಹೇಳಿದ್ದೇನು ಗೊತ್ತೇ?

KGF3: ಕೆಜಿಎಫ್2 (KGF2) ಸಿನಿಮಾ ತೆರೆಕಂಡು ಒಂದು ವರ್ಷ ಕಳೆದಿದೆ, 2022ರ ಏಪ್ರಿಲ್ 14ರಂದು ತೆರೆಕಂಡ ಕೆಜಿಎಫ್ ಸಿನಿಮಾ ವಿಶ್ವಮಟ್ಟದಲ್ಲಿ ಎಷ್ಟು ದೊಡ್ಡದಾಗಿ ಸದ್ದು ಮಾಡಿತು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ನಾವೆಲ್ಲರೂ ಹೆಮ್ಮೆಪಡುವ ಹಾಗೆ ಮಾಡಿದ ಕೆಜಿಎಫ್ ಸಿನಿಮಾ ಒಂದು ವರ್ಷ ಪೂರೈಸಿದ್ದನ್ನು ಚಿತ್ರತಂಡ ಸರಳವಾಗಿ ಆಚರಣೆ ಮಾಡಿದೆ, ಸಿನಿಮಾದಲ್ಲಿ ನಟಿಸಿದ ಕಲಾವಿದರಿಗೆ ಕರೆಮಾಡಿ ವಿಶ್ ಮಾಡಿದ್ದಾರೆ. ಕೆಜಿಎಫ್2 ಸಿನಿಮಾದ ಪ್ರಮುಖ ಪಾತ್ರ ರಮಿಕಾ ಸೇನ್. ಈ ಪಾತ್ರದಲ್ಲಿ ನಟಿಸಿದ್ದು ಬಾಲಿವುಡ್ ಬ್ಯೂಟಿ ರವೀನಾ ಟಂಡನ್ (Raveena Tandon).

raveena tandana kgf updates kannada news KGF3:

ಇವರು ಇತ್ತೀಚೆಗೆ ಪಾಲ್ಗೊಂಡಿದ್ದ ಸಂದರ್ಶನದಲ್ಲಿ ಕೆಜಿಎಫ್3 ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಸಿನಿಮಾ ಒಂದು ವರ್ಷ ಪೂರೈಸಿದ ದಿನ, ಯಶ್ (Yash) ಅವರು, ಪ್ರಶಾಂತ್ ನೀಲ್ (Prashanth Neel) ಅವರು ಹಾಗೂ ರಾಧಿಕಾ ಪಂಡಿತ್ (Radhika Pandit) ಅವರು ಕರೆಮಾಡಿ ಮಾತನಾಡಿದ್ದರ ಬಗ್ಗೆ ಮಾತನಾಡಿದ್ದಾರೆ ನಟಿ ರವೀನಾ ಟಂಡನ್. “ಕೆಜಿಎಫ್2 ನೆಕ್ಸ್ಟ್ ಲೆವೆಲ್ ಸಿನಿಮಾ ಆಗಿದ್ದು, ಆಕ್ಟ್ ಮಾಡುವಾಗ ನಾನು ಪ್ರತಿಸಲ ಪ್ರಶಾಂತ್ ಅವರನ್ನ ಸರಿಯಾಗಿ ಮಾಡ್ತಿದ್ದೀನಾ ಅಂತ ಕೇಳ್ತಿದ್ದೆ.. ಅವರು ಇನ್ನು ಸ್ವಲ್ಪ ಜಾಸ್ತಿ ಮಾಡಿ ಅಂತಿದ್ರು, ನಾನು ನನ್ನ ಕೈಯಲ್ಲಿ ಓವರ್ ಆಕ್ಟಿಂಗ್ ಮಾಡಿಸುತ್ತಿದ್ದಾರಾ ಅಂದುಕೊಂಡಿದ್ದೆ. ಆದರೆ ಸಿನಿಮಾ ಬಿಡುಗಡೆ ಆದಮೇಲೆ ಸಂಜಯ್ ದತ್ ಅವರ ಪಾತ್ರಕ್ಕೆ ಮತ್ತು ನನ್ನ ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ತು. ನನ್ನ ಅಪ್ಪ ಹೇಳುತ್ತಿದ್ದ ಹಾಗೆ, ನಾನು ನಿರ್ದೇಶಕರ ಮೇಲೆ ನಂಬಿಕೆ ಇಟ್ಟೆ, ನನಗೆ ಒಳ್ಳೆಯದಾಯಿತು..”ಎಂದಿದ್ದಾರೆ ರವೀನಾ ಟಂಡನ್. ಇದನ್ನು ಓದಿ..Krithi Shetty: ಸ್ವಲ್ಪ ತೋರಿಸು, ಅಂದಿದ್ದಕ್ಕೆ ನಿರ್ಮಾಪಕರ ಬಳಿ ಅಷ್ಟೊಂದು ದೊಡ್ಡ ಮೊತ್ತ ಡಿಮ್ಯಾಂಡ್ ಮಾಡಿದ ಕೃತಿ: ಚಿಕ್ಕ ಹುಡುಗಿಗೆ ಇವೆಲ್ಲ ಬೇಕಿತ್ತಾ?

“ಕೆಜಿಎಫ್2 ಮೊದಲ ವಾರ್ಷಿಕೋತ್ಸವದಲ್ಲಿ ನನಗೆ ಮೊದಲು ಮೆಸೇಜ್ ಮಾಡಿದ್ದು ಯಶ್ ಅವರ ಪತ್ನಿ ರಾಧಿಕಾ ಪಂಡಿತ್, ನೀವಲ್ಲದೆ ಬೇರೆ ಯಾರನ್ನು ಆ ಪಾತ್ರದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ, ನಮ್ಮೆಲ್ಲರ ಜೀವನವನ್ನ ಬದಲಾಯಿಸಿದ್ದಕ್ಕೆ ಧನ್ಯವಾದಗಳು..ಅಂತ ಮೆಸೇಜ್ ಮಾಡಿದ್ರು.. ಆಮೇಲೆ ಯಶ್ ಕರೆ ಮಾಡಿದ್ರು, ನಾವಿಬ್ಬರು ಹ್ಯಾಪಿ ಆನಿವರ್ಸರಿ ಅಂತ ವಿಶ್ ಮಾಡಿದ್ವಿ.. ಆಮೇಲೆ ಯಶ್, ಇನ್ನುಮೇಲೆ ನಾವು ಕೆಜಿಎಫ್3 ಗೆ ರೆಡಿ ಆಗಬೇಕು ಅಂದ್ರು..ಆಗ ನಾನು ಕೆಜಿಎಫ್3 ನಲ್ಲಿ ನನ್ನನ್ನ ಸಾಯಿಸಬೇಡಿ ಅಂತ, ಮೊದಲ ಸೀನ್ ನಲ್ಲೇ ನನಗೆ ಗುಂಡು ಹೊಡೆಯುವ ಹಾಗೆ ಮಾಡಬೇಡಿ ಅಂತ ತಮಾಷೆ ಮಾಡಿದೆ..

ಅಂದು ಪ್ರಶಾಂತ್ ಕೂಡ ಕಾಲ್ ಮಾಡಿ, ನೀವು ನಟಿಸಿದ ಪ್ರತಿ ದೃಶ್ಯ, ಪ್ರತಿ ಡೈಲಾಗ್ ಎಲ್ಲವನ್ನು ನೀವು ಅದ್ಭುತವಾಗಿ ನಿಭಾಯಿಸಿದ್ರಿ, ಬಾಂಬೆ ನಟಿಯ ಜೊತೆಗೆ ಕೆಲಸ ಹೇಗಿರುತ್ತದೆ ಅಂತ ಮೊದಲು ನನಗೆ ಭಯ ಆಗಿತ್ತು. ಆದರೆ ನಿಮ್ಮಿಂದ ಒಳ್ಳೆಯ ಸಹಕಾರ ಸಿಕ್ತು. ನಿಮ್ಮ ಜೊತೆಗೆ ಕೆಲಸ ಮಾಡಿದ್ದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮತ್ತೆ ನಿಮ್ಮ ಜೊತೆ ಕೆಲಸ ಮಾಡಬೇಕು ಅಂತ ಆಸೆ ಇದೆ..ಎಂದು ಪ್ರಶಾಂತ್ ನೀಲ್ ಅವರು ಹೇಳಿದ್ದಾಗಿ ತಿಳಿಸಿದ್ದಾರೆ ರವೀನಾ ಟಂಡನ್. ರಮಿಕಾ ಸೇನ್ ಅವರಿಂದ ಈ ಮಾತು ಕೇಳಿದಮೇಲೆ, ಅಭಿಮಾನಿಗಳಲ್ಲಿ ಕುತೂಹಲ ಇನ್ನು ಜಾಸ್ತಿಯಾಗಿದೆ. ಇದನ್ನು ಓದಿ..Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

Comments are closed.