Dk Shivakumar: ಸಾವಿರಾರು ಕೋಟಿ ಒಡೆಯ; ಈಗ ಮುಖ್ಯ ಮಂತ್ರಿ ಕನಸು ಕಾಣುತ್ತಿರುವ ಡಿಕೆಶಿ ಓದಿರುವುದು ಏನು ಗೊತ್ತೇ?? ವಿದ್ಯಾರ್ಹತೆ ಕೇಳಿದರೆ ಶಾಕ್ ಆಗ್ತೀರಾ.
Dk Shivakumar: ನಮ್ಮ ರಾಜ್ಯದ ಪ್ರಬಲ ರಾಜಕಾರಣಿಗಳ ಪೈಕಿ ಡಿಕೆ ಶಿವಕುಮಾರ್ ಅವರು ಕೂಡ ಒಬ್ಬರು. ಡಿಕೆಶಿ ಅವರು ಬಹಳಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು, ಹಲವು ಸಾರಿ ಎಲೆಕ್ಷನ್ ನಲ್ಲಿ ಗೆದ್ದು, ಜನಸೇವೆ ಮಾಡಿದ್ದಾರೆ. ಈಗ ಡಿಕೆ ಶಿ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಎಲೆಕ್ಷನ್ ನಲ್ಲಿ ಡಿಕೆ ಶಿವಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ.

ಈ ಬಾರಿ ಇವರು ಕನಕಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದು, ನಾಮಪತ್ರ ಸಲ್ಲಿಕೆಯಾಗಿ, ಕ್ಯಾಂಪೇನ್ ಕೂಡ ಭರದಿಂದ ಸಾಗುತ್ತಿದೆ. ನಾಮಪತ್ರ ಸಲ್ಲಿಕೆಯಾದ ನಂತರ ಡಿಕೆಶಿ ಅವರ ವಿದ್ಯಾರ್ಹತೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇವರು ಏನು ಓದಿದ್ದಾರೆ ಗೊತ್ತಾ? ಇಂದು ನಿಮಗೆ ತಿಳಿಸುತ್ತೇವೆ.. ಡಿಕೆಶಿ ಅವರ ಪೂರ್ತಿ ಹೆಸರು, ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್. ಶಾಲೆಯ ಸಮಯದಿಂದ ಓದಿನಲ್ಲಿ ಹಾಗೂ ಸ್ಪೋರ್ಟ್ಸ್ ನಲ್ಲಿ ಎರಡರಲ್ಲಿ ಡಿಕೆಶಿ ಅವರು ಮುಂದಿದ್ದರು.
ಕ್ರೀಡೆಗಳಲ್ಲಿ ಕೂಡ ಕ್ಯಾಪ್ಟನ್ ಆಗಿ ತಂಡವನ್ನು ಲೀಡ್ ಮಾಡುವುದು ಇವರಿಗೆ ಗೊತ್ತಿತ್ತು. ಡಿಕೆಶಿ ಅವರು ಬೆಂಗಳೂರಿನ ವಿದ್ಯಾವರ್ಧಕ ಶಾಲೆಯಲ್ಲಿ 10ನೇ ತರತಿ ಮುಗಿಸಿದ್ದಾರೆ. ಬೆಂಗಳೂರಿನಲ್ಲಿ ಇರುವ ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯಲ್ಲಿ ಪಿಯುಸಿ ಓದಿದ್ದಾರೆ. ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಓದಿ, ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಹ ಓದಿದ್ದಾರೆ..
ಮೈಸೂರಿನಲ್ಲಿ ರಾಜ್ಯ ಶಾಸ್ತ್ರ ವಿಷಯದಲ್ಲಿ ಮಾಸ್ಟರ್ಸ್ ಮಾಡಿ, ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಬಳಿಕ ರಾಜಕೀಯದಲ್ಲಿ ಎಷ್ಟು ಹೆಸರು ಮಾಡಿದ್ದಾರೆ ಎಂದು ನಮಗೆಲ್ಲ ಗೊತ್ತೇ ಇದೆ. ಡಿಕೆಶಿ ಅವರು ತಮ್ಮ ಮಗಳು ತಮ್ಮ ಐಶ್ವರ್ಯ ಅವರಿಗೆ ಇಂಜಿನಿಯರಿಂಗ್ ಓದಿಸಿದ್ದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು ಎಂದು ಶಾಲೆಗಳನ್ನು ಸಹ ಸ್ಥಾಪಿಸಿದ್ದಾರೆ.
Comments are closed.