Ramya Divya Spandana:ಒಂದೇ ಬಾರಿಗೆ ದರ್ಶನ್, ಸುದೀಪ್ ಅಭಿಮಾನಿಗಳನ್ನು ಕೆಣಕಿದ ರಮ್ಯಾ: ಕಾಂಗ್ರೆಸ್ ಬೆಂಬಲಿಸಲು ಹೋಗಿ ಮಾಡಿದ ಎಡವಟ್ಟು ಏನು ಗೊತ್ತೇ? ಇವೆಲ್ಲ ಬೇಕಿತ್ತಾ??

Ramya Divya Spandana: ಚಂದನವನದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಅವರು ಸಿನಿಮಾ ಜೊತೆಗೆ ರಾಜಕೀಯದಲ್ಲೂ ಸಕ್ರಿಯವಾಗಿರುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಮುಂದಿನ ನಮ್ಮ ರಾಜ್ಯದಲ್ಲಿ ಲೋಕಸಭ ಚುನಾವಣೆ ನಡೆಯಲಿದ್ದು, ಈಗಾಗಲೇ ಪ್ರಚಾರಗಳು ಅಭ್ಯರ್ಥಿಯ ಘೋಷಣೆ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ. ಎಲೆಕ್ಷನ್ ಕ್ಯಾಂಪೇನ್ ಸಮಯದಲ್ಲಿ ಸಿನಿಮಾ ತಾರೆಯರು ಪ್ರಚಾರಕ್ಕೆ ಬರುವುದು ಕಾಮನ್. ವಿವಿಧ ಪಕ್ಷಗಳು ಸ್ಟಾರ್ ಗಳನ್ನು ಪ್ರಚಾರಕ್ಕಾಗಿ ಕರೆಸುತ್ತಾರೆ. ಇದೀಗ ಕಿಚ್ಚ ಸುದೀಪ್ (Sudeep) ಅವರು ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೋಸ್ಕರ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

darshan sudeep fans are not happy ramya Ramya Divya Spandana:
Ramya Divya Spandana:ಒಂದೇ ಬಾರಿಗೆ ದರ್ಶನ್, ಸುದೀಪ್ ಅಭಿಮಾನಿಗಳನ್ನು ಕೆಣಕಿದ ರಮ್ಯಾ: ಕಾಂಗ್ರೆಸ್ ಬೆಂಬಲಿಸಲು ಹೋಗಿ ಮಾಡಿದ ಎಡವಟ್ಟು ಏನು ಗೊತ್ತೇ? ಇವೆಲ್ಲ ಬೇಕಿತ್ತಾ?? 2

ನಟ ದರ್ಶನ್ (Darshan) ಅವರು ಸಹ ಬರಲಿದ್ದಾರೆ, ನಟಿಯರಾದ ಶ್ರುತಿ (Shruti) ಅವರು ಹಾಗೂ ಪ್ರೇಮ (Prema) ಅವರು ಸಹ ಬಿಜೆಪಿ (BJP) ಪರವಾಗಿ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದ ಲಿಸ್ಟ್ ನಲ್ಲಿ, ನಟಿ ರಮ್ಯಾ ಹಾಗೂ ನಟ ಸಾಧು ಕೋಕಿಲ (Sadhu Kokila) ಅವರು ಇದ್ದಾರೆ. ಹೀಗಿರುವಾಗ ನಟಿ ರಮ್ಯಾ ಅವರು ಇದೀಗ ನೀಡಿರುವ ಇಂಟರ್ವ್ಯೂ ಒಂದರಲ್ಲಿ ಸಿನಿಮಾ ಸ್ಟಾರ್ ಗಳು ಹೀಗೆ ಬಂದು ಪ್ರಚಾರ ಮಾಡುವ ಬಗ್ಗೆ ಶಾಕಿಂಗ್ ಹೇಳಿದ್ದಾರೆ.. “ಸಿನಿಮಾ ಕಲಾವಿದರು ಜನರಿಗೆ ಇಂಥ ಪಕ್ಷಕ್ಕೆ ಮತ ಹಾಕಿ ಅಂತ influence ಮಾಡ್ತಾರೆ ಅಂತ ನನಗೆ ಅನ್ನಿಸೋದಿಲ್ಲ..

ಇದನ್ನು ಓದಿ: Samantha Ruth Prabhu: ಮದುವೆ ಆಯಿತು, ವಿಚ್ಚೇದನ ಕೂಡ ಆಯಿತು: ಆದರೂ ಸಮಂತಾ ಮೈ ಮೇಲೆ ನಾಗ ಚೈತನ್ಯ ಟ್ಯಾಟೂ ಯಾಕೆ ಇದೆ ಗೊತ್ತೇ? ಇನ್ನು ಇರಲು ಕಾರಣವೇನು ಗೊತ್ತೆ?

ಅವರನ್ನ ಕರೆಸೋದು ಹೆಚ್ಚು ಜನ ಸೇರೋ ಹಾಗೆ ಮಾಡಲು.. ಅವರ ಮಾತು ಕೇಳಿ ಜನ ವೋಟ್ ಹಾಕೋದಿಲ್ಲ ಅಂತ ರಾಜಕಾರಣಿಗಳಿಗೂ ಗೊತ್ತಿದೆ. ಸಿನಿಮಾ ಕಲಾವಿದರನ್ನ ಕರೆಸಿದರೆ, ಅವರನ್ನು ನೋಡೋದಕ್ಕಾಗಿಯೇ ಹೆಚ್ಚು ಜನ ಬರ್ತಾರೆ, ಇಲ್ಲಾಂದ್ರೆ ಜನರನ್ನ ಸೇರಿಸುವ ಸಲುವಾಗಿಯೇ ಹಣ ಕೊಡಬೇಕಾಗುತ್ತದೆ.. ಸಿನಿಮಾ ನಟರು ಬಂದು ಜನ ಸೇರಿದಾಗ, ಅಭ್ಯರ್ಥಿ ತಮ್ಮ ವಿಷಯಗಳನ್ನು ಜನರಿಗೆ ಹೇಗೆ ತಲುಪಿಸುತ್ತಾರೆ ಎನ್ನುವುದು ಮುಖ್ಯ. ಕಲಾವಿದರು ಹೇಳಿದ ಮಾತ್ರಕ್ಕೆ ಜನರು ವೋಟ್ ಹಾಕೋದಿಲ್ಲ.. ಜನರನ್ನು ಸೇರಿಸಲು ಅವರಿಂದ ಸಹಾಯ ಆಗುತ್ತೆ ಅಷ್ಟೇ..” ಎಂದು ನಟಿ ರಮ್ಯಾ ಹೇಳಿದ್ದಾರೆ.

ಕಿಚ್ಚ ಸುದೀಪ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವ ಬಗ್ಗೆ ರಮ್ಯಾ ಅವರನ್ನು ಕೇಳಿದಾಗ, “ಸುದೀಪ್ ನನ್ನ ಆತ್ಮೀಯ ಸ್ನೇಹಿತರು. ಈ ವಿಷಯದ ಬಗ್ಗೆ ಮುಂಚೆ ಚರ್ಚೆ ಮಾಡಿದ್ರು, ಬೇರೆ ಪಕ್ಷಗಳು ಕೂಡ, ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಆತ್ಮೀಯವಾಗಿ ಇರೋದ್ರಿಂದ ಅವರ ಪರವಾಗಿ ಕ್ಯಾಂಪೇನ್ ಮಾಡ್ತಿದ್ದಾರೆ. ಅವರು ರಾಜಕೀಯಕ್ಕೆ ಬರಬೇಕು, ಜನರಲ್ಲಿ ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಅವರಲ್ಲಿ ಇದೆ..” ಎಂದು ಸುದೀಪ್ ಅವರ ಬಗ್ಗೆ ಹೇಳಿದ್ದಾರೆ ನಟಿ ರಮ್ಯಾ. ರಮ್ಯಾ ಅವರ ಈ ಹೇಳಿಕೆ ದರ್ಶನ ಹಾಗು ಸುದೀಪ್ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನು ಓದಿ: Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

Comments are closed.