Naaga chaitanya: ನಾಗ ಚೈತನ್ಯ ಸಮಂತಾ ರವರನ್ನು ಪ್ರೀತಿಸಲು ಕಾರಣ ಏನಂತೆ ಗೊತ್ತೇ?? ಕಾರಣ ಕೇಳಿದರೆ ಶಾಕ್ ಆಗಿ, ನೀರು ಕುಡಿತೀರಾ. ಸಮಂತಾ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?
Naaga Chaitanya: ತೆಲುಗು ಚಿತ್ರರಂಗದ ಕ್ಯೂಟ್ ಜೋಡಿ ನಟಿ ಸಮಂತಾ (Samantha) ಹಾಗೂ ನಟ ನಾಗಚೈತ್ಯನ್ಯ (Nagachaitanya) ಇಬ್ಬರು ಕೂಡ ಐದಾರು ವರ್ಷಗಳ ಕಾಲ ಪ್ರೀತಿಸಿ 2017ರ ಆಕ್ಟೊಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಇವರಿಬ್ಬರ ಮದುವೆ ಡೆಸ್ಟಿನೇಷನ್ ವೆಡ್ಡಿಂಗ್ ಆಗಿತ್ತು. ಬಹಳ ಪ್ರೀತಿಯಿಂದ ಚೆನ್ನಾಗಿದ್ದ ಜೋಡಿ, ಮದುವೆಯಾಗಿ 4 ವರ್ಷಗಳು ಕಳೆಯುವುದಕ್ಕಿಂತ ಮೊದಲೇ ವಿಚ್ಚೇದನ ಪಡೆದು ದೂರವಾದರು.

ಇವರಿಬ್ಬರು ದೂರವಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ಇಬ್ಬರು ಕೂಡ ಈಗ ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಅವರು ಮಯೋಸೈಟಿಸ್ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದರು, ಈಗ ಚೇತರಿಸಿಕೊಂಡು, ಸಿನಿಮಾ ಶೂಟಿಂಗ್ ಹಾಗೂ ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ನಾಗಚೈತನ್ಯ ಅವರು ಕೂಡ ತಮ್ಮ ಸಿನಿಮಾ ಹಾಗೂ ವೆಬ್ ಸೀರೀಸ್ ಚಿತ್ರೀಕರಣಗಳಲ್ಲಿ ಬ್ಯುಸಿ ಆಗಿದ್ದಾರೆ.
ಈ ಜೋಡಿಯ ಬಗ್ಗೆ ಒಂದು ಕುತೂಹಲಕಾರಿ ಪ್ರಶ್ನೆ ಜನರಲ್ಲಿತ್ತು, ಅದೇನೆಂದರೆ, ನಾಗಚೈತನ್ಯ ಅವರು ಸಮಂತಾ ಅವರನ್ನೇ ಪ್ರೀತಿಸಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇತ್ತು, ಆ ಪ್ರಶ್ನೆಗೆ ಸಮಂತಾ ಅವರು ಕೊಟ್ಟ ಏನು ಗೊತ್ತಾ? ಇದೊಂದು ಹಳೆಯ ಇಂಟರ್ವ್ಯೂ, ನಾಗಚೈತನ್ಯ ಹಾಗೂ ರಾಕುಲ್ ಪ್ರೀತ್ ಸಿಂಗ್ ಜೊತೆಯಾಗಿ ನಟಿಸಿದ ಸಿನಿಮಾ ಪ್ರಚಾರದ ಸಮಯದಲ್ಲಿ ಇಂಟರ್ವ್ಯೂ ಒಂದರಲ್ಲಿ ಸಮಂತಾ ಅವರಿಗೆ ಕರೆ ಮಾಡಬೇಕು ಎಂದು ನಾಗಚೈತನ್ಯ ಅವರನ್ನು ಕೇಳಲಾಯಿತು.
ಸ್ಯಾಮ್ ಅವರಿಗೆ ಕರೆಮಾಡಿ, ಪ್ರಪಂಚದಲ್ಲಿ ಎಷ್ಟೋ ಜನ ಹುಡುಗಿಯರಿದ್ದರು ನಾನು ನಿನ್ನನ್ನೇ ಯಾಕೆ ಪ್ರೀತಿಸಿದೆ ಎಂದು ಚೈತನ್ಯ ಅವರು ಕೇಳಬೇಕಿತ್ತು, ಹಾಗೆ ಚೈತನ್ಯ ಅವರು ಕೇಳಿದಾಗ, ಸಮಂತಾ ಅವರು ‘ನಾನು ಬೇರೆ ಆಪ್ಶನ್ ಕೊಡಲೇ ಇಲ್ಲ..’ ಎಂದಿದ್ದಾರೆ. ಆಗ ನಾಗಚೈತನ್ಯ ಅವರು, ‘ನನಗೆ ಬೇರೆ ಆಪ್ಶನ್ ಕೂಡ ಬೇಡ..’ ಎಂದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಎಷ್ಟು ಮುದ್ದಾಗಿದ್ದ ಜೋಡಿ ಯಾಕೆ ಬೇರೆಯಾದರು ಎಂದು ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ.
Comments are closed.